ಕರ್ನಾಟಕ

karnataka

ETV Bharat / bharat

ಮಹಾರಾಷ್ಟ್ರ: ಮೂವರನ್ನು ಬಲಿ ತೆಗೆದುಕೊಂಡ 'ನಿಸರ್ಗ' - Severe Cyclonic Storm ‘

ನಿಸರ್ಗ ಚಂಡಮಾರುತಕ್ಕೆ ಮಹಾರಾಷ್ಟ್ರದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ.

ನಿಸರ್ಗಾ ಸೈಕ್ಲೋನ್
ನಿಸರ್ಗಾ ಸೈಕ್ಲೋನ್

By

Published : Jun 4, 2020, 12:00 AM IST

ಮುಂಬೈ: ಮಹಾರಾಷ್ಟ್ರದಲ್ಲಿ ನಿಸರ್ಗ ಸೈಕ್ಲೋನ್​ ಮೂವರನ್ನು ಬಲಿ ತೆಗೆದುಕೊಂಡಿದೆ. ಅಲ್ಲದೇ ಹಲವರು ಗಾಯಗೊಂಡಿದ್ದಾರೆ.

ಹವೇಲಿ ತಹ್​ಸಿಲ್​​ನ ಮೋಕರ್ವಾಡಿ ನಿವಾಸಿ ಪ್ರಕಾಶ್ ಮೋಕರ್ (52) ಮನೆಯ ಮೇಲ್ಛಾವಣಿ ಬಿದ್ದು ಸಾವನ್ನಪ್ಪಿದ್ದಾರೆ. ಇವರು ಟಿನ್ ಶೀಟ್‌ಗಳನ್ನು ಹಿಡಿಯಲು ಯತ್ನಿಸುತ್ತಿದ್ದಾಗ ಗಾಯಗೊಂಡಿದ್ದಾರೆ ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪುಣೆಯ ಖೇಡ್ ತಹ್​​ಸಿಲ್‌ನಲ್ಲಿ ಗೋಡೆ ಕುಸಿದು 65 ವರ್ಷದ ಮಹಿಳೆ ಸಾವನ್ನಪ್ಪಿದ್ದು, ಅವರ ಕುಟುಂಬದ ಐದು ಮಂದಿ ಗಾಯಗೊಂಡಿದ್ದಾರೆ.

ರಾಯಗಡ್ ಜಿಲ್ಲೆಯಲ್ಲಿ ಭಾರಿ ಗಾಳಿಗೆ ವಿದ್ಯುತ್ ಟ್ರಾನ್ಸ್‌ಫಾರ್ಮರ್ ಬಿದ್ದು, 58 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

'ನಿಸರ್ಗ' ಚಂಡಮಾರುತ ಈಶಾನ್ಯಕ್ಕೆ ಚಲಿಸುತ್ತಿದೆ. ಅಲ್ಲದೇ ಇದು ನಾಸಿಕ್​, ಧುಲೆ, ನಂದೂರ್ಬಾರ್ ಜಿಲ್ಲೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಐಎಂಡಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ABOUT THE AUTHOR

...view details