ಕರ್ನಾಟಕ

karnataka

ETV Bharat / bharat

ಬಿಜೆಪಿ ಶಾಸಕರೊಬ್ಬರ ಆಸ್ತಿ ದುರುಪಯೋಗ ಪ್ರಕರಣ: ಇಡಿಗೆ ಕೋರ್ಟ್‌ ನೋಟಿಸ್​ - ಬಿಜೆಪಿ ಶಾಸಕ ರಮೇಶ್ ಕರಾಡ್

ಎಂಐಟಿ ಸಮೂಹದ ನಿರ್ದೇಶಕ ಡಾ.ವಿಶ್ವನಾಥ್ ಕರಾಡ್ ಮತ್ತು ಬಿಜೆಪಿ ಶಾಸಕ ರಮೇಶ್ ಕರಾಡ್ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ಇಡಿಗೆ ದೂರು ನೀಡಿದ್ದರು.

ಔರಂಗಾಬಾದ್ ಪೀಠ
ಔರಂಗಾಬಾದ್ ಪೀಠ

By

Published : Aug 26, 2022, 9:52 PM IST

ಔರಂಗಾಬಾದ್ (ಮಹಾರಾಷ್ಟ್ರ): ಬಿಜೆಪಿ ಶಾಸಕರೊಬ್ಬರ ಆಸ್ತಿ ದುರುಪಯೋಗ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿಗೆ ಹೈಕೋರ್ಟ್‌ನ ಔರಂಗಾಬಾದ್ ಪೀಠ ನೋಟಿಸ್​ ನೀಡಿದೆ. ಎಂಐಟಿ ಗ್ರೂಪ್ ನಿರ್ದೇಶಕ ವಿಶ್ವನಾಥ್ ಕರಾಡ್ ಮತ್ತು ಬಿಜೆಪಿ ಶಾಸಕ ರಮೇಶ್ ಕರಾಡ್​ ವಿರುದ್ಧ ಸಾಮಾಜಿಕ ಕಾರ್ಯಕರ್ತರೊಬ್ಬರು ದೂರು ನೀಡಿದ್ದರು. ಈ ದೂರಿನ ಹೊರತಾಗಿಯೂ ಯಾವುದೇ ಕ್ರಮ ಕೈಗೊಳ್ಳದ ಕಾರಣ ಇಡಿಗೆ ಕೋರ್ಟ್‌ ನೋಟಿಸ್​ ಜಾರಿ ಮಾಡಿದೆ.

ಇಡಿ ತನ್ನ ಅಭಿಪ್ರಾಯ ಮಂಡಿಸುವಂತೆಯೂ ನ್ಯಾಯಾಲಯ ಸೂಚಿಸಿದೆ. ವಿಶ್ವನಾಥ್ ಕರಾಡ್ ಅವರ ಸೋದರಳಿಯ ಬಿಜೆಪಿ ಶಾಸಕ ರಮೇಶ್ ಕರಾಡ್ ಸೇರಿದಂತೆ ಕುಟುಂಬ ಸದಸ್ಯರ ಲೆಕ್ಕಕ್ಕೆ ಸಿಗದ ಆಸ್ತಿಯನ್ನು ತನಿಖೆ ಮಾಡುವಂತೆ ಆಗ್ರಹಿಸಿ ಇಡಿಗೆ ಅರ್ಜಿ ಸಲ್ಲಿಸಲಾಗಿತ್ತು. ಆದ್ರೆ ಅಧಿಕಾರಿಗಳು ಈ ಅರ್ಜಿಯನ್ನು ಪರಿಗಣಿಸಿರಲಿಲ್ಲ. ಸೆಪ್ಟಂಬರ್ 20, 2022 ರೊಳಗೆ ಇಡಿ ತನ್ನ ಹೇಳಿಕೆಯನ್ನು ಸಲ್ಲಿಸುವಂತೆ ಪೀಠ ನಿರ್ದೇಶಿಸಿತು.

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಐಟಿ ಭರ್ಜರಿ ದಾಳಿ: 390 ಕೋಟಿ ರೂ. ಬೇನಾಮಿ ಆಸ್ತಿ ಪತ್ತೆ

ABOUT THE AUTHOR

...view details