ತಿರುನೆಲ್ವೇಲಿ (ತಮಿಳುನಾಡು) : ಟಿಕ್‌ಟಾಕ್‌ನಲ್ಲಿ ಬೆಕ್ಕಿಗೆ ನೇಣು ಹಾಕಿರುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದಕ್ಕಾಗಿ ಯುವಕನೊಬ್ಬನನ್ನು ಬಂಧಿಸಲಾಗಿದೆ.
ಬೆಕ್ಕಿನ ಟಿಕ್ಟಾಕ್ ವಿಡಿಯೋ ಮಾಡಿದ ಯುವಕನ ಬಂಧನ ತಿರುನೆಲ್ವೇಲಿ ಪೊಲೀಸರು ಬುಧವಾರ 18 ವರ್ಷದ ಯುವಕನನ್ನು ಬಂಧಿಸಿದ್ದಾರೆ. ಮೇ 16 ರಂದು, ಮನೆಯ ಸೀಲಿಂಗ್‌ಗೆ ಕಟ್ಟಿದ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿದ್ದ ಸತ್ತ ಬೆಕ್ಕನ್ನು ತೋರಿಸುವ ವಿಡಿಯೋವನ್ನು ಅಪ್ಲೋಡ್ ಮಾಡಿದ್ದ. ಈ ದೃಶ್ಯ ಸೋಷಿಯಲ್ ಮಿಡಿಯಾದಲ್ಲಿ ಜನರ ಆಕ್ರೋಶಕ್ಕೆ ಕಾರಣವಾಗಿತ್ತು. ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಪೊಲೀಸರ ಪ್ರಕಾರ, ವಿಡಿಯೋದಲ್ಲಿರುವ ವ್ಯಕ್ತಿ ತಿರುನಲ್ವೇಲಿ ನಗರದಿಂದ 25 ಕಿ.ಮೀ ದೂರದಲ್ಲಿರುವ ಸತ್ಯಪುರಂ ನಿವಾಸಿ ತಂಗರಾಜ್. ಹೆಚ್ಚಿನ ವೀಕ್ಷಕರು ಮತ್ತು ಫಾಲೋವರ್ಸ್ಗಳನ್ನು ಗಳಿಸುವ ಸಲುವಾಗಿ, ಹಗ್ಗದಿಂದ ಬೆಕ್ಕನ್ನು ನೇತು ಹಾಕಿದ್ದರು ಎಂದು ಪಜಾವೂರಿನ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಸ್ಥಳೀಯ ಕಾರ್ಯಕರ್ತ ಭಾಗ್ಯರಾಜ್ ಅವರು ಮೇ 19 ರಂದು ಸಲ್ಲಿಸಿದ್ದ ದೂರಿನ ಆಧಾರದ ಮೇಲೆ ಪೊಲೀಸರು ತಂಗರಾಜ್ ಅವರನ್ನು ಬುಧವಾರ ಬಂಧಿಸಿದ್ದಾರೆ.
ಭಾರತೀಯ ದಂಡ ಸಂಹಿತೆ ಮತ್ತು 11 (ಪ್ರಾಣಿಗಳನ್ನು ಕ್ರೂರವಾಗಿ ನಡೆಸಿಕೊಳ್ಳುವುದು), 11 (i ) (ಸಮಂಜಸವಾದ ಕಾರಣವಿಲ್ಲದೇ, ಯಾವುದೇ ಪ್ರಾಣಿಗಳನ್ನು ತ್ಯಜಿಸಿ ಅದು ಹಸಿವಿನಿಂದ ಅಥವಾ ಬಾಯಾರಿಕೆಯಿಂದ ನೋವನ್ನು ಅನುಭವಿಸುವ ಸಾಧ್ಯತೆಯಿದೆ) ಪ್ರಾಣಿಗಳ ಮೇಲಿನ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆಯನ್ವಯ ಪ್ರಕರಣ ದಾಖಲಿಸಲಾಗಿದೆ.
ಬಂಧನದ ನಂತರ ತಂಗರಾಜ್ ಅವರನ್ನು ಜಾಮೀನಿನ ಮೇಲೆ ಬಿಡಲಾಗಿದೆ.