ಕರ್ನಾಟಕ

karnataka

ETV Bharat / bharat

ಅಮರ್ತ್ಯ ಸೇನ್‌ ವಿರುದ್ಧ ವಿಶ್ವ ಭಾರತಿ ಉಪಕುಲಪತಿ ಅಸಮಾಧಾನ.. ವಿವಾದಿತ ಹೇಳಿಕೆ

ಅಮರ್ತ್ಯ ಸೇನ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ವಿಶ್ವ ಭಾರತಿ ಕುಲಪತಿ - ಅಕ್ರಮವಾಗಿ ಭೂಮಿ ಒತ್ತುವರಿ ಆರೋಪ - ಭಾರತ ರತ್ನ ಅಮರ್ತ್ಯ ಸೇನ್ ವಿರುದ್ಧ ವಿಶ್ವ ಭಾರತಿ ಕುಲಪತಿ ಗರಂ

Amartya Sen
ಅಮರ್ತ್ಯ ಸೇನ್‌

By

Published : Jan 27, 2023, 5:32 PM IST

ಬೋಲ್ಪುರ್(ಪಶ್ಚಿಮ ಬಂಗಾಳ): ವಿಶ್ವ ಭಾರತಿ ಉಪಕುಲಪತಿ ವಿದ್ಯುತ್ ಚಕ್ರವರ್ತಿ ಅವರು ನೊಬೆಲ್ ಪ್ರಶಸ್ತಿ ವಿಜೇತ ಅಮರ್ತ್ಯ ಸೇನ್ ಅವರಿಗೆ ನೊಬೆಲ್ ಪ್ರಶಸ್ತಿ ಬಂದಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿದ್ಯುತ್ ಚಕ್ರವರ್ತಿ ಅವರು ಈಟಿವಿ ಭಾರತ್‌ಗೆ ನೀಡಿದ ಸಂದರ್ಶನದಲ್ಲಿ ನೊಬೆಲ್ ಪ್ರಶಸ್ತಿ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ವಿರುದ್ಧ ವಾಗ್ದಾಳಿ ನಡೆಸಿದರು.

"ಅಮರ್ತ್ಯ ಸೇನ್ ಅವರಿಗೆ ನೊಬೆಲ್ ದೊರೆಯಲಿಲ್ಲ ಹಾಗೂ ಅವರ ಮನಸ್ಥಿತಿ ಸರಿಯಿಲ್ಲ" ಎಂದು ಚಕ್ರಬ್ರೋತಿ ಶುಕ್ರವಾರ ಕಿಡಿಕಾರಿದ್ದಾರೆ. ''ನೊಬೆಲ್ ವಿಜೇತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರನ್ನು 'ಗೌರವಾನ್ವಿತ ವ್ಯಕ್ತಿ' ಎಂದು ಸಂಬೋಧಿಸಿ ಹೇಳುವ ಮೂಲಕ ಭೂ ವಿವಾದದ ಅಂತ್ಯವನ್ನು ನೋಡಲು ಬಯಸುವುದಾಗಿ ಕುಲಪತಿ ತಿಳಿಸಿದರು.

ವಿಶ್ವ ಭಾರತಿಯಲ್ಲಿನ ಶಿಕ್ಷಣದ ಗುಣಮಟ್ಟ:''ಅಮರ್ತ್ಯ ಸೇನ್ ಮಾಡಿದ ತಪ್ಪನ್ನು ಎತ್ತಿ ತೋರಿಸಬೇಕು'' ಎಂದು ವಿಶ್ವಭಾರತಿ ಉಪಕುಲಪತಿ ಭಾರತ ರತ್ನ ಉಲ್ಲೇಖಿಸಿ ಹೇಳಿದರು. ಅವರು ತಮ್ಮ ಶಾಂತಿನಿಕೇತನ ಮನೆಯಲ್ಲಿ ಈಟಿವಿ ಭಾರತಕ್ಕೆ ನೀಡಿದ ಸಂದರ್ಶನದಲ್ಲಿ ನೊಬೆಲ್ ಪ್ರಶಸ್ತಿ ವಿಜೇತರು ಹಾಗೂ ವಿಶ್ವ ಭಾರತಿಯಲ್ಲಿನ ಶಿಕ್ಷಣದ ಗುಣಮಟ್ಟ ಮತ್ತು ವಿದ್ಯಾರ್ಥಿಗಳ ಅಮಾನತು ಬಗ್ಗೆ ಮಾತನಾಡಿದರು. ವಿಶ್ವಭಾರತಿ ಅಧಿಕಾರಿಗಳು, ಅಮರ್ತ್ಯ ಸೇನ್‌ಗೆ ಐಕಾನಿಕ್ ವಾರ್ಸಿಟಿಯ ಭೂಮಿಯನ್ನು ಹಿಂದಿರುಗಿಸುವಂತೆ ಮತ್ತೊಮ್ಮೆ ಕೇಳಿದರು. ಗುರುವಾರ ವಿಶ್ವಭಾರತಿಯ ವಿದ್ಯಾರ್ಥಿಗಳು - ಶಿಕ್ಷಕರು ಅಮರ್ತ್ಯ ಸೇನ್ ಅವರ ಶಾಂತಿನಿಕೇತನ ಮನೆಗೆ ಭೇಟಿ ನೀಡಿ ವಿವರವಾದ ಚರ್ಚೆ ನಡೆಸಿದರು.

ಕುಲಪತಿ ವಿರುದ್ಧ ವಿದ್ಯಾರ್ಥಿಗಳು - ಶಿಕ್ಷಕರ ದೂರು:ಉಪಕುಲಪತಿಯ ವಿವಿಧ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿಗಳು- ಶಿಕ್ಷಕರು ಅನೇಕ ದೂರುಗಳನ್ನು ನೀಡಿದರು. ಅವುಗಳನ್ನೆಲ್ಲಾ ಆಲಿಸಿದ ಅಮರ್ತ್ಯ ಸೇನ್ ಅವರು, "ನನಗೆ ತುಂಬಾ ಹತಾಶೆಯಾಗುತ್ತಿದೆ. ಪರಿಸ್ಥಿತಿಯ ಬಗ್ಗೆ ನನಗೆ ಚಿಂತೆಸಿದ್ದೇನೆ. ಅದನ್ನು ಹೇಗೆ ಪರಿಹರಿಸಬೇಕೆಂದು ನನಗೆ ತಿಳಿದಿಲ್ಲ" ಎಂದು ಪ್ರತಿಕ್ರಿಸಿದರು.

ಅಕ್ರಮವಾಗಿ ಭೂಮಿ ಒತ್ತುವರಿ:ಬಳಿಕ ವಿಶ್ವಭಾರತಿ ಉಪಕುಲಪತಿ ವಿದ್ಯುತ್ ಚಕ್ರವರ್ತಿ ಅವರು, ಭಾರತ ರತ್ನ ಅಮರ್ತ್ಯ ಸೇನ್ ಬಗ್ಗೆ ಭರ್ಜರಿ ತಿರುಗೇಟು ನೀಡುವಂತಹ ಕಾಮೆಂಟ್​ಗಳನ್ನು ಮಾಡಿದರು. ''ಭೂ ಕಬಳಿಕೆ ವಿಚಾರ ಹೊಸದಲ್ಲ, ಈ ಹಿಂದೆಯೂ ಬರೆದಿದ್ದೆವು, ಶಾಂತಿನಿಕೇತನದಲ್ಲಿರುವುದರಿಂದ ಪತ್ರವನ್ನು ಕೈಗೆ ತಲುಪಿಸಿದ್ದೇವೆ. ಹೆಚ್ಚುವರಿಯಾಗಿ 13 ದಶಮಾಂಶ (13 ಡೆಸಿಮಲ್) ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ'' ಎಂದು ಆರೋಪಿಸಿದರು.

''ವಿಶ್ವ ಭಾರತಿ ಉಪಕುಲಪತಿಯಾಗಿ ವಿಶ್ವವಿದ್ಯಾನಿಲಯದ ಭೂಮಿಯನ್ನು ಹಿಂಪಡೆಯುವುದು ನನ್ನ ಜವಾಬ್ದಾರಿಯಾಗಿದೆ. ಈ ಪತ್ರವು ಅವರನ್ನು ಅವಮಾನಿಸುವ ಉದ್ದೇಶದಿಂದಲ್ಲ. ಅವರಿಂದಲೂ ನಾನು ತುಂಬಾ ಕಲಿತಿದ್ದೇನೆ. ಭವಿಷ್ಯದಲ್ಲಿ ಯಾರೂ ಅವರನ್ನು ಅವಮಾನಿಸದಂತೆ ಶಾಶ್ವತ ಪರಿಹಾರವನ್ನು ನಾವು ಬಯಸುತ್ತೇವೆ" ಎಂದು ಚಕ್ರವರ್ತಿ ಸಮಜಾಯಿಸಿ ನೀಡಿದರು.

"ಯಾರೂ ಪ್ರಸ್ತಾಪಿಸದ ಒಂದು ವಿಷಯವೆಂದರೆ ಅಮರ್ತ್ಯ ಸೇನ್ ಅವರಿಗೆ ನೊಬೆಲ್ ಪ್ರಶಸ್ತಿ ಸಿಕ್ಕಿಲ್ಲ ಎನ್ನುವುದು. ಅವರು ನೊಬೆಲ್ ಪ್ರಶಸ್ತಿ ವಿಜೇತ ಎಂದು ಹೇಳಿಕೊಳ್ಳುತ್ತಾರೆ. ಯಾರಾದರೂ ಸತ್ಯಗಳ ಆಧಾರದ ಮೇಲೆ ನೊಬೆಲ್ ಪ್ರಶಸ್ತಿ ಗೆದ್ದಿದ್ದಾರೆ ಎಂದು ಹೇಳಿದರೆ, ಅವರು ತಪ್ಪಿತಸ್ಥರು ಆಗುತ್ತಾರೆ" ಎಂದು ವಿಶ್ವಭಾರತಿ ಉಪಕುಲಪತಿ ಹೇಳಿದರು.

ಭೂಮಿ ಒತ್ತುವರಿ ಸಮಸ್ಯೆ ಪರಿಹರಿಸಬೇಕು: ಅಮರ್ತ್ಯ ಸೇನ್ ಅವರ ಮನೆಯಲ್ಲಿ ವಿದ್ಯಾರ್ಥಿಗಳು ಮತ್ತು ಪ್ರಾಧ್ಯಾಪಕರ ನಡುವಿನ ಸಂಭಾಷಣೆಯ ಕುರಿತು ಮಾತನಾಡಿದ ಚಕ್ರವರ್ತಿ ಅವರು, "ಅವರು ವಿಶ್ವ ಭಾರತಿಗೆ ಹಾನಿ ಮಾಡುವ ಕುರಿತಂತೆ ಕೆಲವು ಜನರೊಂದಿಗೆ ಮಾತನಾಡುತ್ತಿದ್ದಾರೆ. ಅಮರ್ತ್ಯ ಸೇನ್ ಅವರೊಂದಿಗೆ ಮಾತನಾಡುತ್ತಿದ್ದಾರೆ. ಇದರಿಂದ ಅವರ ಮನಸ್ಥಿತಿ ಸರಿಯಿಲ್ಲ ಎಂಬುದು ಗೊತ್ತಾಗುಯತ್ತದೆ. ಅವರು ವಿಶ್ವಭಾರತಿಯೊಂದಿಗೆ ಮಾತನಾಡಿ ಸಮಸ್ಯೆಯನ್ನು ಪರಿಹರಿಸಬೇಕು ಎಂದು ನಾನು ಪ್ರಾರ್ಥಿಸುತ್ತೇನೆ'' ಎಂದು ತಿಳಿಸಿದರು.

ಇದನ್ನೂ ಓದಿ:'ದ್ವೇಷವಿಲ್ಲವೆಂದು ಅರಿಯಲು 3 ಸಾವಿರ ಕಿಮೀ ನಡೆಯಬೇಕಾಯಿತಾ?' ರಾಹುಲ್ ವಿರುದ್ಧ ಅಣ್ಣಾಮಲೈ ವಾಗ್ದಾಳಿ

ABOUT THE AUTHOR

...view details