ಭೋಪಾಲ್ (ಮಧ್ಯಪ್ರದೇಶ):ಅಣ್ಣನೊಂದಿಗೆ ಮನೆಗೆ ಹಿಂತಿರುಗುತ್ತಿದ್ದ ಯುವತಿಯ ಮೇಲೆ ಮೂವರು ಅಪ್ರಾಪ್ತರು ಸೇರಿ ಒಟ್ಟು ಏಳು ಮಂದಿ ಅತ್ಯಾಚಾರ ಎಸಗಿರುವ ಘಟನೆ ಮಧ್ಯಪ್ರದೇಶದ ಬಿತುಲ್ನಲ್ಲಿ ನಡೆದಿದೆ.
ಮೋಟಾರ್ ಸೈಕಲ್ ಮೇಲೆ 18 ವರ್ಷದ ಯುವತಿ ಹಾಗೂ ಆಕೆಯ 21 ವರ್ಷದ ಸಹೋದರ ಊರಿಗೆ ಹಿಂತಿರುಗುತ್ತಿದ್ದರು. ಈ ವೇಳೆ ನಡು ರಸ್ತೆಯಲ್ಲಿ ಅವರನ್ನು ಈ ಕೀಚಕರು ಅಡ್ಡಗಟ್ಟಿ ಹಲ್ಲೆ ನಡೆಸಿದ್ದಾರೆ. ರಾತ್ರಿ ಸುಮಾರು 8 ಗಂಟೆಗೆ ಘಟನೆ ನಡೆದಿದ್ದು, ಆಕೆಯ ಮೇಲೆ ಕಾಮುಕರು ಮಧ್ಯರಾತ್ರಿ 2 ಗಂಟೆವರೆಗೆ ಲೈಂಗಿಕ ದೌರ್ಜನ್ಯವೆಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.