ಕರ್ನಾಟಕ

karnataka

ETV Bharat / bharat

ತಾಜ್​ಮಹಲ್​ ಸೇರಿದಂತೆ ದೇಶದ ಯಾವ ಸ್ಮಾರಕಗಳೂ ಜೂ.15ರವರೆಗೆ ತೆರೆಯುವಂತಿಲ್ಲ - ಭಾರತದ ಪುರಾತತ್ವ ಸಮೀಕ್ಷೆ

ದೇಶದಲ್ಲಿ ಕೊರೊನಾ ಎರಡನೇ ಅಲೆ ಸದ್ಯ ಸ್ವಲ್ಪ ತಗ್ಗಿದೆ. ಆದರೂ ದೇಶಾದ್ಯಂತ ಇರುವ ಎಲ್ಲಾ ಸ್ಮಾರಕಗಳು, ಮ್ಯೂಸಿಯಂಗಳನ್ನು 31ರ ವರೆಗೆ ತೆರೆಯುವಂತಿಲ್ಲ ಎಂದು ಭಾರತದ ಪುರಾತತ್ವ ಸಮೀಕ್ಷೆ ಆದೇಶಿಸಿದೆ.

tajmahal
ತಾಜ್​ಮಹಲ್

By

Published : May 31, 2021, 8:27 AM IST

ನವದೆಹಲಿ: ಪ್ರೇಮಸೌಧ ತಾಜ್​ಮಹಲ್​ ಸೇರಿದಂತೆ ದೇಶಾದ್ಯಂತ ಇರುವ ಎಲ್ಲಾ ಸ್ಮಾರಕಗಳು, ಮ್ಯೂಸಿಯಂಗಳು ಬಾಗಿಲು ತೆರೆಯುವಂತಿಲ್ಲ ಎಂದು ಕೇಂದ್ರ ಸಂಸ್ಕೃತಿ ಇಲಾಖೆ ಅಡಿಯಲ್ಲಿ ಬರುವ ಭಾರತದ ಪುರಾತತ್ವ ಸಮೀಕ್ಷೆ (ಎಎಸ್ಐ) ಆದೇಶ ಹೊರಡಿಸಿದೆ.

ದೇಶದಲ್ಲಿ ಕೊರೊನಾ ಎರಡನೇ ಅಲೆಯ ಆರ್ಭಟ ತೀವ್ರವಾಗಿದ್ದ ಪರಿಣಾಮ ಮೇ 31ರ ವರೆಗೆ ಸ್ಮಾರಕಗಳನ್ನು ಮುಚ್ಚುವಂತೆ ಏಪ್ರಿಲ್​ 15ರಂದು ಎಎಸ್ಐ ಸೂಚಿಸಿತ್ತು. ಅಂದಿನಿಂದ ತಾಜ್​ಮಹಲ್, ಆಗ್ರಾ ಕೋಟೆ, ಫತೇಪುರ್ ಸಿಕ್ರಿ, ಕೆಂಪು ಕೋಟೆ, ಕುತುಬ್ ಮಿನಾರ್, ಹುಮಾಯೂನ್ ಸಮಾಧಿ, ಅಜಂತ-ಎಲ್ಲೋರಾ ಗುಹೆಗಳು ಸೇರಿದಂತೆ ಸಾವಿರಾರುಐತಿಹಾಸಿಕ ಸ್ಮಾರಕಗಳು, ಪುರಾತತ್ವ ಸ್ಥಳಗಳು ಮತ್ತು ವಸ್ತು ಸಂಗ್ರಹಾಲಯಗಳಿಗೆ ಪ್ರವಾಸಿಗರ ಪ್ರವೇಶ ನಿಷೇಧಿಸಲಾಗಿತ್ತು.

ಭಾರತದ ಪುರಾತತ್ವ ಸಮೀಕ್ಷೆ ಆದೇಶ ಪ್ರತಿ

ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಲಾಕ್​​ಡೌನ್​ ವಿಸ್ತರಣೆ: ಪಾಸಿಟಿವಿಟಿ ದರ, ಆಕ್ಸಿಜನ್​ ಬೆಡ್​ ಆಧರಿಸಿ ನಿರ್ಬಂಧ ಸಡಿಲಿಕೆ

ಇದೀಗ ಈ ಅವಧಿಯನ್ನು ಜೂ.15ರ ವರೆಗೆ ವಿಸ್ತರಿಸಲಾಗಿದೆ ಎಂದು ಎಎಸ್‌ಐ ನಿರ್ದೇಶಕ ಡಾ.ಎನ್‌.ಕೆ.ಪಾಠಕ್ ತಿಳಿಸಿದ್ದಾರೆ. ಕೇಂದ್ರ ಸಂಸ್ಕೃತಿ ಇಲಾಖೆ ಅಡಿಯಲ್ಲಿ 3,693 ಸ್ಮಾರಕಗಳು ಹಾಗೂ 50 ಮ್ಯೂಸಿಯಂಗಳು ಬರಲಿವೆ. 2020ರಲ್ಲಿ ಕೂಡ ಮಾರ್ಚ್​್ 17ರಿಂದ ಆರು ತಿಂಗಳ ಕಾಲ ಇವುಗಳನ್ನು ಮುಚ್ಚಲಾಗಿತ್ತು.

ABOUT THE AUTHOR

...view details