ನವದೆಹಲಿ: ಕಳೆದ 24 ಗಂಟೆಗಳಲ್ಲಿ 46,232 ಕೊರೊನಾ ಸೋಂಕಿತರು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 90,50,598ಕ್ಕೆ ಏರಿಕೆಯಾಗಿದೆ.
ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣಗಳು: 46,232 ಸೋಂಕಿತರು ಪತ್ತೆ! - india corona cases
ಕಳೆದ ಕೆಲ ದಿನಗಳಲ್ಲಿ ಇಳಿಮುಖವಾಗಿದ್ದ ಕೋವಿಡ್ ಪ್ರಕರಗಳು ಇದೀಗ ಮತ್ತೆ ಏರಿಕೆ ಕಾಣುತ್ತಿರುವುದು ಜನರ ನಿದ್ದೆಗೆಡಿಸಿದೆ. 46,232 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿದ್ದು, ಸೋಂಕಿತರ ಸಂಖ್ಯೆ 90,50,598ಕ್ಕೆ ತಲುಪಿದೆ.
ಮತ್ತೆ ಏರಿಕೆ ಕಾಣುತ್ತಿರುವ ಕೋವಿಡ್ ಪ್ರಕರಣಗಳು; 46,232 ಸೋಂಕಿತರು ಪತ್ತೆ!
564 ಮಂದಿ ಕೊರೊನಾಗೆ ತುತ್ತಾಗಿ ಕೊನೆಯುಸಿರೆಳೆದಿದ್ದು, ಒಟ್ಟು 1,32,726 ಮಂದಿ ಮೃತಪಟ್ಟಿದ್ದಾರೆ. 49,715 ಮಂದಿ ಸಂಪೂರ್ಣ ಗುಣಮುಖರಾಗಿದ್ದು, ಈವರೆಗೆ ಒಟ್ಟು 84,78,124 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಸದ್ಯ 4,39,747 ಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ಮಂದುವರೆದಿದೆ.
ನಿನ್ನೆ 10,66,022 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಿದ್ದು, ನವೆಂಬರ್ 20 ರವರೆಗೆ 13,06,57,808 ಮಾದರಿಗಳನ್ನು ಪರೀಕ್ಷಿಸಲಾಗಿದೆ. ಈ ಪೈಕಿ ಒಟ್ಟು 90,50,598 ಸೋಂಕಿತರು ಪತ್ತೆಯಾಗಿದ್ದಾರೆ.