ಹೈದರಾಬಾದ್: ಮಾನವನನ್ನು ಭೂಮಿಯ ಮೇಲಿನ ಅತ್ಯಂತ ಬುದ್ಧಿವಂತ ಜೀವಿಗಳೆಂದು ಪರಿಗಣಿಸಲಾಗುತ್ತದೆ. ಇದಕ್ಕೆ ಕಾರಣ ಮಾನವನು ಇತರ ಪ್ರಾಣಿಗಳ, ಸಸ್ಯಗಳ ಮತ್ತು ಕೀಟಗಳ ಬಗ್ಗೆ ಹೊಂದಿರುವ ಸಹಾನುಭೂತಿಯ ಭಾವನೆ. ಜಗತ್ತನ್ನು ಜಾತಿ,ಮತ, ಧರ್ಮದ ಚೌಕಟ್ಟಿನಿಂದ ಏಕತೆಯ ಬಂಧನದಲ್ಲಿ ಬಂಧಿಸುವ ಏಕೈಕ ಸಾಧನ ಎಂದರೆ ದಯೆ.
ಆದರೂ ಈ ಪ್ರಪಂಚದಲ್ಲಿ ಕರುಣೆ ಇಲ್ಲದ ಮನುಜರು ಇದ್ದಾರೆ. ಇದಕ್ಕೆ ಇತ್ತೀಚಿಗಿನ ಉದಾಹರಣೆಯೆಂದರೆ ರಷ್ಯಾ - ಉಕ್ರೇನ್ ಯುದ್ಧ. ಈ ಯದ್ಧವನ್ನು ಸಾಮಾನ್ಯ ಮನುಷ್ಯರೇ ಮಾಡಿದ್ದು ಸಾವಿರಾರು ಜನರ, ಸೈನಿಕರ, ಪ್ರಾಣಿಗಳ ಜೀವ ಹೋಗಲು ಕಾರಣವಾಗಿದ್ದಾರೆ, ಇದೇ ಯುದ್ಧ ಇನ್ನೂ ಮುಂದುವರೆಯುತ್ತಲೇ ಇದೆ.
ಜನರಲ್ಲಿ ದಯೆಯ ಭಾವನೆಯನ್ನು ಜಾಗೃತಗೊಳಿಸಲು ಮತ್ತು ಶಾಂತಿಯನ್ನು ಉತ್ತೇಜಿಸಲು ಪ್ರತಿ ವರ್ಷ ನವೆಂಬರ್ 13 ರಂದು ವಿಶ್ವ ದಯೆ ದಿನವನ್ನು ಆಚರಿಸಲಾಗುತ್ತದೆ. "ಸಾಧ್ಯವಾದಾಗಲೆಲ್ಲಾ ದಯೆಯಿಂದಿರಿ" ಎಂಬುದು ಈ ಬಾರಿಯ ಥೀಮ್ ಆಗಿರುವುದರ ಜೊತೆಗೆ, ಜನರಿಗೆ ದಯೆಯ ಶಕ್ತಿ ಮತ್ತು ಉತ್ತಮ ಸಮಾಜ ನಿರ್ಮಾಣದಲ್ಲಿ ಅದರ ಪ್ರಭಾವದ ಬಗ್ಗೆ ಅರಿವು ಮೂಡಿಸುವುದು ಈ ದಿನದ ಉದ್ದೇಶವಾಗಿದೆ.
ಈ ದಿನವನ್ನು ವಿಶ್ವಸಂಸ್ಥೆಯು ಗುರುತಿಸದಿದ್ದರೂ, ಇದನ್ನು ಪ್ರಪಂಚದಾದ್ಯಂತ ಆಚರಿಸಲಾಗುತ್ತದೆ. ಹಾಗೆ ಈ ಒಂದು ದಿನವು ಅಗತ್ಯ ಇರುವವರಿಗೆ ಸಹಾಯ ಮಾಡಲು ಹೊರಡುವ ಎಲ್ಲ ರೀತಿಯ ದಯಾ ಹೃದಯಿಗಳ ಆಚರಣೆಯಾಗಿದೆ.