ಕೇರಳ: ಕಿಲ್ಲರ್ ಕೊರೊನಾಗೆ ಕೇರಳದ ಮಲಪ್ಪುರಂನಲ್ಲಿ ನಾಲ್ಕು ತಿಂಗಳ ಹೆಣ್ಣು ಮಗು ಬಲಿಯಾಗಿದೆ.
ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದ ಕಂದಮ್ಮನಿಗೆ ನಿನ್ನೆಯಷ್ಟೇ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಇಂದು ಬೆಳಗಾಗುತ್ತಿದ್ದಂತಯೇ ಮೃತಪಟ್ಟಿದೆ.
ಹೃದಯ ಸಂಬಂಧಿ ಸಮಸ್ಯೆಯಿಂದ ಕಳೆದ 3 ತಿಂಗಳಿನಿಂದ ಮಗು ಚಿಕಿತ್ಸೆ ಪಡೆಯುತ್ತಿತ್ತು. ಅಲ್ಲದೇ ನ್ಯುಮೋನಿಯಾದಿಂದ ಕೂಡ ಬಳಲುತ್ತಿತ್ತು ಎಂದು ಮಲಪ್ಪುರಂ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ನೀಡಿದ್ದಾರೆ.