ಬಂದೇಲ್ (ಪ.ಬಂಗಾಳ): ಬಂದೇಲ್ ನಿಲ್ದಾಣವನ್ನು ವಿಶ್ವದರ್ಜೆಯ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಗೆ ಒಳಪಡಿಸಲಾಗುತ್ತದೆ ಎಂದು ಗುತ್ತಿಗೆದಾರ ಸಂಸ್ಥೆ ಪರಮ್ ಎಂಟರ್‌ಪ್ರೈಸಸ್ ಈ ಹಿಂದೆ ಹೇಳಿತ್ತು. ಅದರಂತೆ ಬಂದೇಲ್ ನಿಲ್ದಾಣದ ಹೆಸರನ್ನು ಈಗ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ಸೇರಿಸಲು ಶಿಫಾರಸು ಮಾಡಿದೆ.
ಗುತ್ತಿಗೆದಾರ ಸಂಸ್ಥೆಯ ಪ್ರಕಾರ, ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯಿಂದ ರೈಲು ಮಾರ್ಗಗಳನ್ನು ಬದಲಾಯಿಸುವ ದೇಶದಲ್ಲಿ ನೂರಕ್ಕೂ ಹೆಚ್ಚು ನಿಲ್ದಾಣಗಳಿವೆ. ಖರಗ್‌ಪುರದ ಇಂಟರ್‌ಲಾಕಿಂಗ್ ವ್ಯವಸ್ಥೆಯಲ್ಲಿ 800 ಮಾರ್ಗಗಳಿವೆ. ಅಂದರೆ, ರೈಲು ನಿಲ್ದಾಣಕ್ಕೆ ಪ್ರವೇಶಿಸಲು ಮತ್ತು ನಿರ್ಗಮಿಸಲು 800 ಮಾರ್ಗಗಳನ್ನು ಅನುಸರಿಸಲಬಹುದು.
ಅದೇ ರೀತಿ ಬಂದೇಲ್ ನಿಲ್ದಾಣವನ್ನು ಇತ್ತೀಚೆಗೆ ಆಧುನಿಕ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ವ್ಯವಸ್ಥೆಯ ಅಡಿಯಲ್ಲಿ ತರಲಾಗಿದೆ. ನಿಲ್ದಾಣದ ಎರಡೂ ಬದಿಯಲ್ಲಿ ಒಟ್ಟು 1,002 ಇಂಟರ್‌ಲಾಕಿಂಗ್ ಮಾರ್ಗಗಳಿವೆ. ಇದು ವಿಶ್ವದ ಅತಿದೊಡ್ಡ ಎಲೆಕ್ಟ್ರಾನಿಕ್ ಇಂಟರ್‌ಲಾಕಿಂಗ್ ಸಿಸ್ಟಮ್ ಎಂದು ಹೇಳಿಕೊಂಡಿದೆ.
ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಸ್ಥಾನ ಪಡೆಯಲಿದೆ ಬಂದೇಲ್ ರೈಲು ನಿಲ್ದಾಣ ಈಸ್ಟರ್ನ್ ರೈಲ್ವೆ ಇತ್ತೀಚೆಗೆ ಈ ಬಂದೇಲ್ ನಿಲ್ದಾಣದಲ್ಲಿ ಈ ತಂತ್ರಜ್ಞಾನ ಅಳವಡಿಸಿದೆ. ಈ ಇಂಟರ್‌ಲಾಕಿಂಗ್ ವ್ಯವಸ್ಥೆಯನ್ನು ಹೊಂದಿರುವುದರಿಂದ ರೈಲ್ವೆಗೆ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತದೆ. ವೇಗವಾಗಿ ಮತ್ತು ಹೆಚ್ಚು ಸುರಕ್ಷಿತ ಸೇವೆಯನ್ನು ಇದು ಒದಗಿಸಲಿದೆ.
ಹಲವೆಡೆ ಈ ವ್ಯವಸ್ಥೆ ಈಗಾಗಲೇ ಜಾರಿಯಲ್ಲಿದೆಯಾದರೂ ಸಹ ಬಂದೇಲ್‌ನಲ್ಲಿ ಅತಿ ದೊಡ್ಡಮಟ್ಟದಲ್ಲಿ ಇಂತಹ ವ್ಯವಸ್ಥೆ ನಿರ್ಮಿಸಲಾಗಿದೆ. ಪರಿಣಾಮ ಇದು ವಿಶ್ವದ ಅತಿದೊಡ್ಡ ಇಂಟರ್‌ಲಾಕಿಂಗ್ ವ್ಯವಸ್ಥೆಯುಳ್ಳ ನಿಲ್ದಾಣವಾಗಿದೆ. ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ಗೆ ಬಂದೇಲ್ ಸೇರ್ಪಡೆಗಾಗಿ ನಾವು ಅರ್ಜಿ ಸಲ್ಲಿಸಿದ್ದೇವೆ.
ಅವರು ಅರ್ಜಿಯನ್ನು ಸ್ವೀಕರಿಸಿದ್ದು, ಇಲ್ಲಿಗೆ ಬಂದು ಪರೀಕ್ಷಿಸಿ, ಅನುಮೋದನೆ ನೀಡುವುದು ಬಾಕಿ ಇದೆ. ಇದು ಅನುಮೋದನೆಗೊಂಡರೆ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಬಂದೇಲ್ ನಿಲ್ದಾಣದ ಹೆಸರು ನಮೂದಾಗುತ್ತದೆ ಎಂದು ಪರಮ್ ಎಂಟರ್‌ಪ್ರೈಸ್‌ನ ವ್ಯವಸ್ಥಾಪಕ ನಿರ್ದೇಶಕ ಪುನೀತ್ ಪಾಠಕ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕಾನೂನು ವಿರುದ್ಧವಾಗಿ ಸಹಾಯ ಮಾಡುವುದಿಲ್ಲ ಎಂದ ಖಾದರ್ : ಹಿಜಾಬ್ ವಿದ್ಯಾರ್ಥಿನಿಯರ ಆರೋಪಕ್ಕೆ ಗರಂ