ಕರ್ನಾಟಕ

karnataka

ETV Bharat / bharat

ಕೊರೊನಾ ಮಧ್ಯೆ ತಲೆಎತ್ತಿದ 'ಕೃಷಿ': ಶೇ 3.4ರಷ್ಟು ಬೆಳವಣಿಗೆ! - ಭಾರತದಲ್ಲಿ ನಿರುದ್ಯೋಗ ದರ

ಸಿಎಂಐಇ ಅಂಕಿ- ಅಂಶಗಳ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರವು ಜೂನ್‌ನಲ್ಲಿ ಶೇಕಡಾ 13 ಕ್ಕೆ ತಲುಪಿದೆ. ಕೋವಿಡ್ -19 ರ ಎರಡನೇ ಅಲೆಯ ಆಘಾತದಿಂದ ಯುವಕರಿಗೆ ಮಾತ್ರವಲ್ಲದೇ ವ್ಯಾಪಾರ ಕ್ಷೇತ್ರಕ್ಕೂ ಅಪಾರ ಸಂಕಷ್ಟ ಎದುರಾಗಿತ್ತು. ಆದರೆ, ಈ ಸಂದರ್ಭದಲ್ಲಿ ಕೃಷಿಯನ್ನು ದೊಡ್ಡ ಭರವಸೆಯಂತೆ ನೋಡಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Agriculture
ಕೃಷಿ

By

Published : Jun 17, 2021, 9:15 PM IST

ನವದೆಹಲಿ: ಕೋವಿಡ್ -19 ಪ್ರಕರಣಗಳ ಏರಿಕೆಯಿಂದಾಗಿ ಭಾರತದ ಆರ್ಥಿಕತೆಯ ಪ್ರತಿಯೊಂದು ವಲಯದಲ್ಲೂ ನಕಾರಾತ್ಮಕ ಬೆಳವಣಿಗೆಯನ್ನು ತೋರಿಸುತ್ತಿರುವ ಸಮಯದಲ್ಲಿ, ಕೃಷಿ 3.4 ರಷ್ಟು ಸಕಾರಾತ್ಮಕ ಬೆಳವಣಿಗೆಯನ್ನು ಹೊಂದಿರುವ ಏಕೈಕ ಕ್ಷೇತ್ರವಾಗಿ ಹೊರಹೊಮ್ಮಿದೆ. ಒಟ್ಟು ದೇಶೀಯ ಉತ್ಪನ್ನಕ್ಕೆ ಕೃಷಿಯ ಕೊಡುಗೆ 2019-20ರಲ್ಲಿ ಶೇ 17.8ರಷ್ಟಿತ್ತು. ಆದರೆ, ಈ ಬಾರಿ ಅಂದರೆ 2020-21ರ ಅವಧಿಯಲ್ಲಿ ಶೇ 20 ರಷ್ಟು ತಲುಪಿದೆ.

ಸಾಂಕ್ರಾಮಿಕವು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಿದೆ. ಮಾತ್ರವಲ್ಲದೇ ಉದ್ಯೋಗ ಕ್ಷೇತ್ರಕ್ಕೂ ಅಡ್ಡಿಯಾಗಿದೆ. ಸಿಎಂಐಇ ಅಂಕಿ - ಅಂಶಗಳ ಪ್ರಕಾರ ಭಾರತದಲ್ಲಿ ನಿರುದ್ಯೋಗ ದರವು ಜೂನ್‌ನಲ್ಲಿ ಶೇಕಡಾ 13 ಕ್ಕೆ ತಲುಪಿದೆ. ಕೋವಿಡ್ -19 ರ ಎರಡನೇ ಅಲೆಯ ಆಘಾತದಿಂದ ಯುವಕರಿಗೆ ಮಾತ್ರವಲ್ಲದೇ ವ್ಯಾಪಾರ ಕ್ಷೇತ್ರಕ್ಕೂ ಅಪಾರ ಸಂಕಷ್ಟ ಎದುರಾಗಿತ್ತು. ಆದರೆ, ಈ ಸಂದರ್ಭದಲ್ಲಿ ಕೃಷಿಯನ್ನು ದೊಡ್ಡ ಭರವಸೆಯಂತೆ ನೋಡಲಾಗುತ್ತಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಚೇಂಬರ್ಸ್ ಆಫ್ ಫುಡ್ ಅಂಡ್​​ ಅಗ್ರಿಕಲ್ಚರ್ ಅಧ್ಯಕ್ಷ ಎಂ.ಜೆ ಖಾನ್ ಈಟಿವಿ ಭಾರತ ಜೊತೆ ವಿಶೇಷ ಸಂವಾದದಲ್ಲಿ ಭಾಗಿಯಾಗಿದ್ದರು. ಕೃಷಿ ಕ್ಷೇತ್ರದ ಬೆಳವಣಿಗೆಯ ನಿರೀಕ್ಷೆಗಳು ಮತ್ತು ಅವಕಾಶಗಳ ಕುರಿತು ಮಾತನಾಡಿದರು. ಸಾಂಕ್ರಾಮಿಕ ಸಮಯದಲ್ಲಿ ಕೃಷಿ ಕ್ಷೇತ್ರವು ನೀಡಿದ ಬೆಳವಣಿಗೆಯ ಬಗ್ಗೆ ಮಾತನಾಡಿದ ಅವರು, ಅಂತಿಮವಾಗಿ ಆಹಾರವಿಲ್ಲದೆ ಏನೂ ಕೆಲಸ ಮಾಡಲು ಸಾಧ್ಯವಿಲ್ಲ ಎಂಬುದು ಅರಿವಾಗಿದೆ ಎಂದಿದ್ದಾರೆ.

ಉತ್ಪಾದನೆ, ಸೇವೆಗಳು ಮತ್ತು ಹೊಸ ತಂತ್ರಜ್ಞಾನಗಳಂತಹ ಇತರ ಕ್ಷೇತ್ರಗಳು ಹೆಚ್ಚು ವೇಗವಾಗಿ ಬೆಳೆಯುತ್ತಿರುವುದರಿಂದ ಮೂಲ ವಲಯ ಬಹಳ ಹಿಂದೆಯೇ ಉಳಿದಿತ್ತು. ಸಾಂಕ್ರಾಮಿಕ ಸಮಯದಲ್ಲಿ ಜೀವನ ಸ್ಥಗಿತಗೊಂಡಾಗ, ಅನೇಕ ಜನರು ಬದುಕುಳಿಯುವ ತಂತ್ರವನ್ನು ಅವಲಂಬಿಸಿ ಸಾಮಾನ್ಯ ಜೀವನಕ್ಕೆ ಮರಳಿದರು. ಸಾಕಷ್ಟು ಆಹಾರ ಮತ್ತು ಅಗತ್ಯವಾದ ಔಷಧಿಯನ್ನು ಹೊಂದಿರಬೇಕು. ಕೃಷಿಯು ತನ್ನ ಮೇಲ್ಮುಖ ಬೆಳವಣಿಗೆಯನ್ನು ಕಾಯ್ದುಕೊಂಡಾಗ ಇದು ಸಾಧ್ಯ ಎಂದು ಎಂ.ಜೆ. ಖಾನ್​ ಹೇಳಿದ್ದಾರೆ.

"ದೀರ್ಘಾವಧಿ ಸರಾಸರಿ ಬೆಳವಣಿಗೆಯು ಶೇಕಡಾ 1.8 ರಿಂದ 2.4 ರಷ್ಟಿತ್ತು. ಆದರೆ ಕಳೆದ ವರ್ಷ ಲಾಕ್‌ಡೌನ್ ಮಧ್ಯೆ ಹಲವಾರು ನಿರ್ಬಂಧಗಳ ನಡುವೆಯೂ ಕೃಷಿ ಸುಮಾರು ಮೂರೂವರೆ ಶೇಕಡಾ ಏರಿಕೆಯಾಗಿದೆ. ಅಷ್ಟೇ ಅಲ್ಲ, ಕೃಷಿ ರಫ್ತು ಶೇಕಡಾ 24 ರಷ್ಟು ಹೆಚ್ಚಾಗಿದೆ. ಇದು ಅಭೂತಪೂರ್ವ ಮತ್ತು ಹಿಂದೆಂದೂ ಸಂಭವಿಸಿಲ್ಲದ ಘಟನೆ ಎಂದರು.

ABOUT THE AUTHOR

...view details