ಕರ್ನಾಟಕ

karnataka

ETV Bharat / bharat

ಬಂಗಾಳದ ನಂತರ ನಮ್ಮ ಗುರಿ ದೆಹಲಿಯ ಕಡೆಗೆ: ಮಮತಾ ಬ್ಯಾನರ್ಜಿ

ಬಿಜೆಪಿ ಅಸತ್ಯ ಮತ್ತು ಸುಳ್ಳಿನ ಅನಿಲ ಬಲೂನ್ ಆಗಿದೆ. ಅವರು ಚುನಾವಣೆಗೆ ಮುಂಚಿತವಾಗಿ ಮತಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ ಎಂದು ಸಿಎಂ ಮಮತಾ ಬ್ಯಾನರ್ಜಿ ಆರೋಪಿಸಿದರು.

After Bengal I will target Delhi: Mamata
ಬಂಗಾಳದ ನಂತರ ನಮ್ಮ ಗುರಿ ಕೇಂದ್ರದ ಕಡೆ

By

Published : Mar 18, 2021, 8:42 PM IST

ಕೋಲ್ಕತಾ: ಪಶ್ಚಿಮ ಬಂಗಾಳದ ಚುನಾವಣೆ ಮುಗಿಯಲಿ. ಬಂಗಾಳವನ್ನು ವಶಪಡಿಸಿಕೊಂಡ ನಂತರ ಬಿಜೆಪಿಯ ಹಿಡಿತದಿಂದ ದೆಹಲಿಯನ್ನು ಬಿಡಿಸಿಕೊಳ್ಳುವುದೇ ನಮ್ಮ ಗುರಿ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಕಲೈಕುಂಡದಲ್ಲಿ ನಡೆದ ರ್ಯಾಲಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ತೃಣಮೂಲ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ಜಯಶಾಲಿಯಾದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರವನ್ನು ಹೊರಹಾಕುತ್ತದೆ ಎಂಬ ಭಯ ಮೋದಿಯವರನ್ನು ಕಾಡುತ್ತಿದೆ. ಪಶ್ಚಿಮ ಬಂಗಾಳದ ಆಡಳಿತದಲ್ಲಿ ಬದಲಾವಣೆ ತರಲು ಬಿಜೆಪಿ ಕರೆ ನೀಡುತ್ತಿದೆ. ಹೌದು, ಬದಲಾವಣೆ ಇರುತ್ತದೆ. ಆದರೆ ಆ ಬದಲಾವಣೆಯು ದೆಹಲಿಯಲ್ಲಿರುತ್ತದೆ, ಬಂಗಾಳದಲ್ಲಿ ಅಲ್ಲ ಎಂದು ಬಿಜೆಪಿಗೆ ಸವಾಲು​ ಹಾಕಿದರು.

ಬಂಗಾಳ ಚುನಾವಣೆಯಲ್ಲಿ ಜಯಗಳಿಸಿದ ನಂತರ ತಮ್ಮ ಸರ್ಕಾರ ತೇಜ್‌ಪುರ ಬಂದರು ಸ್ಥಾಪಿಸುತ್ತದೆ. ಇದೇ ಜಿಲ್ಲೆಯ ಗಾರ್ಬೆಟಾದಲ್ಲಿ ನಡೆದ ಮತ್ತೊಂದು ರ್ಯಾಲಿಯಲ್ಲಿ ಮಾತನಾಡಿದ ಸಿಎಂ, ಬಿಜೆಪಿ ಅಸತ್ಯ ಮತ್ತು ಸುಳ್ಳಿನ ಅನಿಲ ಬಲೂನ್ ಆಗಿದೆ. ಅವರು ಚುನಾವಣೆಗೆ ಮುಂಚಿತವಾಗಿ ಮತಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ ಎಂದು ಆರೋಪಿಸಿದರು.

ನಾನು ಹುಲಿಯಂತೆ ಹೋರಾಡುತ್ತೇನೆ. ಯಾವುದೇ ದೈಹಿಕ ಹಲ್ಲೆ ನನ್ನನ್ನು ತಡೆಯಲು ಸಾಧ್ಯವಾಗುವುದಿಲ್ಲ. ಗಾಯಗೊಂಡಿದ್ದರೂ ಕೂಡ ನಾನು ಹೋರಾಡುತ್ತೇನೆ. ಬಂಗಾಳದ ಜನರನ್ನು ನಾನು ತಲುಪುವುದನ್ನು ತಡೆಯಲು ಯಾವುದೇ ಶಕ್ತಿಯಿಂದ ಸಾಧ್ಯವಿಲ್ಲ ಎಂದಿದ್ದಾರೆ.

ಜಂಗಲ್ಮಹಲ್ ಪ್ರದೇಶದಲ್ಲಿ ಒಂದು ಕಾಲದಲ್ಲಿ ದೊಡ್ಡ ಮಾವೋವಾದಿ ಸಮಸ್ಯೆ ಇತ್ತು. ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದರು. ಆದರೆ, ಆ ಎಲ್ಲಾ ಸಮಸ್ಯೆಗಳನ್ನು ಈಗ ಪರಿಹರಿಸಲಾಗಿದೆ ಎಂದು ತಿಳಿಸಿದರು.

ABOUT THE AUTHOR

...view details