ಕರ್ನಾಟಕ

karnataka

By

Published : Jul 29, 2020, 5:00 AM IST

ETV Bharat / bharat

ಬುಧವಾರದ ರಾಶಿಫಲ..ನಿಮ್ಮ ರಾಶಿಭವಿಷ್ಯ ಈ ದಿನ ಹೇಗಿದೆ...?

ಬುಧವಾರದ ರಾಶಿಫಲ

29th Astrology
ಬುಧವಾರದ ರಾಶಿಫಲ

ಮೇಷ

ಜೀವನದಲ್ಲಿ ಕೊಂಚ ಉತ್ಸಾಹ ಸೇರಿಸಿಕೊಳ್ಳಿರಿ. ನಿಮ್ಮ ಗುರಿಯನ್ನು ತಲುಪಲು ಶ್ರಮ ವಹಿಸಿ ಕೆಲಸ ಮಾಡಿ. ನಿಮ್ಮನ್ನು ನೀವು ವ್ಯಸ್ತರಾಗಿಸಿಕೊಳ್ಳಿ, ಆದರೆ ಯಾವುದನ್ನೂ ಅತಿಯಾಗಿ ಮಾಡಬೇಡಿ. ಇಂದು, ನೀವು ಗುಂಪು ಚಟುವಟಿಕೆಗಳಲ್ಲಿ ಆಕರ್ಷಣೆಯ ಕೇಂದ್ರ ಬಿಂದುವಾಗುತ್ತೀರಿ.

ವೃಷಭ

ನಿಮಗೆ ತೊಂದರೆ ನೀಡುವವರಿಂದ ದೂರ ಇದ್ದರೆ ಒಳ್ಳೆಯದು. ಪ್ರತಿಕ್ರಿಯಿಸುವುದು ಮತ್ತು ಮುನ್ನಡೆಯುವುದು ನಿಮ್ಮ ಒಳ್ಳೆಯ ಸ್ವಭಾವ. ನಿಮ್ಮ ಒಳ್ಳೆತನದ ದಾರಿಯಲ್ಲಿ ಅನಗತ್ಯ ವ್ಯಕ್ತಿಗಳು, ಅನಗತ್ಯ ವಿಚಾರಗಳು ಬರದಂತೆ ನೋಡಿಕೊಳ್ಳಿ.

ಮಿಥುನ

ನಿಮ್ಮ ಮ್ಯಾನೇಜರ್​​​​​​​ಗಳು ನಿಮಗೆ ಹೊಸ ಜವಾಬ್ದಾರಿಗಳನ್ನು ನೀಡುತ್ತಾರೆ. ನಿಮ್ಮ ಹಗಲಿನ ಸಂಕಷ್ಟ, ದಿನದ ಕೆಲಸದ ಅಂತ್ಯದಲ್ಲಿ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವುದರಿಂದ ಸಂಭ್ರಮವಾಗಿ ಬದಲಾಗುತ್ತದೆ. ನೀವು ಟೆಂಡರ್​​​​​​​​ಗಳ ಹರಾಜನ್ನು ಕೆಲ ದಿನಗಳು ತಡ ಮಾಡಿದರೆ ಒಳಿತು.

ಕರ್ಕಾಟಕ

ನಿಮ್ಮ ಋಣಾತ್ಮಕ ಆಲೋಚನೆಗಳು ಮತ್ತು ನಿರ್ಣಯಗಳಿಂದ ಹೊರ ಬರಲು ಇಂದು ಸೂಕ್ತ ದಿನ. ಮತ್ತು ಕೈಯಲ್ಲಿರುವ ವಿಷಯಗಳ ಜವಾಬ್ದಾರಿ ತೆಗೆದುಕೊಳ್ಳಲು ಪ್ರಾರಂಭಿಸಿರಿ. ಅಲ್ಲದೆ ಅಡೆತಡೆಗಳ ಕುರಿತು ಗಮನ ಕಡಿಮೆ ಮಾಡಿ ಮತ್ತು ಕೆಲಸದಲ್ಲಿ ತೊಡಗಿರಿ.

ಸಿಂಹ

ನೀವು ಇಂದು ನಿಮ್ಮ ಕೆಲಸದ ಬಗ್ಗೆ ಅಸಾಧಾರಣ ಗಂಭೀರತೆ ಹೊಂದಿರುತ್ತೀರಿ ಮತ್ತು ನಿಮ್ಮ ಲಕ್ಷ್ಯಗಳನ್ನು ದಣಿವಿಲ್ಲದಂತೆ ಪೂರ್ಣಗೊಳಿಸುತ್ತೀರಿ. ನಿಮ್ಮ ಚಟುವಟಿಕೆಗಳ ಕುರಿತು ಗಮನ ಮತ್ತು ನಿಯಂತ್ರಣ ಹೊಂದಿರುತ್ತೀರಿ. ನೀವು ನಿಮ್ಮ ಕಾರ್ಯ ನಿರ್ವಹಣೆಯ ಶೈಲಿ ಸುಧಾರಿಸಿಕೊಳ್ಳುವ ಬಯಕೆ ಹೊಂದಿದ್ದೀರಿ.

ಕನ್ಯಾ

ನಿಮ್ಮ ಪ್ರೀತಿಪಾತ್ರರು ಇಂದು ನಿಮ್ಮ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತಾರೆ. ಪರೀಕ್ಷೆಗಳು ಹತ್ತಿರದಲ್ಲಿರುವುದರಿಂದ ವಿದ್ಯಾರ್ಥಿಗಳು ಅಧ್ಯಯನಕ್ಕೆ ಗಮನ ನೀಡಬೇಕು, ಮತ್ತು ಅವರು ಅಧ್ಯಯನ ಮತ್ತು ಬಿಡುವಿನ ನಡುವೆ ಸಮತೋಲನ ಕಾಪಾಡಿಕೊಳ್ಳಲು ಕಲಿಯಬೇಕು. ಇಂದು ಸ್ಥಿರಾಸ್ತಿಯಲ್ಲಿ ಹೂಡಿಕೆ ಮಾಡಲು ಒಳ್ಳೆಯ ದಿನ.

ತುಲಾ

ನೀವು ಸಂಜೆ ನಿಮ್ಮ ರೀತಿಯ ಅಭಿರುಚಿ ಹೊಂದಿರುವ ಜನರನ್ನು ಭೇಟಿ ಮಾಡುತ್ತೀರಿ. ಇದು ಸಾಕಷ್ಟು ಅದ್ಭುತ ಚರ್ಚೆಗಳಿಗೆ ಕಾರಣವಾಗುತ್ತದೆ. ಇಂದು ನೀವು ಪ್ರಸ್ತುತ ವಾಸ್ತವ ಕುರಿತು ನಿಮ್ಮ ಒಳನೋಟ ವಿಸ್ತರಿಸಿಕೊಳ್ಳಲು ಬಯಸುತ್ತೀರಿ ಮತ್ತು ನಿಮ್ಮ ಪ್ರಯತ್ನಗಳಲ್ಲಿ ಪರಿಣಾಮಕಾರಿಯಾಗುತ್ತೀರಿ.

ವೃಶ್ಚಿಕ

ನಿಮ್ಮ ಭಾವನೆಗಳನ್ನು ನಿಗ್ರಹಿಸಲು ಸಾಧ್ಯವಿಲ್ಲದೇ ಇರಬಹುದು, ಮತ್ತು ನೀವು ಪ್ರಯತ್ನಿಸುವುದೂ ಒಳ್ಳೆಯದಲ್ಲ. ನಿಮ್ಮ ಬಗ್ಗೆ ತಪ್ಪು ತೀರ್ಮಾನ ತೆಗೆದುಕೊಳ್ಳುವ ಜನರಿಂದ ನೀವು ದೂರ ಇರುವುದು ಒಳ್ಳೆಯದು.

ಧನು

ನೀವು ಇಂದು ಅತ್ಯಂತ ಸ್ಥಿರ ಮತ್ತು ಸಂಘಟಿತರಾಗಿರುತ್ತೀರಿ. ಕೌಟುಂಬಿಕ ವ್ಯಕ್ತಿಯಾಗಿ ನಿಮ್ಮ ಸಮಯವನ್ನು ಮನೆಯಲ್ಲಿ ಮತ್ತು ಕುಟುಂಬ ಕುರಿತಂತೆ ನಿಮ್ಮ ಕರ್ತವ್ಯಗಳನ್ನು ಪೂರೈಸಲು ಬಳಸುತ್ತೀರಿ. ಕೆಲಸದ ವಿಷಯದಲ್ಲಿ ನೀವು ಇಂದು ಶಾಂತರಾಗಿರುತ್ತೀರಿ. ಸಂಜೆಯಲ್ಲಿ ನಿಸರ್ಗದ ಸೌಂದರ್ಯ ಮತ್ತು ಪ್ರಶಾಂತತೆ ಅನುಭವಿಸಿ.

ಮಕರ

ನೀವು ಮಹತ್ತರ ಸಂವಹನ ಕೌಶಲ್ಯಗಳನ್ನು ಹೊಂದಿದ್ದೀರಿ. ಇದು ನಿಮ್ಮ ಸುತ್ತಲೂ ಇರುವ ಅತ್ಯಂತ ಮೊಂಡುತನದ ವ್ಯಕ್ತಿಗಳನ್ನೂ ಮನ ಒಲಿಸುತ್ತದೆ. ಆದಾಗ್ಯೂ, ನೀವು ಈ ಸಾಮರ್ಥ್ಯವನ್ನು ಹೆಚ್ಚು ಹೆಚ್ಚು ತೀಕ್ಷ್ಣಗೊಳಿಸಿಕೊಳ್ಳಬೇಕು. ನೀವು ಸಮಸ್ಯೆಯ ಕೇಂದ್ರವನ್ನು ಕಂಡುಕೊಂಡು ನೀವು ಎದುರು ನೋಡುತ್ತಿರುವ ಸೂಕ್ತ ಪ್ರತಿಕ್ರಿಯೆಗಳನ್ನು ಆವಿಷ್ಕರಿಸಿಕೊಳ್ಳುತ್ತೀರಿ.

ಕುಂಭ

ಕೆಲ ಪ್ರಕರಣಗಳಲ್ಲಿ ನೀವು ಇಕ್ಕಟ್ಟಾದ ಸ್ಥಳದಲ್ಲಿ ಸಿಲುಕಿಕೊಂಡಂತೆ ಭಾವಿಸುತ್ತೀರಿ, ಮತ್ತು ಫಲಾಯನಕ್ಕೆ ದಾರಿಯೇ ಇಲ್ಲ. ಆದಾಗ್ಯೂ ಸ್ವತಂತ್ರವಾದ ವ್ಯಕ್ತಿಯಾಗಿ ನೀವು ಯಾರ ಸಹಾಯವೂ ಇಲ್ಲದೆ ಕಷ್ಟಗಳನ್ನು ನಿಭಾಯಿಸಬಲ್ಲಿರಿ. ಅದೇ ಸಾಮರ್ಥ್ಯ ನಿಮ್ಮನ್ನು ಇಂದಿಗೂ ದಿಟ್ಟವಾಗಿ ನಿಲ್ಲುವಂತೆ ಮಾಡುತ್ತದೆ.

ಮೀನ

ನಿಮಗೆ ಪ್ರಯಾಣವೆಂದರೆ ಇಷ್ಟ ಮತ್ತು ಅದಕ್ಕೆ ಹಲವು ಕಾರಣಗಳನ್ನು ಹುಡುಕುತ್ತೀರಿ. ಆದ್ದರಿಂದ ನೀವು ಇಂದು ದಿಢೀರ್ ಎಂದು ಸಾಹಸಯಾತ್ರೆ ಕೈಗೊಂಡರೆ ಆಶ್ಚರ್ಯಪಡಬೇಡಿ. ಇಂದು ನೀವು ಸಾಕಷ್ಟು ವಿಶ್ರಾಂತಿ ಪಡೆಯಬಹುದು.

ABOUT THE AUTHOR

...view details