ಶಾಜಾಪುರ/ಮಧ್ಯಪ್ರದೇಶ:ಮಧ್ಯಪ್ರದೇಶದ ಶಾಜಾಪುರ ಜಿಲ್ಲೆಯ 7 ವರ್ಷದ ಬಾಲಕ 'ವಿಶ್ವದ ಅತಿ ಕಿರಿಯ ಕಂಪ್ಯೂಟರ್ ಪ್ರೊಗ್ರಾಮರ್' ಪ್ರಮಾಣಪತ್ರವನ್ನು ಸ್ವೀಕರಿಸುವ ಮೂಲಕ ಗಿನ್ನಿಸ್ ರೆಕಾರ್ಡ್ ಮಾಡಿದ್ದಾನೆ.
ಇಂಗ್ಲೆಂಡ್ನಲ್ಲಿ 2ನೇ ತರಗತಿಯಲ್ಲಿ ಓದುತ್ತಿರುವ ಮಧ್ಯಪ್ರದೇಶ ಮೂಲದ ಕೌಟಿಲ್ಯ ಕಟಾರಿಯಾ(7) ಪೈಥಾನ್ ಪ್ರೋಗ್ರಾಮಿಂಗ್ ಭಾಷಾ ಪರೀಕ್ಷೆಯನ್ನು ಯಶಸ್ವಿಯಾಗಿ ಮುಗಿಸುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ.
ಕೌಟಿಲ್ಯನ ತಂದೆ ಈಶ್ವರ ಪ್ರಸಾದ್ ಕಟಾರಿಯಾ ಇಂಗ್ಲೆಂಡ್‌ನ ಖಾಸಗಿ ಬ್ಯಾಂಕಿನ ಉಪಾಧ್ಯಕ್ಷರಾಗಿದ್ದಾರೆ. ಇವರೂ ಕೂಡ ಚಿಕ್ಕವರಿದ್ದಾಗಿನಿಂದ ಗ್ಯಾಜೆಟ್‌ಗಳ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದರಂತೆ. ಅಲ್ಲದೇ ಇಂಗ್ಲೆಂಡ್ನಲ್ಲಿ ಕೊರೊನಾ ಲಾಕ್ಡೌನ್ ಹೇರಿದ ವೇಳೆ ಶಾಲೆಗಳು ಮುಚ್ಚಲ್ಪಟ್ಟಿದ್ದರಿಂದ ಮಗ ಕೌಟಿಲ್ಯ ಆನ್‌ಲೈನ್ ಮೂಲಕ ಕಲಿಯುತ್ತಿದ್ದ. ಹೀಗಾಗಿ ಅವನೂ ಕೂಡ ಲ್ಯಾಪ್‌ಟಾಪ್‌ನಲ್ಲಿ ಓದಲು ಪ್ರಾರಂಭಿಸಿದ. ಅವನಿಗೆ ಆಟವಾಡಲು ಹೆಚ್ಚು ಆಸಕ್ತಿ ಇಲ್ಲ. ಆದರೆ, ಪುಸ್ತಕಗಳನ್ನು ಓದುವುದು ಬಹಳ ಇಷ್ಟ. ಹೀಗಾಗಿ ಮೊಬೈಲ್ ಮತ್ತು ಲ್ಯಾಪ್‌ಟಾಪ್‌ನಲ್ಲಿ ಪುಸ್ತಕಗಳನ್ನು ಓದುತ್ತಿರುತ್ತಾನೆ ಎಂದು ತಿಳಿಸಿದ್ರು.
ಈ ಹಿಂದೆ ಅಹಮದಾಬಾದ್ನ ಅರ್ಹಮ್ ಓಮ್ ತಲ್ಸಾನಿಯಾ ಕಿರಿಯ ಕಂಪ್ಯೂಟರ್ ಪ್ರೋಗ್ರಾಮರ್ ಎಂಬ ದಾಖಲೆ ನಿರ್ಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.