ಕರ್ನಾಟಕ

karnataka

ETV Bharat / bharat

ಹಸುಗೂಸು ಬಲಿ ಪಡೆದ ಕೊರೊನಾ: ಕಣ್ಣು ಬಿಟ್ಟು ಜಗತ್ತು ನೋಡುವಾಗಲೇ ಕಣ್ಮರೆ

ಕೊರೊನಾ ಸೋಂಕು ತಗುಲಿರುವ ನವಜಾತ ಶಿಶುಗಳು ಪವಾಡ ರೀತಿಯಲ್ಲಿ ಗುಣಮುಖರಾಗುತ್ತಿದ್ದು, ಇದರ ಮಧ್ಯೆ 20 ದಿನದ ಮಗುವೊಂದು ಸಾವನ್ನಪ್ಪಿರುವ ಘಟನೆ ನಡೆದಿದೆ.

20-day-old child dies from Corona
20-day-old child dies from Corona

By

Published : May 2, 2020, 11:24 AM IST

ಜೈಪುರ​: ಕೊರೊನಾ ಸೋಂಕಿನಿಂದ ಬಳಲುತ್ತಿದ್ದ 20 ದಿನದ ಹಸುಗೂಸು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.

ಜೈಪುರ್​ದ ಜಿ.ಕೆ. ಲೂನ್​ ಆಸ್ಪತ್ರೆಯಲ್ಲಿ ದಾಖಲಾಗಿದ್ದ 20 ದಿನದ ಮಗು ಸಾವನ್ನಪ್ಪಿದ್ದಾಗಿ ಅಲ್ಲಿನ ವೈದ್ಯರು ತಿಳಿಸಿದ್ದಾರೆ. ಡೆಡ್ಲಿ ವೈರಸ್​ ಕೊರೊನಾದಿಂದ ಸಾವನ್ನಪ್ಪಿರುವ ಅತಿ ಸಣ್ಣ ವಯಸ್ಸಿನ ಮಗು ಇದು ಎಂದು ಹೇಳಲಾಗುತ್ತಿದೆ.

ಕೊರೊನಾದಿಂದ 20 ದಿನದ ಶಿಶು ಸಾವು

ಕೆಮ್ಮು ಹಾಗೂ ಜ್ವರದಿಂದ ಬಳಲುತ್ತಿದ್ದ ಈ ಶಿಶುವನ್ನು ಮೇ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಗುವಿನ ಕೊರೊನಾ ಪರೀಕ್ಷಾ ವರದಿ ಇದೀಗ ಬಂದಿದ್ದು, ವೈರಸ್​ನಿಂದಾಗಿ ಸಾವನ್ನಪ್ಪಿರುವುದು ಖಚಿತಗೊಂಡಿದೆ.

ರಾಜಸ್ಥಾನದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,666 ಕ್ಕೇರಿದೆ. ಇದರಲ್ಲಿ 1,116 ಜನರು ಗುಣಮುಖರಾಗಿದ್ದು, 62 ಜನರು ಕೊನೆಯುಸಿರೆಳೆದಿದ್ದಾರೆ.

ABOUT THE AUTHOR

...view details