ಕರ್ನಾಟಕ

karnataka

ETV Bharat / bharat

ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ಪ್ರಕರಣ.. ಸಾವಿಗೆ ಹೆದರುವುದಿಲ್ಲ ಎಂದ ಹೈದರಾಬಾದ್​ ಸಂಸದ! - ಓವೈಸಿ ಗುರಿಯಾಗಿಸಿ ಗುಂಡಿನ ದಾಳಿ

ತಮ್ಮ ಕಾರಿನ ಮೇಲೆ ನಡೆದಿರುವ ಗುಂಡಿನ ದಾಳಿಗೆ ಸಂಬಂಧಿಸಿದಂತೆ ಲೋಕಸಭೆಯಲ್ಲಿ ಮಾತನಾಡಿರುವ ಹೈದರಾಬಾದ್​​ ಸಂಸದ ಅಸಾದುದ್ದೀನ್ ಓವೈಸಿ, ನನಗೆ Z ವರ್ಗದ ಭದ್ರತೆ ನೀಡುವಂತೆ ಬಯಸುವುದಿಲ್ಲ ಎಂದಿದ್ದಾರೆ..

AIMIM MP Asaduddin Owaisi over attack
AIMIM MP Asaduddin Owaisi over attack

By

Published : Feb 4, 2022, 6:35 PM IST

ನವದೆಹಲಿ :ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರ ನಡೆಸಿ ದೆಹಲಿಗೆ ತೆರಳುತ್ತಿದ್ದ ವೇಳೆ ಹೈದರಾಬಾದ್​ ಸಂಸದ ಅಸಾದುದ್ದೀನ್ ಓವೈಸಿ ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿದೆ.

ಈ ಕುರಿತು ಇಂದು ಲೋಕಸಭೆಯಲ್ಲಿ ಮಾತನಾಡಿರುವ ಓವೈಸಿ, ನಾನು ಸಾವಿಗೆ ಹೆದರುವುದಿಲ್ಲ. ನನಗೆ Z ವರ್ಗದ ಭದ್ರತೆ ನೀಡುವಂತೆ ಬಯಸುವುದಿಲ್ಲ. ಅದನ್ನ ತಿರಸ್ಕರಿಸುತ್ತೇನೆ ಎಂದಿರುವ ಹೈದರಾಬಾದ್​ ಸಂಸದ, ತಮಗೆ A ವರ್ಗದ ಪ್ರಜೆಯನ್ನಾಗಿ ಮಾಡುವಂತೆ ಮನವಿ ಮಾಡಿದರು.

ಈ ಘಟನೆಗೆ ಸಂಬಂಧಿಸಿದಂತೆ ನಾನು ಮೌನಿಯಾಗಿರುವುದಿಲ್ಲ ಎಂದಿರುವ ಓವೈಸಿ, ದಯವಿಟ್ಟು ನನಗೆ ನ್ಯಾಯ ಕೊಡಿ ಎಂದರು. ಶೂಟರ್​ಗಳ ಮೇಲೆ ಕಠಿಣ ಕ್ರಮಕೈಗೊಳ್ಳುವುದಷ್ಟೇ ಅಲ್ಲ, ಪ್ರಕರಣದ ಸೂಕ್ತ ತನಿಖೆಗೆ ಆದೇಶಿಸಿದ್ದಾರೆ.

ಗುಂಡಿನ ದಾಳಿ ಬಗ್ಗೆ ಲೋಕಸಭೆಯಲ್ಲಿ ಮಾತನಾಡಿದ ಸಂಸದ ಓವೈಸಿ

ಇದೇ ಘಟನೆಗೆ ಸಂಬಂಧಿಸಿದಂತೆ ಫೆಬ್ರವರಿ 7ರಂದು ಸಂಸತ್ತಿನಲ್ಲಿ ಮಾತನಾಡುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಇದನ್ನೂ ಓದಿರಿ:ಸಂಸದ ಅಸಾದುದ್ದೀನ್‌ ಓವೈಸಿ ಬೆಂಗಾವಲು ಕಾರಿನ ಮೇಲೆ ಗುಂಡಿನ ದಾಳಿ; ಇಬ್ಬರ ಬಂಧನ

ಯುಪಿಯಲ್ಲಿ ಚುನಾವಣಾ ಪ್ರಚಾರ ಮುಗಿಸಿ ದೆಹಲಿಗೆ ವಾಪಸಾಗುತ್ತಿದ್ದ ಅಸಾದುದ್ದೀನ್ ಓವೈಸಿ ಅವರ ಬೆಂಗಾವಲು ವಾಹನದ ಮೇಲೆ ನಿನ್ನೆ ಗುಂಡು ಹಾರಿಸಲಾಗಿತ್ತು. ಕೂಡಲೇ ಎಚ್ಚೆತ್ತ ಪೊಲೀಸರು, ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿಗಳ ಪತ್ತೆಗೆ ಮುಂದಾಗಿದ್ದರು. ಸದ್ಯ ಬಂಧಿತರಿಂದ ಅಕ್ರಮವಾಗಿ ಇಟ್ಟುಕೊಂಡಿದ್ದ 9 ಎಂಎಂ ಪಿಸ್ತೂಲ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಗುಂಡಿನ ದಾಳಿ ಸಂಬಂಧ ಐದು ತಂಡಗಳನ್ನು ರಚಿಸಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಎಡಿಜಿ ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.

ABOUT THE AUTHOR

...view details