ಕರ್ನಾಟಕ

karnataka

ETV Bharat / bharat

ಕಸದ ತೊಟ್ಟಿಯಲ್ಲಿ ಐದು ತಿಂಗಳ ಮಗುವಿನ ಭ್ರೂಣ ಪತ್ತೆ - ಪೊಲೀಸರು ತನಿಖೆ

ಐದು ತಿಂಗಳ ಗಂಡು ಮಗುವಿನ ಭ್ರೂಣವನ್ನು ನಾಯಿಗಳು ಕಸದ ತೊಟ್ಟಿಯಿಂದ ರಸ್ತೆಗೆಳೆದಿದ್ದವು. ಇದನ್ನು ಗಮನಿಸಿದ ಸಾರ್ವಜನಿಕರು ಪೊಲೀಸರಿಗೆ ವಿಚಾರ ಮುಟ್ಟಿಸಿದ್ದರು.

fetal
fetal

By

Published : Jun 11, 2020, 1:11 PM IST

ಚೆನ್ನೈ(ತಮಿಳುನಾಡು) : ಪೆರಂಬೂರ್‌ನ ರಾಘವನ್ ರಸ್ತೆಯಲ್ಲಿ 5 ತಿಂಗಳ ಭ್ರೂಣವೊಂದು ಕಸದ ತೊಟ್ಟಿಯಲ್ಲಿ ಪತ್ತೆಯಾಗಿದೆ. ಕಸದಲ್ಲಿದ್ದ ಭ್ರೂಣವನ್ನು ನಾಯಿಗಳು ರಸ್ತೆಗೆ ಎಳೆದಿರುವುದು ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ. ತಕ್ಷಣ ಅವರು ಸ್ಥಳೀಯ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ.

ಭ್ರೂಣವನ್ನು ಪೊಲೀಸರು ಆಸ್ಪತ್ರೆಗೆ ಕಳುಹಿಸಿದ್ದು, ಅದು ಗಂಡು ಮಗುವಿನ ಭ್ರೂಣವೆಂದು ತಿಳಿದುಬಂದಿದೆ.

ಪ್ಲಾಸ್ಟಿಕ್ ಕವರ್​ನಲ್ಲಿ ಸುತ್ತಿ ಭ್ರೂಣವನ್ನು ಕಸದ ತೊಟ್ಟಿಗೆ ಎಸೆಯಲಾಗಿತ್ತು.

ABOUT THE AUTHOR

...view details