ಅಹಮದಾಬಾದ್, ಗುಜರಾತ್: ವಾಹನ ಮಾಲೀಕರು ತಮ್ಮ ವಾಹನಗಳನ್ನು ತಮ್ಮ ವಸತಿ ಪ್ರದೇಶದಲ್ಲಿ ಮತ್ತು ತಮ್ಮ ವ್ಯಾಪಾರ ಅಥವಾ ವಾಣಿಜ್ಯ ಕೆಲಸದ ಸ್ಥಳದಲ್ಲಿ ನಿಲುಗಡೆ ಮಾಡಲು ಅಹಮದಾಬಾದ್ನಲ್ಲಿ ಅಲ್ಲಿನ ಸ್ಥಳೀಯ ಆಡಳಿತ ಹೊಸ ನಿಯಮಾವಳಿ ಜಾರಿಗೊಳಿಸಲು ಮುಂದಾಗಿದೆ.
ವಾಹನ ನಿಲುಗಡೆಗೆ ಮಾಸಿಕ ಪರವಾನಗಿ ಪರಿಚಯಿಸುವ ಕುರಿತಂತೆ ನಗರಸಭೆ ಆಯುಕ್ತರು ಪ್ರಸ್ತಾಪಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಕಾರು ಹೊಂದಿರುವವರು ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ.
ವಸತಿ ಪ್ರದೇಶಗಳು ಮತ್ತು ಖಾಸಗಿ ಕಟ್ಟಡಗಳಲ್ಲಿನ ಪಾರ್ಕಿಂಗ್ ವಲಯಗಳನ್ನು ಮಹಾನಗರ ಪಾಲಿಕೆ ಬಿಲ್ಡರ್‌ಗಳೊಂದಿಗೆ ಸಮಾಲೋಚಿಸಿ ಗೊತ್ತುಪಡಿಸಲಾಗುತ್ತದೆ. 2012ರಲ್ಲಿ ನಡೆಸಿದ ಸಮೀಕ್ಷೆಯ ಪ್ರಕಾರ, ದ್ವಿಚಕ್ರ ವಾಹನಗಳು ನಗರದ ಶೇಕಡಾ 26ರಷ್ಟು ವಾಹನಗಳನ್ನು ಒಳಗೊಂಡಿದ್ದು, ಈಗ ಅವುಗಳ ಸಂಖ್ಯೆ ಹೆಚ್ಚಾಗಿದೆ.