ಬೇತುಲ್ (ಮಧ್ಯಪ್ರದೇಶ):ವಿವಾಹ ಸಮಾರಂಭದಲ್ಲಿದ್ದ ಮನೆಯಲ್ಲಿ ಇದ್ದಕ್ಕಿದ್ದಂತೆ ದುರಂತವೊಂದು ನಡೆದಿದೆ. ಹಾಡಿಗೆ ತಕ್ಕಂತೆ ಉತ್ಸಾಹದಿಂದ ಖುಷಿ ಖುಷಿಯಾಗಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿವೋರ್ವ ದಿಢೀರ್ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಹೃದಯವಿದ್ರಾವಕ ಘಟನೆ ಬೇತುಲ್ ಜಿಲ್ಲೆಯ ಡೋರಿ ಗ್ರಾಮದಲ್ಲಿ ಸಂಭವಿಸಿದೆ.
ಹಾಡೊಂದಕ್ಕೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಸಡನ್ ಆಗಿ ನೆಲದ ಮೇಲೆ ಬಿದ್ದಿದ್ದಾನೆ. ಅಲ್ಲಿದ್ದವರು ಆತನಿಗೆ ಏನಾಯಿತು ಎಂಬುದನ್ನು ಅರಿಯುವಷ್ಟರಲ್ಲಿ ಆತನ ಪ್ರಾಣಪಕ್ಷಿ ಹಾರಿ ಹೋಗಿತ್ತು. ಕೆಲವರು ಆತ ಬಿದ್ದಾಗ ತಮಾಷೆ ಮಾಡುತ್ತಿದ್ದಾನೆಂದು ಅಂದುಕೊಂಡಿದ್ದಾರೆ. ಆದ್ರೆ ಯಾರೊಬ್ಬರು ಸಹ ಈತ ಮೃತಪಟ್ಟಿದ್ದಾನೆ ಎಂಬುದನ್ನು ಊಹೆ ಸಹ ಮಾಡಿರಲಿಲ್ಲ.