ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯಲ್ಲಿ ಜೈಷ್ - ಎ - ಮೊಹಮ್ಮದ್ ಭಯೋತ್ಪಾದಕ ಸಂಘಟನೆಯ ಇಬ್ಬರು ಉಗ್ರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಅಧಿಕಾರಿ ಮಾಹಿತಿ ನೀಡಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಎಸ್‌ಪಿ ಬಂಡಿಪೋರಾ ರಾಹುಲ್ ಮಲಿಕ್, ಉತ್ತರ ಕಾಶ್ಮೀರದಲ್ಲಿ ಉಗ್ರಗಾಮಿ ಶ್ರೇಣಿಯಲ್ಲಿ ಯುವಕರನ್ನು ನೇಮಕ ಮಾಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಬಗ್ಗೆ ನಮಗೆ ಬಹಳ ಹಿಂದಿಯೇ ಮಾಹಿತಿ ಬಂದಿದೆ ಎಂದು ತಿಳಿಸಿದ್ದಾರೆ.
ಈ ಸಂಬಂಧ ಪೊಲೀಸರು ಜೆಎಂನಲ್ಲಿ ಓವರ್ ಗ್ರೌಂಡ್ನ ಕೆಲಸಗಾರ ಅಬ್ದುಲ್ ಮಜೀದ್ ಖಾನ್ ಎಂಬಾತನನ್ನು ಬಂಧಿಸಿದ್ದಾರೆ. ಕ್ರಾಲ್ಪುರಾ ಪ್ರದೇಶಕ್ಕೆ ಸೇರಿದ ಖಾನ್ ಈ ಹಿಂದೆ ಉಗ್ರನಾಗಿದ್ದ ಎಂಬುದು ತಿಳಿದು ಬಂದಿದೆ. ಆತನ ವಿಚಾರಣೆಯ ನಂತರ, ಸೊಪೋರ್‌ನ ಮತ್ತೊಬ್ಬ ಓವರ್ ಗ್ರೌಂಡ್ ಕೆಲಸಗಾರನಾದ ಶೌಕತ್ ಅಹ್ಮದ್‌ನನ್ನು ಬಂಧಿಸಲಾಗಿದೆ.
ಓದಿ:ರೈತರ ಪ್ರತಿಭಟನೆ :ಪಂಜಾಬ್ ಸಿಎಂ ಕರೆದ ಸರ್ವಪಕ್ಷ ಸಭೆಗೆ ಬಿಜೆಪಿ ಗೈರು
ಪೊಲೀಸರ ಪ್ರಕಾರ, ಇಬ್ಬರು ಆರೋಪಿಗಳು ಉಗ್ರರಿಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡುವ ಕೆಲಸ ನಿರ್ವಹಿಸುತ್ತಿದ್ದರು. ಅಲ್ಲದೇ, ಜಮ್ಮು ಮತ್ತು ಉತ್ತರ ಕಾಶ್ಮೀರದಲ್ಲಿ ಯುವಕರನ್ನು ಉಗ್ರಗಾಮಿತ್ವದತ್ತ ಸೆಳೆಯುವುದು ಅವರಿಗೆ ನೀಡಿದ ಜವಾಬ್ದಾರಿಯಾಗಿತ್ತು ಎಂದಿದ್ದಾರೆ.