ವಾರಣಾಸಿ:ಸಮಾಜವಾದಿ ಪಕ್ಷದ (ಎಸ್ಪಿ) ರಾಷ್ಟ್ರೀಯ ಅಧ್ಯಕ್ಷ, ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಾರಣಾಸಿಯಲ್ಲಿ ರೋಡ್ ಶೋನಲ್ಲಿ ಭಾಗವಹಿಸಿ, ಭರ್ಜರಿ ಪ್ರಚಾರ ಕೈಗೊಂಡರು. ಬಳಿಕ ಕಾಶಿ ವಿಶ್ವನಾಥ ಧಾಮಕ್ಕೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ವಾರಣಾಸಿ ಸಮಾಜವಾದಿ ಪಕ್ಷದ ಅಭ್ಯರ್ಥಿ ಕಾಮೇಶ್ವರನಾಥ್ ಕಿಸಾನ್ ಅವರು ರೋಡ್ಶೋನಲ್ಲಿ ಅಖಿಲೇಶ್ ಯಾದವ್ಗೆ ಸಾಥ್ ನೀಡಿದರು. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಜೊತೆಗಿದ್ದರು.