ಕರ್ನಾಟಕ

karnataka

ETV Bharat / bharat

ಜಮ್ಮು-ಕಾಶ್ಮೀರದಲ್ಲಿ ಸೇನಾ ವಾಹನದಲ್ಲೆ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

ಸೋಮವಾರ ರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಶಾ ಕಾರ್ಯಕರ್ತೆ ನಾರಿಕೂಟ್​ನಿಂದ ಕಲರೂಸ್​ ಆಸ್ಪತ್ರೆಗೆ ಆ್ಯಂಬುಲೆನ್ಸ್​ಗಾಗಿ ಕರೆ ಮಾಡಿದ್ದಾರೆ. ಆದರೆ ದಾರಿಯಲ್ಲಿ ಹಿಮಪಾತದಿಂದಾಗಿ ಆ್ಯಂಬುಲೆನ್ಸ್​ ಬರುವುದಕ್ಕೆ ಸಾಧ್ಯವಿಲ್ಲ ಎಂದು ಆಸ್ಪತ್ರೆ ತಿಳಿಸಿದೆ.

ಸೇನಾ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ
ಸೇನಾ ವಾಹನದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ಮಹಿಳೆ

By

Published : Feb 2, 2021, 6:40 AM IST

ಕುಪ್ವಾರ(ಜಮ್ಮು-ಕಾಶ್ಮೀರ): ಸೋಮವಾರ ಮಧ್ಯರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಪ್ವಾರ ಜಿಲ್ಲೆಯಲ್ಲಿ ಮಹಿಳೆಯೊಬ್ಬರು ಸೇನಾ ವಾಹನದಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ಘಟನೆ ನಡೆದಿದೆ.

ಸೋಮವಾರ ರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಶಾ ಕಾರ್ಯಕರ್ತೆ ನಾರಿಕೂಟ್​ನಿಂದ ಕಲರೂಸ್​ ಆಸ್ಪತ್ರೆಗೆ ಆ್ಯಂಬುಲೆನ್ಸ್​ಗಾಗಿ ಕರೆ ಮಾಡಿದ್ದಾರೆ. ಆದರೆ ದಾರಿಯಲ್ಲಿ ಹಿಮಪಾತದಿಂದಾಗಿ ಆ್ಯಂಬುಲೆನ್ಸ್​ ಬರುವುದಕ್ಕೆ ಸಾಧ್ಯವಿಲ್ಲ ಎಂದು ಆಸ್ಪತ್ರೆ ತಿಳಿಸಿದೆ.

ತಕ್ಷಣ ಸೇನಾ ವೈದ್ಯಕೀಯ ತಂಡದೊಂದಿಗೆ ಮಹಿಳೆಯನ್ನು ಸೇನಾ ವಾಹನದಲ್ಲಿ ನಾರಿಕೂಟ್​ಗೆ ಸ್ಥಳಾಂತರಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ತೆರಳುತ್ತಿದ್ದ ದಾರಿಯಲ್ಲೆ ಮಹಿಳೆಗೆ ಹೆರಿಗೆ ನೋವು ಹೆಚ್ಚಾಗಿದೆ. ಮಹಿಳೆ ಜೊತೆಯಲ್ಲಿದ್ದ ಆಶಾ ಕಾರ್ಯಕರ್ತೆ ಸದಿಯಾ ಬೇಗಂ ವಾಹನವನ್ನು ನಿಲ್ಲಿಸಲು ಕೇಳಿಕೊಂಡಿದ್ದಾರೆ. ಮಹಿಳೆಯ ಸ್ಥಿತಿ ಗಂಭೀರವಾಗಿದ್ದರಿಂದ ಆಶಾ ಕಾರ್ಯಕರ್ತೆ ದಟ್ಟವಾದ ಮಂಜು ಆವರಿಸಿದ್ದರೂ ಸೇನೆ ವೈದ್ಯಕೀಯ ತಂಡದ ಸಹಾಯದೊಂದಿಗೆ ಹೆರಿಗೆ ಮಾಡಿಸಲು ನಿರ್ಧರಿಸಿದ್ದಾರೆ.

ಅದೃಷ್ಟವಶಾತ್​ ಯಾವುದೇ ಅಪಾಯವಿಲ್ಲದೆ ಸೇನೆಯ ಜೀಪಿನಲ್ಲಿ ಮಹಿಳೆ ಹೆಣ್ಣುಮಗುವಿಗೆ ಜನ್ಮನೀಡಿದ್ದಾಳೆ. ತಕ್ಷಣ ಮಹಿಳೆ ಮತ್ತು ಮಗುವನ್ನು ಕಲರೂಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ.

​ ಮಗುವಿನ ಕುಟುಂಬಕ್ಕೆ ಅಭಿನಂದನೆ ಸಲ್ಲಿಸಿರುವ ಸೇನಾ ಕಮಾಂಡರ್, ಸೇನೆ ವೈದ್ಯಕೀಯ ತಂಡದ ಸಹಾಯದಿಂದ ಜೀಪಿನಲ್ಲಿ ಹೆರಿಗೆ ಮಾಡಿಸುವ ದೈರ್ಯ ತೋರಿದ ಆಶಾಕಾರ್ಯಕರ್ತೆಯ ಕಾರ್ಯಕ್ಷಮತೆಯನ್ನು ಕೊಂಡಾಡಿದ್ದಾರೆ.

ABOUT THE AUTHOR

...view details