ಜೈಪುರ್:ಪೂಜೆಗೆಂದು ದೇವಾಲಯಕ್ಕೆ ತೆರಳಿದ್ದ ವಿವಾಹಿತೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ರಾಜಸ್ತಾನದ ಪಾಲಿ ಜಿಲ್ಲೆಯಲ್ಲಿ ನಡೆದಿದೆ.
ದೇವರ ಆರಾಧನೆಗೆ ತೆರಳಿದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ...ವಿಡಿಯೋ ವೈರಲ್
ದೇವರ ಆರಾಧನೆಗೆಂದು ತೆರಳಿದ್ದ ಮಹಿಳೆ ಮೇಲೆ ಕಾಮುಕರು ಅಟ್ಟಹಾಸ ಮೆರೆದಿದ್ದಾರೆ. ವಿವಾಹಿತೆಯ ಮೇಲೆ ಐವರು ಅತ್ಯಾಚಾರ ಎಸಗಿರುವ ಘಟನೆ ಪಾಲಿ ಜಿಲ್ಲೆಯಲ್ಲಿ ಸಂಚಲನ ಮೂಡಿಸಿದೆ.
ಮೇ 26ರಂದು ಸ್ನೇಹಿತೆಯ ಜೊತೆ ಸೇರಿ ವಿವಾಹಿತ ಮಹಿಳೆ ದೇಗುಲಕ್ಕೆ ತೆರಳಿದ್ದರು. ಈ ವೇಳೆ ಐವರು ಕಾಮುಕರು ಮಹಿಳೆಯ ಜೊತೆ ವಾಗ್ವಾದಕ್ಕಿಳಿದಿದ್ದಾರೆ. ಬಳಿಕ ಆಕೆಯನ್ನು ಬಲವಂತವಾಗಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು, ಸಾಮೂಹಿಕ ಅತ್ಯಾಚಾರ ಎಸಗಿ ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆ ನಡೆದ ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದರು.
ಆರೋಪಿಗಳು ಅತ್ಯಾಚಾರ ಎಸಗಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು.ಈ ವಿಡಿಯೋ ನೋಡಿದ ಪೊಲೀಸರು ಆರೋಪಿಗಳಾದ ಜಿತೇಂದ್ರ ಭಟ್ (20), ಗೋವಿಂದ್ ಭಟ್ (20), ದಿನೇಶ್ ಭಟ್ (24), ಮಹೇಂದ್ರ ಭಟ್ (22) ಎಂಬ ಆರೋಪಿಗಳನ್ನು ಮಟ್ಟಹಾಕಿದ್ದಾರೆ. ಇನ್ನೊಬ್ಬ ಆರೋಪಿ ಸಂಜಯ್ ಭಟ್ ಪರಾರಿಯಾಗಿದ್ದು, ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.