ಕರ್ನಾಟಕ

karnataka

ETV Bharat / bharat

ನಿರ್ಮಾಣ ಹಂತದ ಶೌಚಾಲಯದ ಟ್ಯಾಂಕ್​ಗೆ ಬಿದ್ದು ಐವರ ದುರ್ಮರಣ! - ಐವರ ದುರ್ಮರಣ

ನಿರ್ಮಾಣ ಹಂತದ ಶೌಚಾಲಯದ ಟ್ಯಾಂಕ್‌ನೊಳಗೆ ಕೆಲಸ ಮಾಡುತ್ತಿದ್ದ ವೇಳೆ ವಿಷಾನಿಲ ಸೇವಿಸಿ ಐವರು ಸಾವನ್ನಪ್ಪಿರುವ ಘಟನೆ ನಡೆದಿದೆ.

ಐವರ ದುರ್ಮರಣ

By

Published : Nov 1, 2019, 9:07 PM IST

ಸುಲ್ತಾನಪುರ:ನಿರ್ಮಾಣ ಹಂತದಲ್ಲಿದ್ದ ಶೌಚಾಲಯದ ಟ್ಯಾಂಕ್‌​​ನೊಳಗೆ ಬಿದ್ದು ಐವರು ಸಾವನ್ನಪ್ಪಿರುವ ದಾರುಣ ಘಟನೆ ಉತ್ತರಪ್ರದೇಶದ ಸುಲ್ತಾನಪುರದಲ್ಲಿ ನಡೆದಿದೆ.

ದೋಸ್ತುಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯ ಚಿರಾನಿ ಪ್ಯಾಟಿ ಗ್ರಾಮದಲ್ಲಿ 10 ಅಡಿ ಆಳದ ಶೌಚಾಲಯದ ಕೆಲಸ ನಡೆಯುತ್ತಿತ್ತು. ಈ ವೇಳೆ ಶೌಚಾಲಯದ ಟ್ಯಾಂಕ್​​ನೊಳಗೆ ಇಳಿದು ಕೆಲಸ ಮಾಡುತ್ತಿದ್ದಾಗ ವಿಷಕಾರಿ ಅನಿಲ ಪಸರಿಸಿದೆ. ಈ ವೇಳೆ ತೀವ್ರ ಉಸಿರಾಟದ ತೊಂದರೆ ಉಂಟಾಗಿ ಕಾರ್ಮಿಕರು ಸಾವನ್ನಪ್ಪಿದ್ದಾಗಿ ತಿಳಿದು ಬಂದಿದೆ.

ನಿರ್ಮಾಣ ಹಂತದ ಶೌಚಾಲಯಕ್ಕೆ ಬಿದ್ದು ಐವರ ದುರ್ಮರಣ

ಘಟನೆಯಲ್ಲಿ 25 ವರ್ಷದ ರಾಮ್​ ತಿರ್ಥ್​, ರವೀಂದ್ರ, ಅಶೋಕ್​​, ಗಬ್ಬು, ಅಲ್ಲಾಬಕ್ಷ್‌ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿದ್ದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details