ಥಾಣೆ(ಮಹಾರಾಷ್ಟ್ರ): 2018 ರಲ್ಲಿ ಅಪಘಾತವೊಂದಲ್ಲಿ ಮಗನನ್ನು ಕಳೆದುಕೊಂಡಿದ್ದ ಪೋಷಕರು, ತಮಗೆ ದೊರೆತ ಪರಿಹಾರದ ಹಣವನ್ನು ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿನಿಯೋಗಿಸಲು ನಿರ್ಧರಿಸಿದ್ದಾರೆ.
2018ರಲ್ಲಿ ಮುಂಬೈನ ಈಸ್ಟರ್ನ್ ಎಕ್ಸ್‌ಪ್ರೆಸ್ ಹೆದ್ದಾರಿಯ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ ಹೊಡೆದು ಬಳಿಕ ಎದುರಿಗೆ ಬಂದ ಕಂಟೇನರ್ ಗುದ್ದಿದ ಪರಿಣಾಮ 21 ವರ್ಷದ ಯುವಕ ಮೃತಪಟ್ಟಿದ್ದ. ಈ ಹಿನ್ನೆಲೆ ಆತನ ಪೋಷಕರು ಥಾಣೆ ಮೋಟಾರ್ ಆಕ್ಸಿಡೆಂಟ್ ಕ್ಲೈಮ್ಸ್ ಟ್ರಿಬ್ಯೂನಲ್ (MACT)ಗೆ ಅರ್ಜಿ ಸಲ್ಲಿಸಿ, 50 ಲಕ್ಷ ರೂಪಾಯಿ ಪರಿಹಾರ ಕೋರಿದ್ದರು.
MACT ಸದಸ್ಯ ಮತ್ತು ಜಿಲ್ಲಾ ನ್ಯಾಯಾಧೀಶರಾದ ಆರ್.ಎನ್. ರೋಕಡೆ ಅವರ ಮಧ್ಯಸ್ಥಿಕೆಯ ನಂತರ, ಕಾರು ಮಾಲೀಕ 27.30 ಲಕ್ಷ ರೂಪಾಯಿ ಪರಿಹಾರ ಕೊಟ್ಟರು. ಮ್ಯಾಕ್ಟ್ ಸಂಪರ್ಕಿಸುವ ಮುನ್ನ ವಕೀಲ ಪ್ರದೀಪ್ ಟಿಲ್ಲು ಎಂಬುವರು ಈ ಪ್ರಕರಣವನ್ನು ನಡೆಸುತ್ತಿದ್ದರು.