ನವದೆಹಲಿ: ಜಾರ್ಖಂಡ್ ಆಯುಷ್ ಸಚಿವಾಲಯದ ಅಧಿಕೃತ ವೆಬ್ಸೈಟ್ ಮಾಹಿತಿಗಳನ್ನು ಉಲ್ಲಂಘಿಸಿ ಸೋರಿಕೆ ಆಗಿದ್ದು, 3.2 ಲಕ್ಷ ರೋಗಿಗಳ ಮಾಹಿತಿ ಡಾರ್ಕ್ ವೆಬ್ನಲ್ಲಿ ಬಹಿರಂಗಗೊಂಡಿದೆ ಎಂದು ಹೊಸ ವರದಿಯೊಂದು ತಿಳಿಸಿದೆ.
ಸೈಬರ್ ಸೆಕ್ಯೂರಿಟಿ ಕಂಪನಿ ಕ್ಲಡ್ಸೆಕ್ ಪ್ರಕಾರ, ವೆಬ್ಸೈಟ್ನ ಡಾಡಾಬೇಸ್, ಸುಮಾರು 7.3 ಎಂಬಿ ಅಷ್ಟು ರೋಗಿಗಳ ದಾಖಲಾತಿ ಉಲ್ಲಂಘನೆ ಆಗಿದ್ದು, ಇದು ಡಾರ್ಕ್ ವೆಬ್ನಲ್ಲಿ ಪ್ರಕಟಗೊಂಡಿದೆ. ಇದರಲ್ಲಿ ರೋಗಿಗಳು ಮತ್ತು ವೈದ್ಯರ ವೈಯಕ್ತಿಕ ಗುರುತಿನ ಮಾಹಿತಿ (ಪಿಐಐ) ಮತ್ತು ವೈದ್ಯಕೀಯ ದಾಖಲಾತಿ ಮಾಹಿತಿ ಕೂಡ ಒಳಗೊಂಡಿತ್ತು. ಈ ದತ್ತಾಂಶದಲ್ಲಿ ಡಾಕ್ಟರ್ ಸೇರಿದಂತೆ ರೋಗಿಗಳ ಪಿಐಐ, ಲಾಗಿನ್ ಮಾಹಿತಿ, ಯಸರ್ ನೇಮ್ ಪಾಸ್ವರ್ಡ್ ಮತ್ತು ಫೋನ್ ನಂಬರ್ ಒಳಗೊಂಡಂತೆ ಸೂಕ್ಷ್ಮ ಮಾಹಿತಿ ಹೊಂದಿತು. ದತ್ತಾಂಶಗಳನ್ನು ಬೆದರಿಕೆ ನಟರೊಬ್ಬರ ಹೆಸರಿನಲ್ಲಿ ಉಲ್ಲಂಘನೆ ಮಾಡಲಾಗಿದೆ.
ಆಯುಷ್ ವೆಬ್ಸೈಟ್ ಆಯುರ್ವೇದ, ಯೋಗ, ನೇಚರೋಪತಿ, ಯುನಾನಿ, ಸಿದ್ದ ಮತ್ತು ಹೋಮಿಯೋಪತಿ ಚಿಕಿತ್ಸೆಯ ಕುರಿತಾದ ನಿರ್ಣಾಯಕ ಮಾಹಿತಿಗಳನ್ನು ಒಳಗೊಂಡಿದೆ.
ದತ್ತಾಂಶಗಳ ಸೋರಿಕೆ: ದತ್ತಾಂಶ ಮತ್ತು ಜಾರ್ಖಂಡ್ ಆಯುಷ್ ವೆಬ್ಸೈಟ್ ನಡುವಿನ ಲಿಂಕ್ ಅನ್ನು ಸಾರ್ವಜನಿಕವಾಗಿ ಪ್ರವೇಶಿಸಬಹುದಾದ ದತ್ತಾಂಶದೊಂದಿಗೆ ಪಡೆಯಲಾಗಿದೆ. ನಟರೊಬ್ಬರು ಹಂಚಿಕೊಂಡ ಚಾಟ್ಬಾಟ್ ಮತ್ತು ಬ್ಕಾಗ್ ಪೋಸ್ಟ್ ದತ್ತಾಂಶವನ್ನು ಸ್ಥಾಪಿಸಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.