ನವದೆಹಲಿ :ಕರ್ನಾಟಕದ ತುಮಕೂರು ಜಿಲ್ಲೆಯಲ್ಲಿರುವ ತಮ್ಮ ಶೋರೂಮ್ಗೆ ಕಾರು ಖರೀದಿಸಲು ಬಂದಿದ್ದ ರೈತನೋರ್ವನಿಗೆ ಆತ ಧರಿಸಿದ್ದ ಬಟ್ಟೆ ನೋಡಿ ಕಾರು ಶೋ ರೂಮ್ ಸಿಬ್ಬಂದಿ ಹೀಯಾಳಿಸಿರುವ ಘಟನೆ ಇತ್ತೀಚೆಗೆ ನಡೆದಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಮಹೀಂದ್ರಾ ಟ್ವೀಟ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲ ವ್ಯಕ್ತಿಗಳ ಘನತೆ ಎತ್ತಿ ಹಿಡಿಯುವುದು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ.
ನಮ್ಮ ಸಮುದಾಯಗಳು ಮತ್ತು ಎಲ್ಲ ಪಾಲುದಾರರಿಗೆ ಶಕ್ತಿ ತುಂಬುವುದು ಮಹೀಂದ್ರಾ ಕಂಪನಿಯ ಪ್ರಮುಖ ಮೌಲ್ಯವಾಗಿದೆ. ಈ ನಿರ್ಧಾರಗಳಿಂದ ಯಾವುದೇ ಕಾರಣಕ್ಕೂ ಹಿಂದೆ ಸರಿಯಲು ಸಾಧ್ಯವಿಲ್ಲ. ಈ ನೀತಿಗಳಿಗೆ ವಿರುದ್ಧವಾಗಿ ನಡೆಯುವ ಬೆಳವಣಿಗೆಗಳನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾರೆ.
ವಾಹನ ಖರೀದಿಸಲು ರೈತನೋರ್ವ ಕಾರು ಶೋ ರೂಮ್ಗೆ ತೆರಳಿದ್ದ ವೇಳೆ ಅಲ್ಲಿನ ಸಿಬ್ಬಂದಿ ಹೀಯಾಳಿಸಿ ಕಳಿಸಿರುವ ಘಟನೆ ನಡೆದಿತ್ತು. ಇದರ ಬೆನ್ನಲ್ಲೇ ಅವಮಾನಕ್ಕೊಳಗಾಗಿದ್ದ ಗ್ರಾಹಕ, ಒಂದೇ ತಾಸಲ್ಲಿ 10 ಲಕ್ಷ ರೂ. ತೆಗೆದುಕೊಂಡು ಹೋಗಿದ್ದರು.