ಕರ್ನಾಟಕ

karnataka

ETV Bharat / bharat

'ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಜಲ ಸಮಾಧಿಯಾಗಲಿದ್ದೇನೆ'

ಅಲ್ಪಸಂಖ್ಯಾತರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿರುವ ರೀತಿಯಲ್ಲಿಯೇ ಈ ದೇಶದ ಬಹುಸಂಖ್ಯಾತ ಸಮಾಜವು ಒಂದು ನಿರ್ದಿಷ್ಟ ವರ್ಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮುಂದೆ ದುರ್ಬಲವಾಗುತ್ತದೆ. ಮುಂದೆ ದೇಶದ ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ ಎಂದು ಮಹಾಂತ ಪರಮಹಂಸ ದಾಸ್ ಎಚ್ಚರಿಸಿದ್ದಾರೆ.

Mahant Paramhans Das
ಮಹಂತ್ ಪರಮಹನ್ಸ್ ದಾಸ್

By

Published : Sep 29, 2021, 7:25 PM IST

ಉತ್ತರಪ್ರದೇಶ:ಅಯೋಧ್ಯೆಯ ತಪಸ್ವಿ ಚವಾನಿಯ ಉತ್ತರಾಧಿಕಾರಿ ಮಹಾಂತ ಪರಮಹಂಸ ದಾಸ್ ಅವರು ಹಿಂದುತ್ವ ಮತ್ತು ಇತರ ಧಾರ್ಮಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಮಾತನಾಡಿ ಸುದ್ದಿಯಲ್ಲಿರುತ್ತಾರೆ. ಇದೀಗ ಅವರು ಭಾರತವನ್ನು 'ಹಿಂದೂ ರಾಷ್ಟ್ರ'ವೆಂದು ಘೋಷಿಸದಿದ್ದರೆ ಜಲ ಸಮಾಧಿ ಆಗುವುದಾಗಿ ಎಚ್ಚರಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, 'ಅಕ್ಟೋಬರ್ 2ರೊಳಗೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸದಿದ್ದರೆ ಅಕ್ಟೋಬರ್ 1 ರಂದು ಧಾರ್ಮಿಕ ಸಮ್ಮೇಳನ ಏರ್ಪಡಿಸಲಾಗುತ್ತದೆ. ಮರುದಿನ ಮಧ್ಯಾಹ್ನ ಸರಯೂ ನದಿಯಲ್ಲಿ ಜಲ ಸಮಾಧಿಯಾಗುತ್ತೇನೆ' ಎಂದಿದ್ದಾರೆ.

'ಸಾವಿನ ನಂತರ ಯಾವ ಆಚರಣೆಯನ್ನು ಮಾಡಲಾಗುತ್ತದೆಯೋ, ಅದನ್ನು ನಾನು ಸಾವಿನ ಮುಂಚಿತವಾಗಿಯೇ ಮಾಡಿದ್ದೇನೆ. ವೇದ ಮಂತ್ರಗಳ ಮೂಲಕ ನಾನು ನನ್ನನ್ನು ಬಂಧಿಸಿಕೊಳ್ಳುವ ಕವಚವನ್ನು ಶುದ್ಧೀಕರಿಸಿದ್ದೇನೆ. ಈ ಕವಚವನ್ನು ನನ್ನ ಮೇಲೆ ಹಾಕಿಕೊಂಡು ಜಲಸಮಾಧಿ ಆಗಲಿದ್ದೇನೆ' ಎಂದು ಹೇಳಿದರು.

'ಅಲ್ಪಸಂಖ್ಯಾತರು ತಮ್ಮ ಜನಸಂಖ್ಯೆಯನ್ನು ಹೆಚ್ಚಿಸುತ್ತಿರುವ ರೀತಿಯಲ್ಲಿಯೇ ಈ ದೇಶದ ಬಹುಸಂಖ್ಯಾತ ಸಮಾಜವು ಒಂದು ನಿರ್ದಿಷ್ಟ ವರ್ಗ ಮತ್ತು ಕಾನೂನು ಮತ್ತು ಸುವ್ಯವಸ್ಥೆಯ ಮುಂದೆ ದುರ್ಬಲವಾಗುತ್ತದೆ. ಮುಂದೆ ದೇಶದ ಸಂವಿಧಾನವು ಅಪಾಯಕ್ಕೆ ಸಿಲುಕುತ್ತದೆ' ಎಂದು ಅವರು ಎಚ್ಚರಿಸಿದ್ದಾರೆ.

ಜನರ ಹಿತಾಸಕ್ತಿ ಮತ್ತು ಸಾಮಾಜಿಕ ಹಿತದೃಷ್ಟಿಯಿಂದ ಈ ದೇಶವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕು ಎಂದು ಅವರು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಬೇಡಿಕೆ ಇಟ್ಟಿರುವುದಾಗಿ ಮಹಾಂತ ಪರಮಹಂಸ ದಾಸ್ ತಿಳಿಸಿದ್ದಾರೆ.

ಇದನ್ನೂ ಓದಿ:ಗುಲಾಬ್​ ಅಬ್ಬರಕ್ಕೆ 25 ಬಲಿ: ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಸಾವುನೋವು

ABOUT THE AUTHOR

...view details