ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ದಿನಾಚರಣೆ ಮತ್ತು ಅವರು ಹುತಾತ್ಮರಾಗಿ ಈ ವರ್ಷಕ್ಕೆ 70 ವರ್ಷ ಆಗಲಿವೆ. ಇಂತಹ ಸನ್ನಿವೇಶದಲ್ಲಿ ಅವರು ಸಾವಿನ ಬಗ್ಗೆ ಹೊಂದಿದ್ದ ಅಭಿಪ್ರಾಯಗಳನ್ನು ಚರ್ಚಿಸುವುದು ಸೂಕ್ತವಾಗಿದೆ. ಗಾಂಧೀಜಿಯವರು ಸಾವಿನ ಕುರಿತು ಬರೆದದ್ದಾಗಲಿ ಅಥವಾ ಮಾತನಾಡದ ಬಗ್ಗೆ ಯಾವುದೇ ಆಯಾಮಗಳಿಲ್ಲ. ಆದರೆ, ಮೃತ್ಯುವಿನ ಕುರಿತು ಅವರು ಬಹಳ ಸಹವಿಸ್ತಾರವಾಗಿ ಚರ್ಚಿಸಿದ್ದಾರೆ. ತಮ್ಮ ರಾಜಕೀಯ ಜೀವನದ ಆರಂಭಿಕ ದಿನದಿಂದಲೂ ನಿರ್ಭಯತೆಗೆ ಹೆಚ್ಚಿನ ಒತ್ತು ನೀಡಿದ್ದಾರೆ. ನಿರ್ಭಯತೆಯೇ ಅವರನ್ನು ಎಲ್ಲ ರೀತಿಯ ಭೀತಿಗಳಿಂದ ಮುಕ್ತಗೊಳಿಸಿತ್ತು. ಸಾವಿನ ಭಯದಿಂದ ಸಹ ತಮ್ಮನ್ನು ತಾವು ಮುಕ್ತಗೊಳಿಸಿಕೊಳ್ಳಲು ಅದು ಅವರಿಗೆ ನೆರವಾಗಿತ್ತು.
ಸಾವಿಗೆ ಸಂಬಂಧಿಸಿದಂತೆ 'ದಕ್ಷಿಣ ಆಫ್ರಿಕಾದ ಸತ್ಯಾಗ್ರಹ' ಎಂಬ ತಮ್ಮ ಪುಸ್ತಕದಲ್ಲಿ ಬರೆದಿದ್ದಾರೆ. ಸಾವಿಗೆ ಸಂಬಂಧಿಸಿದಂತೆ ಪ್ರತಿಯೊಬ್ಬರೂ ಸರ್ವಶಕ್ತನ ಮೇಲೆ ಅಚಲವಾದ ನಂಬಿಕೆ ಹೊಂದಿರಬೇಕು. ಜನನ ಮತ್ತು ಮರಣದ ನಡುವಿನ ಅಂತರ- ಸಂಬಂಧವನ್ನು ವಿವರಿಸುತ್ತಾ... ಸಾವನ್ನು ಎದುರಿಸುವಾಗ 'ಜೀವನದಿಂದ ಬೇರ್ಪಟ್ಟ ನಂತರ ಒಬ್ಬ ಸ್ನೇಹಿತನನ್ನು ನೋಡುತ್ತಿದ್ದಾನೆ' ಎಂಬ ಸಂತೋಷವಿರಬೇಕು ಎಂದಿದ್ದರು.
ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಇದ್ದಾಗ ಸಾವು 'ದೀರ್ಘಕಾಲ ಬೇರ್ಪಟ್ಟ ಸ್ನೇಹಿತ'ನೆಂದು ಒಪ್ಪಿಕೊಂಡಿದ್ದರು ಎಂಬುದು ಇದರಿಂದ ಸಾಬೀತಾಗುತ್ತದೆ. 1926ರ ಡಿಸೆಂಬರ್ 30ರಂದು ಯಂಗ್ ಇಂಡಿಯಾದಲ್ಲಿ 'ಸಾವು ಕೇವಲ ಸ್ನೇಹಿತನಲ್ಲ, ಪ್ರೀತಿಯ ಒಡನಾಡಿ' ಎಂದು ಬರೆದಿದ್ದಾರೆ. ಆದರಿಂದ ಅವರಿಗೆ ಸಾವು ಭಯಾನಕ ಘಟನೆಯಾಗಿರಲಿಲ್ಲ. 'ಯಾವುದೇ ಸಮಯದಲ್ಲಿ ಬಂದೆರಗುವ ಸಾವು ಒಂದು ಅದೃಷ್ಟ' ಎಂದೇ ಹೇಳುತ್ತಿದ್ದರು. ಆದರೆ, ಈ ಅದೃಷ್ಟವು ತನ್ನ ಸತ್ಯದ ಗುರಿಯನ್ನು ಸಾಧಿಸಲು ಸಾಯುವ ಯೋಧನಿಗೆ ಎರಡು ಪಟ್ಟು ಹೆಚ್ಚಿನದು. ಇಲ್ಲಿ ಸತ್ಯದ ಮಾನ್ಯತೆ ನಿರ್ಭಯತೆಯೊಂದಿಗೆ ಬೇರೆತುಕೊಳ್ಳುತ್ತದೆ. ಇವುಗಳನ್ನು ಯಾವುದೇ ರೀತಿಯಿಂದಲೂ ಬೇರ್ಪಡಿಸಲು ಸಾಧ್ಯವಿಲ್ಲ ಎಂಬುದು ಅವರ ನಂಬಿಕೆ ಆಗಿತ್ತು. ಗಾಂಧೀಜಿಯವರು ತಮ್ಮ ಸತ್ಯತೆಯನ್ನು ಉಳಿಸಿಕೊಳ್ಳುಲು ತಮ್ಮ ಪ್ರಾಣವನ್ನಾರೂ ತ್ಯಾಗಮಾಡಲು ಸಿದ್ಧರಾಗಿದ್ದರು.