ಗುವಾಹಟಿ (ಅಸ್ಸೋಂ):ರೈಲುಗಳಲ್ಲಿ ಮತ್ತು ರೈಲ್ವೆ ಸ್ಟೇಷನ್ಗಳಲ್ಲಿ ಪ್ರಯಾಣಿಕರ ಬಳಿ ಒತ್ತಾಯಪೂರ್ವಕವಾಗಿ ಹಣ ಕೀಳುವುದು, ದುಡ್ಡು ಕೊಡದೇ ಇದ್ದರೆ ಇನ್ನಿಲ್ಲದ ಕಾಟ ಕೊಡುವುದನ್ನು ಮಂಗಳಮುಖಿಯರು ಮಾಡುತ್ತಾರೆ. ತಮ್ಮ ಬಳಿ ದುಡ್ಡು ಇಲ್ಲ, ಎಲ್ಲಿಯಾದರು ಕೆಲಸ ಮಾಡಿ ಹಣ ಸಂಪಾದಿಸಿ ಎಂದು ಕೆಲ ಪ್ರಯಾಣಿಕರು ಗದರುತ್ತಾರೆ. ಆಗ ಮಂಗಳಮುಖಿಯರು ತಮ್ಮನ್ಯಾರೂ ಕೆಲಸಕ್ಕೆ ಕರೆಯೊಲ್ಲ, ನಮ್ಮನ್ನು ಬೇರೆ ರೀತಿಯಲ್ಲಿ ಕಾಣುತ್ತಾರೆ ಎಂದು ತಮ್ಮ ನೋವನ್ನು ತೋಡಿಕೊಳ್ಳುತ್ತಾರೆ. ಇದೀಗ ನೊಂದವರ ಬದುಕಿನಲ್ಲಿ ಹೊಸ ಬೆಳಕು ಮೂಡಿಸಿದೆ ರೈಲ್ವೆ ಇಲಾಖೆ.
ಹೌದು, ತೃತೀಯಲಿಂಗಿ ಸಮುದಾಯವನ್ನು ಮತ್ತಷ್ಟು ಸಬಲೀಕರಣಗೊಳಿಸುವ ಪ್ರಯತ್ನದಲ್ಲಿ ಶುಕ್ರವಾರ ಗುವಾಹಟಿಯಲ್ಲಿ ರೈಲ್ವೆ ಇಲಾಖೆ ಒಂದು ಹೆಜ್ಜೆ ಮುಂದಿಟ್ಟಿದೆ. ನಿಲ್ದಾಣದಲ್ಲಿ ಇದೇ ಮೊದಲ ಬಾರಿಗೆ ವಿಶೇಷ 'ಟ್ರಾನ್ಸ್ ಟೀ ಸ್ಟಾಲ್' ಅನ್ನು ತೆರೆಯುವ ಮೂಲಕ ಈ ಸಮುದಾಯವನ್ನು ಬೆಳಕಿಗೆ ತರುವ ಹೊಸ ಪ್ರಯತ್ನ ಮಾಡಿದೆ.
ಇದನ್ನೂ ಓದಿ:ಯುಗಾದಿ ಹಬ್ಬದ ಪ್ರಯುಕ್ತ ‘ಬೆಂಗಳೂರು ಉತ್ಸವ’; ಸ್ಯಾಂಡಲ್ವುಡ್ ತಾರೆಯರಿಂದ ಚಾಲನೆ
ಈ ಟೀ ಸ್ಟಾಲ್ ಅನ್ನು ತೃತೀಯಲಿಂಗಿಗಳ ಸಮುದಾಯವೇ ಸಂಪೂರ್ಣವಾಗಿ ನಿರ್ವಹಿಸುತ್ತದೆ ಎಂದು ಈಶಾನ್ಯ ಗಡಿ ರೈಲ್ವೆ ಅಧಿಕಾರಿ ತಿಳಿಸಿದ್ದಾರೆ. ಟ್ರಾನ್ಸ್ ಟೀ ಸ್ಟಾಲ್ ಹೆಸರಿನ ಟೀ ಸ್ಟಾಲ್ ಅನ್ನು ಆಲ್ ಅಸ್ಸೋಂ ಟ್ರಾನ್ಸ್‌ಜೆಂಡರ್ ಅಸೋಸಿಯೇಷನ್‌ನ ಸಕ್ರಿಯ ಸಹಯೋಗದೊಂದಿಗೆ ಗುವಾಹಟಿಯ ಕಮ್ರೂಪ್ (ಎಂ) ಡೆಪ್ಯುಟಿ ಕಮಿಷನರ್ ಕಚೇರಿ ಕಾಂಪೌಂಡ್‌ನಲ್ಲಿ ಪ್ರಾರಂಭ ಮಾಡಲಾಗಿದೆ. ಇದು ಗುವಾಹಟಿ ರೈಲು ನಿಲ್ದಾಣದ ಮೊದಲ ಟ್ರಾನ್ಸ್‌ಜೆಂಡರ್ ಟೀ ಸ್ಟಾಲ್ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.