ಕರ್ನಾಟಕ

karnataka

By

Published : Jun 16, 2020, 5:01 AM IST

ETV Bharat / bharat

ಈ ರಾಶಿಯವರಿಗೆ ಇಂದು ಅದೃಷ್ಟದ ದಿನ..ನೀವು ಎಲ್ಲದರಲ್ಲೂ ಜಯ ಗಳಿಸುತ್ತೀರಿ

ಮಂಗಳವಾರದ ರಾಶಿಫಲ

16 June 2020 ETV Bharat Astrology
ಮಂಗಳವಾರದ ರಾಶಿಫಲ

ಮೇಷ

ನಿಮ್ಮ ಒಳ್ಳೆಯ ಕೆಲಸಗಳು ಎಲ್ಲೆಡೆ ಹರಡಿದ್ದು ಅದು ಎಲ್ಲರಿಗೂ ತಿಳಿಯುತ್ತದೆ. ನಿಮ್ಮ ಖರ್ಚು-ವೆಚ್ಚಗಳ ಕುರಿತು ನೀವು ಕೊಂಚ ಎಚ್ಚರಿಕೆ ವಹಿಸಬೇಕು ಮತ್ತು ಭವಿಷ್ಯಕ್ಕೆ ಉಳಿತಾಯ ಮಾಡಲು ಹೆಚ್ಚು ಗಮನ ನೀಡಬೇಕು.

ವೃಷಭ

ನೀವು ಇಂದು ಕೊಂಚ ಆಕ್ರಮಣಶೀಲ ಮತ್ತು ಪ್ರಭಾವಿಯಾಗಿರುವ ಅಗತ್ಯವಿದೆ ಎಂದು ಕಾಣುತ್ತೀರಿ. ಆದರೆ ನಿಮ್ಮ ಆಕ್ರಮಣಶೀಲತೆಯನ್ನು ಸತತವಾಗಿ ನಿಯಂತ್ರಣದಲ್ಲಿರಿಸಿಕೊಳ್ಳಿ. ನೀವು ಭೇಟಿಯಾಗುವ ಜನರೊಂದಿಗೆ ಸೌಹಾರ್ದತೆಯಿಂದಿರಿ. ಇಂದು ಯಾವುದೇ ದೊಡ್ಡ ನಿರ್ಧಾರಗಳನ್ನು ಕೈಗೊಳ್ಳದೇ ಇರಲು ಪ್ರಯತ್ನಿಸಿ. ಸಾಮಾನ್ಯ ದಿನದಂತೆ ಕಾಲ ಕಳೆಯಿರಿ.

ಮಿಥುನ

ನೀವು ಮಾಡುವ ಪ್ರತಿ ಕೆಲಸದಲ್ಲೂ ಪರಿಪೂರ್ಣತೆಯನ್ನು ನಿರೀಕ್ಷೆ ಮಾಡುತ್ತೀರಿ ಮತ್ತು ಈ ತತ್ವವನ್ನು ನೀವು ಅಳವಡಿಸಿಕೊಂಡಿದ್ದೀರಿ ಕೂಡಾ. ನೀವು ವ್ಯಯಿಸುವ ಶಕ್ತಿ ಕುರಿತು ಧನಾತ್ಮಕವಾಗಿರುವುದು ಮತ್ತು ಸರಿಯಾದ ಜೀವನದ ಆಯ್ಕೆಗಳನ್ನು ಮಾಡುವಲ್ಲಿ ಸರಿಯಾಗಿ ಗಮನ ನೀಡುವುದು ಒಳ್ಳೆಯದು.

ಕರ್ಕಾಟಕ

ನಿಮಗೆ ಇಂದು ಅದೃಷ್ಟದೇವತೆ ಒಲಿದಿದ್ದಾಳೆ. ನೀವು ಭೂಮಿ, ಮನೆ ಅಥವಾ ಕಟ್ಟಡ ವ್ಯಾಪಾರದಿಂದ ಗಳಿಸುತ್ತೀರಿ. ಕಚೇರಿಯಲ್ಲಿ ನಿಮ್ಮ ಮೇಲಧಿಕಾರಿಗಳು ಮತ್ತು ಸಹೋದ್ಯೋಗಿಗಳಿಂದ ಸಂಪೂರ್ಣ ಬೆಂಬಲ ಮತ್ತು ಸಹಕಾರ ಪಡೆಯುತ್ತೀರಿ. ಅತ್ಯಂತ ಲಾಭದಾಯಕ ದಿನ ನಿಮಗಾಗಿ ಕಾಯುತ್ತಿದೆ.

ಸಿಂಹ

ನೀವು ಏನೋ ಒಂದು ವಿಭಿನ್ನವಾದುದನ್ನು ಮಾಡುವ ಬಯಕೆ ಹೊಂದಿರುವಂತೆ ಭಾವಿಸುತ್ತೀರಿ. ಸಂತೋಷದ ಮನಸ್ಥಿತಿ ಇಡೀ ದಿನ ನಿಮ್ಮ ಜೊತೆಯಲ್ಲಿರುತ್ತದೆ. ತಾರೆಗಳು ನಿಮಗೆ ಪೂರಕವಾಗಿರುವುದರಿಂದ ನೀವು ಹಾಕುವ ಶಕ್ತಿಗೆ ಅನುಗುಣವಾಗಿ ನೀವು ಎಲ್ಲಾ ಸವಾಲುಗಳನ್ನೂ ಎದುರಿಸುವಲ್ಲಿ ಖಂಡಿತವಾಗಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ

ಇಡೀ ದಿನ ಗೊತ್ತಿಲ್ಲದ ವಿಷಯಕ್ಕೆ ನಿಮ್ಮ ಮನಸ್ಸು ಭಯಗ್ರಸ್ತವಾಗಿರುತ್ತದೆ. ನಿಮ್ಮ ಮಿತ್ರರಲ್ಲಿ ಅತಿಯಾದ ಖರ್ಚು ಮಾಡುವ ಸನ್ನಿವೇಶಗಳಿಂದ ದೂರವಿರಿ. ಈ ದಿನ ನಿಮ್ಮಿಂದ ಕೊಂಚ ಜಾಗರೂಕತೆ ಅಗತ್ಯವಿದೆ.

ತುಲಾ

ರಿಯಲ್ ಎಸ್ಟೇಟ್​​​​​​​​​​​​ ಮತ್ತು ವಿಮಾ ಪಾಲಿಸಿಗಳಲ್ಲಿ ಹೂಡಿಕೆಗಳು ನಿಮಗೆ ಹಣವನ್ನು ತಂದುಕೊಡಲಿವೆ. ನಿಮ್ಮ ಮಕ್ಕಳು ಹೊಸ ಎತ್ತರಗಳನ್ನು ತಲುಪಲಿದ್ದು ನಿಮ್ಮ ಎದೆ ಹೆಮ್ಮೆಯಿಂದ ಬೀಗುತ್ತದೆ. ಕೆಲಸದ ವಿಷಯದಲ್ಲಿ, ವೇತನ ಹೆಚ್ಚಳ ನಿಮ್ಮ ದಾರಿಯಲ್ಲಿರುವುದನ್ನು ಗಮನಿಸಿ. ನಿಮ್ಮ ಪಿತ್ರಾರ್ಜಿತ ರೂಪದಲ್ಲಿ ಕೂಡಾ ಹಣಕಾಸಿನ ಅನುಕೂಲಗಳು ದೊರೆಯಬಹುದು.

ವೃಶ್ಚಿಕ

ನಿಮ್ಮ ದಿನ ನಿಮಗೆ ಕಿರಿಕಿರಿ ಮತ್ತು ಆಕ್ರಮಣಶೀಲತೆ ತರಬಹುದು, ಅದು ನಿಮ್ಮ ಅದೃಷ್ಟವನ್ನೂ ದೂರ ಮಾಡಬಹುದು. ನಿಮಗೆ ತೊಂದರೆ ಉಂಟು ಮಾಡುವ ಯಾವುದೇ ವಿವಾದಗಳಿಂದ ದೂರವಿರುವುದು ಉತ್ತಮ. ಆದರೆ ಸಂಜೆಯ ವೇಳೆಗೆ, ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಶಾಂತಿ ಮತ್ತು ನಿರಾಳತೆಯನ್ನು ಎದುರು ನೋಡಬಹುದು.

ಧನು

ನಿಮ್ಮ ದಿನ ಸಂಪೂರ್ಣ ಭರವಸೆ ಮತ್ತು ಸಂತೋಷದಿಂದ ಕೂಡಿದೆ. ಹೆಚ್ಚು ಪರಿಶೀಲನೆ ಅಗತ್ಯವಾಗಿದ್ದ ಕೆಲಸವೂ ಬಹಳ ಬೇಗನೆ ಯಶಸ್ವಿಯಾಗಿ ಪೂರ್ಣಗೊಳ್ಳುತ್ತದೆ. ನೀವು ದೀರ್ಘಾವಧಿ ವಿವಾದಗಳನ್ನು ಕೂಡಾ ತಾರ್ಕಿಕ ವಿವರಣೆಯೊಂದಿಗೆ ಪರಿಹರಿಸಲು ನೆರವಾಗುತ್ತೀರಿ.

ಮಕರ

ಕಳೆದ ಕೆಲ ತಿಂಗಳು ಕಠಿಣವಾಗಿದ್ದು ನೀವು ನಿಮ್ಮ ಬಂಧುಮಿತ್ರರೊಂದಿಗೆ ಸಂತೋಷಪಡುವುದನ್ನು ಕಳೆದುಕೊಂಡಿದ್ದೀರಿ. ನಿಮ್ಮ ಬದ್ಧತೆ ಮತ್ತು ಶ್ರಮ ನಿಮಗೆ ನೀವು ಬಯಸಿದ ಹಂತಕ್ಕೆ ತಂದಿದೆ. ನೀವು ಈಗ ಕುಳಿತುಕೊಂಡು ಅದರ ಪ್ರತಿಫಲ ಪಡೆಯುವುದು ಮತ್ತು ವೈಭವ ಅನುಭವಿಸುವ ಕಾಲ.

ಕುಂಭ

ಇಂದು ನೀವು ಸಂಕೀರ್ಣ ಸಮಸ್ಯೆಗಳನ್ನು ಪರಿಹರಿಸಲು ಸುಲಭ ದಿನ. ಸುಲಭವಾಗಿ ಜವಾಬ್ದಾರಿಯನ್ನು ನಿಮ್ಮ ಹೆಗಲ ಮೇಲೆ ಸರಿಸುವ ಜನರನ್ನು ಕಾಣುತ್ತೀರಿ. ಎಚ್ಚರದಿಂದಿರಿ, ಕಿರಿಕಿರಿ ಅನುಭವಿಸಬೇಡಿ, ನಿಮ್ಮ ದೌರ್ಬಲ್ಯಗಳೇ ನಿಮ್ಮ ಬಲವಾದ ಅಂಶಗಳಾಗುವ ಸುವರ್ಣಾವಕಾಶ ನಿಮಗಾಗಿ ಕಾದಿದೆ.

ಮೀನ

ಇಂದು ನಿಮ್ಮ ತಾರೆಗಳು ಪೂರಕವಾಗಿಲ್ಲದೇ ಇರುವುದರಿಂದ ನಿಮ್ಮ ಹಣಕಾಸು ವ್ಯವಹಾರಗಳ ಕುರಿತು ಎಚ್ಚರಿಕೆಯಿಂದ ಇರಿ. ಹಣಕಾಸಿಗೆ ಸಂಬಂಧಿಸಿದ ವಿಷಯಗಳ ಕುರಿತು ನೀವು ಜಾಗರೂಕತೆಯಿಂದ ಇರುವುದು ಉತ್ತಮ.

ABOUT THE AUTHOR

...view details