ಕರ್ನಾಟಕ

karnataka

ETV Bharat / bharat

ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ಅನುಮೋದನೆ ನೀಡಿದ ಡಿಸಿಜಿಐ - ಭಾರತ್​ ಬಯೋಟೆಕ್​​ ಸಂಸ್ಥೆ ಪ್ರಯೋಗಕ್ಕೆ ಡಿಸಿಜಿಐ ಅನುಮೋದನೆ

ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಗ್ರೀನ್​ ಸಿಗ್ನಲ್​ ನೀಡಿರುವ ಡಿಸಿಜಿಐನ ವಿಷಯ ತಜ್ಞರ ಸಮಿತಿಯು(ಎಸ್‌ಇಸಿ) ಪ್ರಯೋಗಗಳಿಗಾಗಿ ತನ್ನ ಪರಿಷ್ಕೃತ ಪ್ರೋಟೋಕಾಲ್ ಅನ್ನು ಸಲ್ಲಿಸಲು ಭಾರತ್‌ ಬಯೋಟೆಕ್‌ ಸಂಸ್ಥೆಗೆ ತಿಳಿಸಿದೆ..

Bharat Biotech got SEC approval for phase 3 clinical trials of covid booster intranasal vaccine
ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ಅನುಮೋದನೆ ನೀಡಿದ ಡಿಸಿಜಿಐ

By

Published : Jan 5, 2022, 4:16 PM IST

ನವದೆಹಲಿ: ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗ ನಡೆಸಲು ಭಾರತ್​ ಬಯೋಟೆಕ್​​ ಸಂಸ್ಥೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಅನುಮೋದನೆ ನೀಡಿದೆ. ಭಾರತದ ಮೊದಲ ಸ್ಥಳೀಯ ಕೋವಿಡ್ ಲಸಿಕೆ ಕೋವ್ಯಾಕ್ಸಿನ್‌ ನಾಸಲ್‌ ರೂಪದಲ್ಲಿ ಲಭ್ಯವಾಗಲಿದೆ.

ಇದನ್ನ ಮೂಗಿನ ಮೂಲಕ ಬಳಸಬಹುದಾಗಿದೆ. ಡೋಸೇಜ್ ಅನ್ನು ವಯಸ್ಕರು ಮತ್ತು ಮಕ್ಕಳಿಗೆ ಸಮಾನವಾಗಿ ನೀಡಬಹುದಾಗಿದೆ. ಮಕ್ಕಳಿಗೆ ತುಂಬಾ ಸೂಕ್ತವಾಗಿದೆ ಎಂದು ಭಾರತ್‌ ಬಯೋಟೆಕ್‌ ಸ್ಪಷ್ಟಪಡಿಸಿದೆ.

ಇಂಟ್ರಾನಾಸಲ್ ಲಸಿಕೆ (BBV154) ಸೋಂಕು ಪ್ರಸರಣವನ್ನು ತಡೆಗಟ್ಟುವ ಸಾಮರ್ಥ್ಯ ಹೊಂದಿದೆ. ಇದರ 3ನೇ ಹಂತದ ಪ್ರಯೋಗಗಳು ಇನ್ನು ಪ್ರಾರಂಭವಾಗಲಿದೆ. ನಾಸಲ್‌ ಲಸಿಕೆ ಆಕ್ರಮಣಶೀಲವಲ್ಲದ, ಸೂಜಿ ಮುಕ್ತ, ಸುಲಭವಾದ ಲಸಿಕೆ. ಮಕ್ಕಳಿಗೆ ಮತ್ತು ವಯಸ್ಕರಿಗೆ ಸೂಕ್ತವಾಗಿದೆ. ಇದು ಅಳೆಯಲು ಸುಲಭವಾಗಿದೆ ಎಂದು ಭಾರತ್ ಬಯೋಟೆಕ್‌ನ ಮೂಲಗಳು ತಿಳಿಸಿವೆ.

ಇಂಟ್ರಾನಾಸಲ್ ಲಸಿಕೆಯ 3ನೇ ಹಂತದ ಪ್ರಯೋಗಕ್ಕೆ ಗ್ರೀನ್​ ಸಿಗ್ನಲ್​ ನೀಡಿರುವ ಡಿಸಿಜಿಐನ ವಿಷಯ ತಜ್ಞರ ಸಮಿತಿಯು(ಎಸ್‌ಇಸಿ) ಪ್ರಯೋಗಗಳಿಗಾಗಿ ತನ್ನ ಪರಿಷ್ಕೃತ ಪ್ರೋಟೋಕಾಲ್ ಅನ್ನು ಸಲ್ಲಿಸಲು ಭಾರತ್‌ ಬಯೋಟೆಕ್‌ ಸಂಸ್ಥೆಗೆ ತಿಳಿಸಿದೆ.

ಇದನ್ನೂ ಓದಿ:ವಾಯುಪಡೆ ಅಧಿಕಾರಿಗಳಿದ್ದ ಹೆಲಿಕಾಪ್ಟರ್‌ ತುರ್ತು ಭೂಸ್ಪರ್ಶ; ತಪ್ಪಿದ ಅನಾಹುತ

ಭಾರತ್‌ ಬಯೋಟೆಕ್‌ ಸಂಸ್ಥೆ 5,000 ಆರೋಗ್ಯವಂತ ವ್ಯಕ್ತಿಗಳ ಮೇಲೆ ಈ ಪ್ರಯೋಗಗಳನ್ನು ನಡೆಸಲು ಯೋಜಿಸಿದೆ. ಅವರಲ್ಲಿ ಶೇ.50ರಷ್ಟು ಜನರು ಕೋವಿಶೀಲ್ಡ್ ಅನ್ನು ಪಡೆದಿದ್ದಾರೆ ಮತ್ತು ಉಳಿದೆ ಶೇ.50ರಷ್ಟು ಜನರು ಕೋವಾಕ್ಸಿನ್‌ ಪಡೆದಿದ್ದಾರೆ. ಲಸಿಕೆಯ 2 ಡೋಸ್​​ಗಳನ್ನು ಪಡೆದ 6 ತಿಂಗಳ ನಂತರ COVID-19 ಬೂಸ್ಟರ್ ಡೋಸ್ ಅನ್ನು ಕೊಡಲು ಸಂಸ್ಥೆ ಶಿಫಾರಸು ಮಾಡಿದೆ.

ABOUT THE AUTHOR

...view details