ದರ್ಭಂಗಾ (ಬಿಹಾರ): 13 ವರ್ಷದ ಬಾಲಕಿಯೊಬ್ಬಳು ತನ್ನ ತಂದೆಯನ್ನು ಸೈಕಲ್ನಲ್ಲಿ ಕೂರಿಸಿಕೊಂಡು ಸುಮಾರು 1,300 ಕಿಲೋ ಮೀಟರ್ ದೂರದ ತನ್ನ ಸ್ವಗ್ರಾಮಕ್ಕೆ ಕರೆತಂದಿದ್ದಾಳೆ.
13 ವರ್ಷದ ಜ್ಯೋತಿ ಹರಿಯಾಣದ ಗುರುಗ್ರಾಮ್ನಿಂದ 13,000 ಕಿ.ಮೀ ದೂರದ ಬಿಹಾರ್ನ ದರ್ಭಂಗದ ಸಿರ್ಹುಲ್ಲಿ ಗ್ರಾಮಕ್ಕೆ ಕರೆದುಕೊಂಡು ಬಂದಿದ್ದಾಳೆ. ತಂದೆ ಮೋಹನ್ ಪಾಸ್ವಾನ್ ಆಟೋ ಚಾಲಕರಾಗಿದ್ದು, ಜನವರಿಯಲ್ಲಿ ಅಪಘಾತಕ್ಕೀಡಾಗಿದ್ದರು.
ಸೈಕಲ್ನಲ್ಲಿ ತಂದೆಯನ್ನ ಸ್ವಗ್ರಾಮಕ್ಕೆ ಕರೆತಂದ 13 ವರ್ಷದ ಪುತ್ರಿ ತಂದೆ ಮತ್ತು ಮಗಳು ಹರಿಯಾಣದಲ್ಲಿರುವಾಗ ಲಾಕ್ಡೌನ್ ಘೋಷಣೆಯಾದ ಪರಿಣಾಮ ಅವರನ್ನು ಕೆಲಸದಿಂದ ತೆಗೆದ ಮಾಲೀಕ ಮನೆಗೆ ತೆರಳುವಂತೆ ಸೂಚನೆ ನೀಡಿದ್ದಾರೆ. ಈ ವೇಳೆ, ಅವರ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ದಿನಸಿ ತೆಗೆದುಕೊಳ್ಳುವ ತಂದೆಯ ಸಲಹೆ ತಿರಸ್ಕರಿಸಿದ ಪುತ್ರಿ ಒಂದು ಸೈಕಲ್ ತೆಗೆದುಕೊಂಡು ತಂದೆಯನ್ನು ಕೂರಿಸಿಕೊಂಡು 1,300 ಕಿ.ಮೀ. ಪ್ರಯಾಣಿಸಿದ್ದಾಳೆ.
ಈ ಬಗ್ಗೆ ಮಾತನಾಡಿರುವ ಜ್ಯೋತಿ, ನಮ್ಮ ಬಳಿ ಇದ್ದದ್ದು ಕೇವಲ 500 ರೂಪಾಯಿ ಮಾತ್ರ. ನಾವು ಅಲ್ಲೇ ಇದ್ದಿದ್ದರೆ ಹಸಿವಿನಿಂದ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು. ಹೀಗಾಗಿ ತಂದೆಯನ್ನು ಸೈಕಲ್ ಮೇಲೆ ಕೂರಿಸಿಕೊಂಡು ನಮ್ಮ ಊರಿಗೆ ಕರೆತಂದಿದ್ದೇನೆ ಎಂದು ಹೇಳಿದ್ದಾಳೆ. ಮೆ 9 ರಂದು ಹರಿಯಾಣದಿಂದ ಹೊರಟು 17 ರಂದು ಅಂದರೆ 8 ದಿನಗಳಲ್ಲಿ ಸ್ವಗ್ರಾಮ ತಲುಪಿದ್ದಾಳೆ.
--------------