ಸ್ಟಾಕ್ಹೋಮ್:2019ನೇ ಸಾಲಿನ ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ನೊಬೆಲ್ ಪ್ರಶಸ್ತಿ ಘೋಷಣೆ ಮಾಡಲಾಗಿದ್ದು, ಜಾನ್ ಬಿ. ಗುಡ್ನೊಫ್, ಎಂ.ಸ್ಟಾನ್ಲಿ ವೈಟಿಂಗ್ಹ್ಯಾಮ್ ಮತ್ತು ಅಕಿರಾ ಯೋಶಿನೊ ಅತ್ಯುನ್ನತ್ತ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸ್ಮಾರ್ಟ್ಫೋನ್ ಬಳಸುತ್ತೀರಾ? ನೊಬೆಲ್ ಪ್ರಶಸ್ತಿ ಪಡೆದ ಈ ವಿಜ್ಞಾನಿಗಳಿಗೆ ಹೇಳಿ ಥ್ಯಾಂಕ್ಸ್! - ಬ್ಯಾಟರಿ ತಂತ್ರಜ್ಞಾನ
ರಾಸಾಯನಿಕ ಶಾಸ್ತ್ರದಲ್ಲಿ ಮೂವರು ವಿಜ್ಞಾನಿಗಳಿಗೆ ಪ್ರಸಕ್ತ ವರ್ಷದ ನೊಬೆಲ್ ಪ್ರಶಸ್ತಿ ಘೋಷಣೆಯಾಗಿದ್ದು, ಸ್ಮಾರ್ಟ್ಫೋನ್ನಲ್ಲಿ ಬಳಕೆಯಾಗುವ ಬ್ಯಾಟರಿಗಳ ಬಗ್ಗೆ ಇವರು ನಡೆಸಿದ ಸಂಶೋಧನೆಗಾಗಿ ಈ ಗೌರವ ಲಭಿಸಿದೆ.
ನಾವು ಬಳಕೆ ಮಾಡುವ ಫೋನ್ನಲ್ಲಿ ಬ್ಯಾಟರಿ ತಂತ್ರಜ್ಞಾನ ಯಾವ ರೀತಿಯಾಗಿ ಕೆಲಸ ಮಾಡುತ್ತದೆ. ಹಾಗೂ ಲಿಥಿಯಂ-ಐಯಾನ್ ಬ್ಯಾಟರಿಗಳ ಅಭಿವೃದ್ಧಿಗಾಗಿ ಇವರು ನಡೆಸಿರುವ ಸಂಶೋಧನೆಗೆ ಈ ಸಾಲಿನ ಪ್ರತಿಷ್ಠಿತ ಗೌರವ ಸಿಕ್ಕಿದೆ. ಸ್ಮಾರ್ಟ್ಫೋನ್ಗಳಲ್ಲಿ ಅವಿಭಾಜ್ಯ ಅಂಗವಾಗಿರುವ ಬ್ಯಾಟರಿ ತಂತ್ರಜ್ಞಾನದ ಬಗ್ಗೆ ಇವರು ಮಾಡಿರುವ ಸಂಶೋಧನೆ ಎಲ್ಲಡೆಯಿಂದ ಮೆಚ್ಚುಗೆಗೆ ಪಾತ್ರವಾಗಿದೆ.
ಪ್ರಮುಖವಾಗಿ ಲಿಥಿಯಂ-ಐಯಾನ್ ಬ್ಯಾಟರಿ ನಮ್ಮ ಜೀವನದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದು, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಮತ್ತು ಎಲೆಕ್ಟ್ರಿಕ್ ವಾಹನಗಳಲ್ಲೂ ಅವುಗಳ ಬಳಕೆಯಾಗುತ್ತಿವೆ. ವಿಶೇಷವೆಂದರೆ 97 ವರ್ಷದ ಜಾನ್ ಬಿ. ಗುಡ್ನೊಫ್ ನೊಬೆಲ್ ಪ್ರಶಸ್ತಿಗೆ ಭಾಜನರಾಗಿರುವ ಅತ್ಯಂತ ಹಿರಿಯ ವಿಜ್ಞಾನಿಯಾಗಿದ್ದಾರೆ.