ಕರ್ನಾಟಕ

karnataka

ETV Bharat / bharat

ಸಹೋದರಿ ಅನ್ಶುಲಾ ರ‍್ಯಾಂಪ್‌ ವಾಕ್​ಗೆ ಸಹೋದರ ಅರ್ಜುನ್ ಕಪೂರ್ ಹರ್ಷೋದ್ಗಾರ..! - ಲ್ಯಾಕ್ಮೆ ಫ್ಯಾಶನ್ ವೀಕ್‌

ಬಾಲಿವುಡ್ ನಟ ಅರ್ಜುನ್ ಕಪೂರ್, ಸಹೋದರಿ ಅನ್ಶುಲಾ ಕಪೂರ್ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ರ‍್ಯಾಂಪ್ ಮಾಡಿದರು. ರ‍್ಯಾಂಪ್‌ ವಾಕ್‌ನಲ್ಲಿ ಅನ್ಶುಲಾ ನಟ ಅರ್ಜುನ್ ಹುರಿದುಂಬಿಸುತ್ತಿರುವ ದೃಶ್ಯ ಗಮನ ಸಳೆಯಿತು.

Anshula Kapoor ramp walk at Lakme Fashion Week
ಅನ್ಶುಲಾ ರ‍್ಯಾಂಪ್‌ ವಾಕ್

By

Published : Mar 10, 2023, 11:01 PM IST

ಹೈದರಾಬಾದ್:ಬಾಲಿವುಡ್ ನಟ ಅರ್ಜುನ್ ಕಪೂರ್ ಸಹೋದರಿ ಅನ್ಶುಲಾ ಕಪೂರ್ ಅವರು ತಮ್ಮ ಅತಿಯಾದ ತೂಕ ಇಳಿಸಿದ ಹಿನ್ನೆಲೆ ಎಲ್ಲರ ಗಮನಸೆಳೆದಿದ್ದಾರೆ. ಹೌದು, ಶುಕ್ರವಾರ ನಡೆದ ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ಸ್ಟಾರ್ ಕಿಡ್ ರ‍್ಯಾಂಪ್‌ಗೆ ಚಾಲನೆ ನೀಡಿದ ಅನ್ಶುಲಾ ಕಪೂರ್ ಅವರು, ರ‍್ಯಾಂಪ್‌ ಮಾಡಿದರು. ಅನ್ಶುಲಾ ಉದ್ದವಾದ ಶ್ರಗ್, ಸ್ಪಾರ್ಕ್ಲಿ ಹೈ-ಸ್ಲಿಟ್ ಸ್ಕರ್ಟ್ ಮತ್ತು ಪಾರದರ್ಶಕ ಕಾರ್ಸೆಟ್ ಟಾಪ್ ಅನ್ನು ಧರಿಸಿದ್ದರು. ನಟ ಅರ್ಜುನ್ ತಮ್ಮ ಸಹೋದರಿ ಅನ್ಶುಲಾ ಅವರನ್ನು ಹುರಿದುಂಬಿಸಿದರು. ಇದು ಅದ್ಭುತವಾದ ಸಹೋದರ- ಸಹೋದರಿ ಬಂಧವನ್ನು ಎತ್ತಿ ತೋರಿಸಿತು.

ಇದನ್ನೂ ಓದಿ:ತೇಜ್​​ರಾನ್​ ಬ್ರೇಕ್​​ ಅಪ್​ ವದಂತಿಗೆ ಫುಲ್​ ಸ್ಟಾಪ್​ ಇಟ್ಟ ನಟಿ ತೇಜಸ್ವಿ ಪ್ರಕಾಶ್​

ರ‍್ಯಾಂಪ್‌ ವಾಕ್ ಮಾಡಿ ಗಮನಸೆಳೆದ ಅನ್ಶುಲಾ:ಅನ್ಶುಲಾ ರ‍್ಯಾಂಪ್‌ ವಾಕ್ ಮಾಡುವಾಗ ಅರ್ಜುನ್ ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು. ನಂತರ ನಟ ತನ್ನ ಸಹೋದರಿಯನ್ನು ಬೆಂಬಲಿಸಲು ತಲೆ ತಲೆ ಬಾಗಿ ನಮಸ್ಕಾರ ಮಾಡಿದರು. "ಸಹೋದರ ಸಹೋದರಿ ಬಾಂಡ್" ಎಂಬ ಶೀರ್ಷಿಕೆಯನ್ನು ಬರೆದು ಇನ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಒಬ್ಬ ಬಳಕೆದಾರ, "ಸಹೋದರ ಮತ್ತು ಸಹೋದರಿಯಾಗಿರುವುದು ಎಂದರೆ ಒಬ್ಬರಿಗೊಬ್ಬರು ಬೆಂಗಾವಲಾಗಿರುವುದಾಗಿದೆ. ಇದು ಇಂಟರ್ನೆಟ್‌ನಲ್ಲಿ ಅತ್ಯಂತ ಸಿಹಿಯಾದ ಸಂಗತಿ" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ:ಆಸ್ಕರ್​ ವೇದಿಕೆಯಲ್ಲಿ ನಾಟು ನಾಟು ಹಾಡಿಗೆ ನೃತ್ಯ ಮಾಡಲಿದ್ದಾರಾ ರಾಮ್​​ಚರಣ್​, ಜೂ.ಎನ್​ಟಿಆರ್​?!

ಈ ವಿಡಿಯೋ ಟೀಕಿಸಿದ ನೆಟಿಜನ್ಸ್​:ಮತ್ತೊಂದೆಡೆ, ಕೆಲವು ನೆಟಿಜನ್ಸ್​ ವಿಡಿಯೋವನ್ನು ಟೀಕಿಸಿದ್ದಾರೆ. ಬಳಕೆದಾರರಲ್ಲಿ ಒಬ್ಬರು, "ಎಲ್ಲರಿಗೂ ರ‍್ಯಾಂಪ್ ಮೇಲೆ ನಡೆಯಲು ಅವಕಾಶ ಸಿಗುವುದಿಲ್ಲ.. ಉತ್ತಮವಾದ ಮೈಕಟ್ಟು ಮತ್ತು ನೋಟದಿಂದ ನಿಮಗೆ ಅವಕಾಶ ಸಿಗದೇ ಇರಬಹುದು. ಮಾಡೆಲಿಂಗ್‌ನಲ್ಲಿ ಹೆಚ್ಚಿನ ಸ್ಪರ್ಧೆ, ಒಲವು ಮತ್ತು ರಾಜಕೀಯದ ಕಾರಣ ಮತ್ತು ಕೇವಲ ಮೈಕಟ್ಟು ನೋಡಿ ಮತ್ತು ನಡೆಯಿರಿ. ಪ್ರತಿಭೆ-0, ಹೋರಾಟ-0, ಪ್ರಯತ್ನಗಳು-0, ನೋಟ-0. ನಿಜವಾಗಿಯೂ ಅವಳು ಅದಕ್ಕೆ ಅರ್ಹಳು ಎಂದು ನೀವು ಭಾವಿಸುತ್ತೀರಾ?'' ಎಂದು ಕೆಲವರು ಕಾಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:ಸ್ವರಾ ಫಹಾದ್​ ಅದ್ದೂರಿ ಮದುವೆಗೆ ಕ್ಷಣಗಣನೆ; ದೀಪಾಲಂಕೃತ ಮನೆ ಫೋಟೋ ಹಂಚಿಕೊಂಡ ನಟಿ

ತಮ್ಮ ತೂಕ ಇಳಿಸುವ ಪ್ರಯಾಣದ ಬಗ್ಗೆ ಮಾತನಾಡಿದ ಅನ್ಶುಲಾ:ಈ ನಡುವೆ ಅನ್ಶುಲಾ ತನ್ನ ತೂಕ ಇಳಿಸುವ ಪ್ರಯಾಣದ ಬಗ್ಗೆ ತುಂಬಾ ಮುಕ್ತವಾಗಿ ಮಾತನಾಡಿದ್ದಾರೆ. ಆಗಾಗ್ಗೆ ತನ್ನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳಲ್ಲಿ ಅದನ್ನು ಚರ್ಚಿಸುತ್ತಾಳೆ. ಅನ್ಶುಲಾ ಇತ್ತೀಚೆಗೆ ತಮ್ಮ ಫ್ಯಾಷನ್ ಶೋ ಆಯ್ಕೆಗಳಿಗಾಗಿ ಸುದ್ದಿಯಲ್ಲಿದ್ದಾರೆ. ತಮ್ಮ ಆಯ್ಕೆಗಳಿಂದ ಫ್ಯಾಷನಿಸ್ಟ್‌ಗಳನ್ನು ಗೆಲ್ಲುತ್ತಿದ್ದಾರೆ. ಅರ್ಜುನ್ ಅವರ ಚಲನಚಿತ್ರಗಳಿಗೆ ಸಂಬಂಧಿಸಿದಂತೆ, ನಟನು ಹಲವಾರು ಕುತೂಹಲ ಕೇರಳಿಸುವಂತೆ ಚಿತ್ರಗಳ ಎಲ್ಲರು ಮನೆಮಾತಾಗಿದ್ದಾರೆ. ಸದ್ಯ ಅವರು ಭೂಮಿ ಪೆಡ್ನೇಕರ್ ಅವರೊಂದಿಗೆ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ:25 ಗ್ರಾಂನ ಉಡುಗೆ, ಮತ್ಯಾಕೆ ದೊಡ್ಡ ಲಗೇಜ್?​: ಮತ್ತೆ ಟ್ರೋಲ್​ಗೊಳಗಾದ ಉರ್ಫಿ ಜಾವೇದ್!

ABOUT THE AUTHOR

...view details