ಕರ್ನಾಟಕ

karnataka

ETV Bharat / bharat

ಶುಭ ಶುಕ್ರವಾರದ ರಾಶಿಫಲ..ಇಂದು ಯಾರಿಗೆ ಏನೆಲ್ಲಾ ಲಾಭವಿದೆ..?

ಶುಕ್ರವಾರದ ರಾಶಿಭವಿಷ್ಯ

10 July 2020 ETV Bharat Astrology
ಶುಕ್ರವಾರದ ರಾಶಿಭವಿಷ್ಯ

By

Published : Jul 10, 2020, 5:00 AM IST

ಮೇಷ

ನಿಮಗೆ ದೊಡ್ಡ ಮಿತ್ರವೃಂದವಿದೆ, ಮತ್ತು ಅವರಲ್ಲಿ ಬಹುತೇಕರು ಸಾಂದರ್ಭಿಕ ಮಿತ್ರರಾದರೂ, ಕೆಲವೊಮ್ಮೆ ಅವರು ಅನುಕೂಲಕರವಾಗುತ್ತಾರೆ. ಕೆಲ ತಿರಸ್ಕಾರಗಳಿಂದ ನೀವು ಹೊರಬರಲು ನೆರವಾಗಬಹುದು. ಇದು ಮಿತ್ರರು ವಹಿಸುವ ಪಾತ್ರ ಕುರಿತೂ ತಿಳಿಸುತ್ತದೆ.

ವೃಷಭ

ನೀವು ಇಂದು ಜನರು ಮತ್ತು ವಸ್ತುಗಳ ಕುರಿತು ಅತ್ಯಂತ ಪೊಸೆಸಿವ್ ಭಾವನೆ ಅನುಭವಿಸುತ್ತೀರಿ. ಇದರ ಪರಿಣಾಮದಿಂದ ಪ್ರತಿಯೊಂದರ ಕುರಿತೂ ಮುಖ್ಯವಾಗಿ ಜನರ ಕುರಿತು ಅನುಮಾನ, ಅನಿಶ್ಚಿತತೆ ಮತ್ತು ಅಭದ್ರತೆಯ ಭಾವನೆ ಅನುಭವಿಸುತ್ತೀರಿ. ನಿಮಗೆ ಹತ್ತಿರವಾಗಿರುವವರ ಭಾವನೆಗಳು ಮತ್ತು ಉದ್ದೇಶಗಳನ್ನೂ ಅನುಮಾನಿಸುತ್ತೀರಿ. ಮನೆಯಲ್ಲಿ ಅಹಿತಕರ ಆತಂಕ ಮತ್ತು ಉದ್ವೇಗ ಇರುತ್ತದೆ. ಇದು ನಿಮಗೆ ಮುಖ್ಯವಾಗಿ ಸಂತೋಷದ ದಿನವಲ್ಲ. ವಿವೇಕ ಮತ್ತು ಎಚ್ಚರಿಕೆಯಿಂದ ವರ್ತಿಸಿ.

ಮಿಥುನ

ಮಿತ್ರರು ಮತ್ತು ಕುಟುಂಬದೊಂದಿಗೆ ಪ್ರವಾಸ ಹೋಗುವ ನಿಮ್ಮ ಬಯಕೆ ಅವರಿಗೆ ಪ್ರಚೋದನೆ ನೀಡುತ್ತದೆ, ಮತ್ತು ಇದನ್ನು ಯೋಜಿಸಲು ಪ್ರಾರಂಭಿಸುತ್ತೀರಿ. ಇದು ಪ್ರಯಾಣಕ್ಕೆ ಒಳ್ಳೆಯ ಸಮಯ ಮತ್ತು ನೀವು ಈ ಪ್ರವಾಸವನ್ನು ನಿಮ್ಮ ಬಜೆಟ್​​​​ನಲ್ಲಿ ಸಂತೃಪ್ತಿಕರವಾಗಿ ಜಾರಿಗೊಳಿಸುತ್ತೀರಿ.

ಕರ್ಕಾಟಕ

ನೀವು ಬದ್ಧತೆಯಿಂದ ಕೆಲಸ ಮಾಡಿದರೂ ತಿರಸ್ಕಾರಕ್ಕೆ ಒಳಗಾಗುತ್ತೀರಿ. ನಿಮ್ಮ ಮೇಲಧಿಕಾರಿಗಳು ನಿಮ್ಮ ಬದ್ಧತೆಯನ್ನಯ ಪೂರ್ಣ ಪ್ರಶಂಸೆ ಮಾಡುವುದಿಲ್ಲ. ಅದನ್ನು ಮನಸ್ಸಿಗೆ ತೆಗೆದುಕೊಳ್ಳಬೇಡಿ ಮತ್ತು ದುಃಖಿತರಾಗಬೇಡಿ. ಕೊನೆಯಲ್ಲಿ ನಿಮ್ಮ ದೃಢತೆಯಿಂದ ಮತ್ತು ದಿಟ್ಟತೆಯಿಂದ ಗೆಲ್ಲುತ್ತೀರಿ. ಸಂಜೆ ವೇಳೆಗೆ ನಿಮಗೆ ಆತಂಕದ ಕ್ಷಣಗಳ ಸಾಧ್ಯತೆ ಇದೆ.

ಸಿಂಹ

ಇಂದು ನಿಮ್ಮ ಸಂಗಾತಿಯನ್ನು ಸಂತೋಷಗೊಳಿಸಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತೀರಿ. ಆದ್ದರಿಂದ ನೀವು ಜಾರುವ ಸಾಧ್ಯತೆ ಬಹಳ ಕಡಿಮೆ. ಇಂದು ನಿಮ್ಮ ಸಂಗಾತಿಯನ್ನು ಮೆಚ್ಚಿಸಲು ಶಕ್ತರಾಗುತ್ತೀರಿ. ನಿಮ್ಮ ಎಲ್ಲಾ ಹಣಕಾಸು ವ್ಯವಹಾರಗಳಲ್ಲೂ ಎಚ್ಚರಿಕೆ ವಹಿಸಬೇಕು.

ಕನ್ಯಾ

ಜೀವನದಲ್ಲಿ ತಿರುವಿನ ಅಂಶ ಅಗತ್ಯ. ನೀವು ಇಂದು ಏನು ಮಾಡಿದರೂ ಅದರಲ್ಲಿ ಉತ್ತಮ ಸಾಧನೆ ಮಾಡುತ್ತೀರಿ. ಹಣಕಾಸು ಮತ್ತು ಬಾಂಧವ್ಯಗಳು ಆದ್ಯತೆಯ ಪಟ್ಟಿಯಲ್ಲಿ ಮುಖ್ಯವಾಗಿವೆ, ಆದರೆ ಅದೇ ಕ್ರಮದಲ್ಲಿಲ್ಲ. ನೀವು ದೇವರನ್ನು ಪ್ರಾರ್ಥಿಸುತ್ತಾ ಸಾಕಷ್ಟು ಸಮಯ ಕಳೆಯುತ್ತೀರಿ.

ತುಲಾ

ನೀವು ಇಂದು ಹೊಸ ವಿಷಯಗಳ ಬಗ್ಗೆ ಜ್ಞಾನ ಪಡೆಯಲು ಪ್ರಯತ್ನಿಸುತ್ತೀರಿ. ಉತ್ಸಾಹ ಮತ್ತು ಸಕಾರಾತ್ಮಕತೆ ಅನುಭವಿಸುತ್ತೀರಿ. ಮಿತ್ರರೊಂದಿಗೆ ಮಾತನಾಡುವಾಗ ಹೆಚ್ಚು ಆಸಕ್ತಿ ತೋರುತ್ತೀರಿ. ಇದು ನಿಮ್ಮನ್ನು ಅವರಿಗೆ ಹತ್ತಿರವಾಗಿಸುತ್ತದೆ. ನಿಮ್ಮ ಜೀವನ ಸಂಗಾತಿಯಿಂದ ನಿಮಗೆ ಅನುಕೂಲಗಳಿವೆ. ಆತ್ಮೀಯ ಬಂಧುವಿನ ಜೊತೆಯಲ್ಲಿ ಸಂತೋಷವಾಗಿರುತ್ತೀರಿ.

ವೃಶ್ಚಿಕ

ನೀವು ಇಂದು ಬಾಸ್ ದುರಾಗ್ರಹಕ್ಕೆ ಪಾತ್ರರಾಗಬೇಕು. ನಿಮ್ಮ ಸಹೋದ್ಯೋಗಿಗಳು ಅರೆಮನಸ್ಸಿನಿಂದ ಬೆಂಬಲಿಸುತ್ತಾರೆ. ಉದ್ಯೋಗದ ಅವಕಾಶ ಎದುರು ನೋಡುತ್ತಿರುವ ಹೊಸಬರು ಸಂದರ್ಶನಗಳಲ್ಲಿ ಯಶಸ್ಸು ಕಾಣುತ್ತಾರೆ.

ಧನು

ಮಾತುಗಳಲ್ಲಿ ಜ್ಞಾನ ಮತ್ತು ಕೃತ್ಯಗಳಲ್ಲಿ ನಾಯಕ- ಇದು ನಿಮ್ಮ ಇಂದಿನ ಅವತಾರ. ಕೆಲಸದಲ್ಲಿ ಶುಭ ಸುದ್ದಿ ನಿರೀಕ್ಷಿಸಿ, ಅದರಲ್ಲೂ ವೇತನ ಹೆಚ್ಚಳ ಅಥವಾ ಕಚೇರಿಯ ಸ್ಥಳಾವಕಾಶದಲ್ಲಿ ಹೆಚ್ಚಳವಾಗಬಹುದು. ಅಕೌಂಟೆಂಟ್​​​​​​ಗಳು ಮತ್ತು ಫ್ರಾಂಚೈಸಿಗಳಿಗೆ ಕೂಡಾ ಇಂದು ಒಳ್ಳೆಯ ದಿನ.

ಮಕರ

ನೀವು ಅತ್ಯಂತ ಪ್ರಣಯಿ ಮತ್ತು ನಿಮ್ಮ ಪ್ರಿಯತಮೆಯನ್ನು ಮನ ಒಲಿಸಲು ಪ್ರತಿ ಯೋಜನೆಯೊಂದಿಗೆ ನೀವು ಆಕೆಯನ್ನು ಆಗಸದಲ್ಲಿ ತೇಲಾಡಿಸುತ್ತೀರಿ. ಆದರೆ ಕಲ್ಪನಾ ಜಗತ್ತಿನಲ್ಲಿ ತೇಲಾಡಬೇಡಿ. ಏಕೆಂದರೆ ಸಮಸ್ಯೆಗಳು ನೀವು ಹೋದಲ್ಲಿಗೆ ಅನುಸರಿಸುತ್ತಿವೆ. ನೀವು ವ್ಯಾಪಾರಿಯಾದರೆ, ನಿಮ್ಮ ವಿರೋಧಿಗಳು ನಿಮಗೆ ಕಷ್ಟ ನೀಡುತ್ತಾರೆ. ನಿಮ್ಮ ಆರೋಗ್ಯ ಕುರಿತು ಎಚ್ಚರ ವಹಿಸಿ.

ಕುಂಭ

ನಿಮ್ಮನ್ನು ನೀವು ಸಾಬೀತುಪಡಿಸಿಕೊಳ್ಳಲು ಇಂದು ಒಳ್ಳೆಯ ದಿನ. ವಿರೋಧಿಗಳ ಯೋಜನೆಗಳನ್ನೂ ತಲೆಕೆಳಗು ಮಾಡುತ್ತೀರಿ, ಅದು ನಿಮಗೆ ಅನುಕೂಲವಾಗುತ್ತದೆ. ವಿದ್ವಾಂಸರಾಗಲು ಅದು ನಿಮಗೆ ಅಗತ್ಯ. ಅದರಲ್ಲೂ ಕಷ್ಟದ ಸಮಯದಲ್ಲಿ ನಿಮ್ಮ ಗುಣದ ಸಾಮರ್ಥ್ಯ ಸಾಬೀತುಪಡಿಸುತ್ತೀರಿ.

ಮೀನ

ನೀವು ಹಣದ ಬೆನ್ನು ಹತ್ತಿದ ವ್ಯಕ್ತಿಯಲ್ಲ. ಭವಿಷ್ಯಕ್ಕೆ ನಿಮ್ಮ ಹಣ ಯೋಜಿಸುವುದು ನಿಜಕ್ಕೂ ಸುಲಭವಲ್ಲ. ಪ್ರತಿದಿನವನ್ನೂ ಅದು ಬಂದಂತೆ ತೆಗೆದುಕೊಳ್ಳುತ್ತೀರಿ. ಆದರೆ, ಇಂದು ನಿಮಗೆ ಒಂದು ಬಗೆಯ ಸಾಕ್ಷಾತ್ಕಾರವಾಗುತ್ತದೆ ಮತ್ತು ಜೀವನ ಕುರಿತು ಹೆಚ್ಚು ಗಂಭೀರವಾಗುತ್ತೀರಿ. ಅಂತಿಮವಾಗಿ ನಿಮ್ಮ ಹಣಕಾಸಿನ ಯೋಜನೆಯ ಮೌಲ್ಯ ಕಂಡುಕೊಳ್ಳುತ್ತೀರಿ. ಅದನ್ನು ಅಪಮೌಲ್ಯ ಮಾಡದಿರಿ.

ABOUT THE AUTHOR

...view details