ಕರ್ನಾಟಕ

karnataka

ETV Bharat / bharat

ಪುಲ್ವಾಮದಲ್ಲಿ ಮತ್ತೊಂದು ದುರಂತ:  ಇಬ್ಬರು ವಾಯುಪಡೆ ಅಧಿಕಾರಿಗಳು ಮೃತ - ವಾಯುಪಡೆ ಅಧಿಕಾರಿಗಳು ಮೃತ

ಪುಲ್ವಾಮ ಜಿಲ್ಲೆಯ ಆವಂತಿಪೊರದಲ್ಲಿ ರಸ್ತೆ ಅಪಘಾತ ಸಂಭವಿಸಿ ಇಬ್ಬರು ವಾಯುಪಡೆಯ ಅಧಿಕಾರಿಗಳು ಮೃತಪಟ್ಟಿದ್ದಾರೆ

ಪುಲ್ವಾಮ ರಸ್ತೆ ಅಪಘಾತದಲ್ಲಿ ವಾಯುಪಡೆಯ ಅಧಿಕಾರಿಗಳು ಮೃತ

By

Published : Apr 4, 2019, 6:10 PM IST

ನವದೆಹಲಿ:ಭಾರತೀಯ ವಾಯುಪಡೆಯ ಇಬ್ಬರು ಅಧಿಕಾರಿಗಳು ಇಂದು ಪುಲ್ವಾಮ ಜಿಲ್ಲೆಯ ಆವಂತಿಪೊರದಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದು, ಮತ್ತಿಬ್ಬರು ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ಆವಂತಿಪೊರದ ವಾಯುಪಡೆಯ ನೆಲೆಯಿಂದ ಹೊರಗೆ ಮಲಂಗ್​ಪೊರ ಗ್ರಾಮದಲ್ಲಿ ಇಂದು ರಸ್ತೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ವಾಯುಪಡೆಯ ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದಾರೆ. ಮತ್ತಿಬ್ಬರು ಅಧಿಕಾರಿಗಳು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ರಾಕೇಶ್​ ಪಾಂಡೆ ಹಾಗೂ ಅಜಯ್​ ಕುಮಾರ್​ ಮೃತಪಟ್ಟ ಅಧಿಕಾರಿಗಳೆಂದು ಮಾಹಿತಿ ಲಭ್ಯವಾಗಿದೆ. ಘಟನೆ ಸಂಬಂಧ ತನಿಖೆ ನಡೆಸಲಾಗುವುದು ಎಂದು ವಾಯುಪಡೆ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ABOUT THE AUTHOR

...view details