ಕರ್ನಾಟಕ

karnataka

ETV Bharat / bharat

ನವಜಾತ ಶಿಶು ಮಾರಾಟಕ್ಕೆ ಯತ್ನಿಸುತ್ತಿದ್ದ ದಂಪತಿ ಸೆರೆ: ಚಾಕೋಲೇಟ್, ಲಾಲಿಪಾಪ್​ ಕೋಡ್​ ವರ್ಡ್​ ಬಳಸಿ ದಂಧೆ - ಮಾನವ ಕಳ್ಳಸಾಗಣೆ

ಗುಜರಾತ್​ನ​ ಅಹಮದಾಬಾದ್​ನಲ್ಲಿ 10ರಿಂದ 15 ದಿನದ ನವಜಾತ ಹೆಣ್ಣು ಶಿಶು ಮಾರಾಟ ಮಾಡಲು ಯತ್ನಿಸುತ್ತಿದ್ದ ದಂಪತಿಯನ್ನು ಪೊಲೀಸರು ಬಂಧಿಸಿದ್ದು, ಹುಡುಗಿಯರಿಗೆ ಚಾಕೋಲೇಟ್ ಮತ್ತು ಹುಡುಗರಿಗೆ ಲಾಲಿಪಾಪ್​ ಎಂಬ ಕೋಡ್​ಗಳನ್ನು ಆರೋಪಿಗಳು ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

Etv Bharat
Etv Bharat

By

Published : Jan 10, 2023, 10:57 PM IST

ಅಹಮದಾಬಾದ್‌ (ಗುಜರಾತ್​): ಮಾನವ ಕಳ್ಳಸಾಗಣೆಯ ಜಾಲವೊಂದನ್ನು ಗುಜರಾತ್​ ಪೊಲೀಸರು ಪತ್ತೆ ಹೆಚ್ಚಿದ್ದು, ಅಹಮದಾಬಾದ್​ನಲ್ಲಿ ನವಜಾತ ಶಿಶುವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಮಹಾರಾಷ್ಟ್ರ ಮೂಲದ ದಂಪತಿಯನ್ನು ಅಪರಾಧ ವಿಭಾಗದ ತಂಡದ ಅಧಿಕಾರಿಗಳು ಬಂಧಿಸಿದ್ದಾರೆ. ಇದರೊಂದಿಗೆ ಮಾನವ ಕಳ್ಳಸಾಗಣೆಯ ದೊಡ್ಡ ದಂಧೆಯೂ ಬಯಲಿಗೆ ಬರುವ ಸಾಧ್ಯತೆ ಇದೆ.

10-15 ದಿನದ ನವಜಾತ ಶಿಶು: ಬಿಪಿನ್ ಅಲಿಯಾಸ್ ಬಂಟಿ ಶಿರ್ಸಾದ್ ಮತ್ತು ಮೋನಿಕಾ ಬಿಪಿನ್ ಶಿರ್ಸಾದ್ ಎಂಬ ದಂಪತಿಯೇ ಬಂಧಿತರೆಂದು ಗುರುತಿಸಲಾಗಿದೆ. ಇಲ್ಲಿನ ಎಸ್​ಪಿ ರಿಂಗ್​ ರೋಡ್​ನ ರಾಣಾಸನ್ ರೈಲ್ವೆ ಕ್ರಾಸಿಂಗ್‌ನಲ್ಲಿ ಈ ದಂಪತಿಯನ್ನು ಬಂಧಿಸಲಾಗಿದೆ. ಇವರಿಂದ 10ರಿಂದ 15 ದಿನದ ನವಜಾತ ಹೆಣ್ಣು ಶಿಶುವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

2.10 ಲಕ್ಷಕ್ಕೆ ಶಿಶು ಖರೀದಿ: ಈ ನವಜಾತ ಹೆಣ್ಣು ಮಗುವನ್ನು ಹಿಮ್ಮತ್‌ನಗರದಿಂದ 2.10 ಲಕ್ಷ ರೂಪಾಯಿಗೆ ರೇಶಾಂಬಾಯಿ ರಾಥೋಡ್ ಎಂಬುವರ ಮೂಲಕ ಖರೀದಿಸಲಾಗಿದೆ. ಈ ದಂಧೆಯ ಪ್ರಮುಖ ಆರೋಪಿ ಎನ್ನಲಾಗುವ ಉಮಾ ಬೊಮ್ಮಡ ಎಂಬುವವರಿಗೆ ಶಿಶು ಮಾರಾಟ ಮಾಡಲು ಹೊರಟಿದ್ದರು. ಈ ಪ್ರಕರಣದಲ್ಲಿ ಬಂಧಿತ ಆರೋಪಿಗಳನ್ನು ಕೂಲಂಕಷವಾಗಿ ವಿಚಾರಣೆ ನಡೆಸಿದಾಗ ಆರೋಪಿಗಳೇ ಸಬ್​ ಏಜೆಂಟ್​ಗಳಾಗಿ ಕೆಲಸ ಮಾಡುತ್ತಿರುವುದು ಪತ್ತೆಯಾಗಿದೆ.

5 ಲಕ್ಷ ಶಿಶು ಮಾರಲು ಯತ್ನ:ಪ್ರಮುಖ ಏಜೆಂಟ್ ಆಗಿರುವ ಉಮಾ ಹೈದರಾಬಾದ್ ಮೂಲದವರಾಗಿದ್ದು, ಈ ಶಿಶುವನ್ನು ವ್ಯಕ್ತಿಯೊಬ್ಬರಿಗೆ 5 ಲಕ್ಷ ರೂಪಾಯಿಗೆ ಮಾರಾಟ ಮಾಡಲು ಪ್ರಯತ್ನಿಸಲಾಗುತ್ತಿತ್ತು ಎಂದು ಗೊತ್ತಾಗಿದೆ. ಹೀಗಾಗಿಯೇ ಅಪರಾಧ ವಿಭಾಗದ ತಂಡದ ಅಧಿಕಾರಿಗಳು ವಿವಿಧ ತಂಡಗಳನ್ನು ರಚಿಸಿ ಹೈದರಾಬಾದ್‌ನ ಪ್ರಮುಖ ಏಜೆಂಟ್‌ ಉಮಾಳನ್ನು ಬಂಧಿಸುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದಾರೆ.

ಚಾಕೋಲೇಟ್ - ಲಾಲಿಪಾಪ್ ಕೋಡ್​ ವರ್ಡ್​: ಇದೇ ವೇಳೆ ಮಗುವನ್ನು ಹಿಮ್ಮತ್‌ನಗರದಲ್ಲಿ ಆರೋಪಿಗಳಿಗೆ ಮಾರಾಟ ಮಾಡಿದ ಆರೋಪಿ ರೇಷ್ಮಾ ಭಾಯ್‌ ರಾಥೋಡ್‌ ಎಂಬುವವ ಬಂಧಿಸುವ ಪ್ರಯತ್ನ ಸಹ ನಡೆಯುತ್ತಿದೆ. ಬಂಧಿತರ ಆರೋಪಿಗಳ ವಿಚಾರಣೆಯಲ್ಲಿ ಮತ್ತೊಂದು ಪ್ರಮುಖ ಅಂಶ ಬೆಳಕಿಗೆ ಬಂದಿದೆ. ಈ ಖದೀಮರು ಮಕ್ಕಳಿಗೆ ವಿಶೇಷ ಕೋಟ್​ ವರ್ಡ್ ಬಳಸುತ್ತಿದ್ದರು ಎಂಬುವುದೂ ತನಿಖೆಯಲ್ಲಿ ಬಯಲಾಗಿದೆ. ಹುಡುಗಿಯರಿಗೆ ಚಾಕೋಲೇಟ್ ಮತ್ತು ಹುಡುಗರಿಗೆ ಲಾಲಿಪಾಪ್​ ಎಂಬ ಕೋಡ್​ಗಳನ್ನು ಮಾನವ ಕಳ್ಳಸಾಗಣೆಗೆ ಬಳಸುತ್ತಿದ್ದರು ಎಂದು ತಿಳಿದು ಬಂದಿದೆ.

ಅಂತಾರಾಜ್ಯಕ್ಕೆ ಹಬ್ಬಿದ ಜಾಲ: ಅದೇ ರೀತಿಯಾಗಿ ಮಾನವ ಕಳ್ಳಸಾಗಣೆಯು ಅಂತಾರಾಜ್ಯಕ್ಕೂ ಹಬ್ಬಿಕೊಂಡಿದೆ. ಗುಜರಾತ್​ನಿಂದ ಮಹಾರಾಷ್ಟ್ರಕ್ಕೆ ಹಾಗೂ ಮಹಾರಾಷ್ಟ್ರದಿಂದ ಆಂಧ್ರಪ್ರದೇಶಕ್ಕೆ ಮಕ್ಕಳ ಕಳ್ಳಸಾಗಣೆಯ ಸಂಪೂರ್ಣ ದಂಧೆ ಬಹಳ ದಿನಗಳಿಂದ ಕೋಡ್ ವರ್ಡ್​ಗಳನ್ನು ಬಳಸಿ ನಡೆಯುತ್ತಿತ್ತು. ಕಳೆದ ಫೆಬ್ರವರಿಯಲ್ಲಿ ದಾಖಲಾದ ಮಾನವ ಕಳ್ಳಸಾಗಣೆ ಪ್ರಕರಣದಲ್ಲಿ ಗೋಮತಿಪುರ ಠಾಣೆ ಪೊಲೀಸರು ಹೈದರಾಬಾದ್‌ನ ಅನುಷಾ ಅಲಿಯಾಸ್ ನಂದಿ ಮುದವತ್ ಎಂಬ ಮಹಿಳೆಯನ್ನು ಬಂಧಿಸಿದ್ದರು. ಈ ಮಹಿಳೆ ಸಹ ಆರೋಪಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದಾರೆ ಎಂಬುವುದೂ ಗೊತ್ತಾಗಿದೆ.

ಇದನ್ನೂ ಓದಿ:ಪತ್ನಿ- ಮಗಳನ್ನು 21 ತುಂಡುಗಳನ್ನಾಗಿ ಮಾಡಿ ಬಾವಿಗೆಸೆದಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ

ಕಳೆದ 1 ವರ್ಷದಲ್ಲಿ ಗುಜರಾತ್‌ನಲ್ಲಿ ನಾಪತ್ತೆಯಾಗಿರುವ ದಂಧೆಯು ಮತ್ತು ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದೊಂದಿಗೆ ನಂಟು ಹೊಂದಿತ್ತು. ಈಗ ಬಯಲಾದ ಪ್ರಕರಣದಿಂದಲೂ ಮೂರು ರಾಜ್ಯಗಳ ಸಂಪರ್ಕವು ಮುನ್ನೆಲೆಗೆ ಬಂದಿದೆ. ಆದ್ದರಿಂದ ಅಹಮದಾಬಾದ್ ಅಪರಾಧ ವಿಭಾಗದ ಈಗ ಹೆಚ್ಚಿನ ತನಿಖೆಯನ್ನು ಪ್ರಾರಂಭಿಸಿದೆ. ಈ ಅಪರಾಧದಲ್ಲಿ ಇನ್ನೂ ಅನೇಕ ಮಕ್ಕಳ ಕಳ್ಳಸಾಗಣೆ ಪ್ರಕರಣಗಳನ್ನು ಭೇದಿಸುವ ಎಲ್ಲ ಸಾಧ್ಯತೆಗಳಿವೆ.

ಇದನ್ನೂ ಓದಿ:ಯೂಟ್ಯೂಬ್​ ನೋಡಿ ಸ್ಫೋಟಕ ತಯಾರಿಸಿ, ಪ್ರಯೋಗಿಸಿದ ಬಾಲಕರು: ಶಾಲಾ ವಾಹನಕ್ಕೆ ಹಾನಿ

ABOUT THE AUTHOR

...view details