ಕರ್ನಾಟಕ

karnataka

By

Published : May 29, 2021, 9:25 PM IST

ETV Bharat / bharat

ಮಿಜೋರಾಂನಲ್ಲಿ ಹೆಚ್ಚಾದ ಆಫ್ರಿಕನ್ ಹಂದಿ ಜ್ವರ ಭೀತಿ..!

ಮಾರ್ಚ್ 21 ರಂದು ಬಾಂಗ್ಲಾ ಗಡಿಯಲ್ಲಿರುವ ಲುಂಗ್ಲೆ ಜಿಲ್ಲೆಯಲ್ಲಿ ಈ ರೋಗಕ್ಕೆ ತುತ್ತಾಗಿ ಒಂದು ಹಂದಿ ಮೃತಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯು ಐಜಾಲ್, ಲುಂಗ್ಲೆ, ಮಾಮಿತ್, ಲಾಂಗ್ಟೈ, ಹನ್ನಾಥಿಯಲ್, ಸಿಯಾಹ ಮತ್ತು ಚಂಪೈ ಸೇರಿ 9 ಜಿಲ್ಲೆಗಳಿಗೆ ಹರಡಿತು. ಕೋಲಾಸಿಬ್​ ಮತ್ತು ಸೈಚುಯಲ್ ಜಿಲ್ಲೆಗಳು ಮಾತ್ರ ಎಎಸ್​ಎಫ್​ ಮುಕ್ತವಾಗಿವೆ ಎಂದು ತಂಗಾ ಪ್ರತಿಕ್ರಿಯಿಸಿದ್ದಾರೆ.

ಆಫ್ರಿಕನ್ ಹಂದಿ ಜ್ವರ ಭೀತಿ
ಆಫ್ರಿಕನ್ ಹಂದಿ ಜ್ವರ ಭೀತಿ

ಮಿಜೋರಾಂ:ರಾಜ್ಯದಲ್ಲಿ ದಿನೇದಿನೆ ಆಫ್ರಿಕನ್ ಹಂದಿಜ್ವರ ವ್ಯಾಪಿಸುತ್ತಲೇ ಇದ್ದು, ಎರಡು ತಿಂಗಳಲ್ಲಿ 4,650 ಹಂದಿಗಳು ಮೃತಪಟ್ಟಿವೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದರಿಂದಾಗಿ ರೈತರಿಗೆ 18.60 ಕೋಟಿ ರೂ.ಗಳ ನಷ್ಟವಾಗಿದೆ ಎಂದು ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ವಿಭಾಗದ ಜಂಟಿ ನಿರ್ದೇಶಕ ಲಾಲ್​ಮಿಂಗ್ ತಂಗಾ ಹೇಳಿದ್ದಾರೆ.

ಮಾರ್ಚ್ 21 ರಂದು ಬಾಂಗ್ಲಾ ಗಡಿಯಲ್ಲಿರುವ ಲುಂಗ್ಲೆ ಜಿಲ್ಲೆಯಲ್ಲಿ ಈ ರೋಗಕ್ಕೆ ತುತ್ತಾಗಿ ಒಂದು ಹಂದಿ ಮೃತಪಟ್ಟಿತ್ತು. ಅಂದಿನಿಂದ ಈ ಕಾಯಿಲೆಯು ಐಜಾಲ್, ಲುಂಗ್ಲೆ, ಮಾಮಿತ್, ಲಾಂಗ್ಟೈ, ಹನ್ನಾಥಿಯಲ್, ಸಿಯಾಹ ಮತ್ತು ಚಂಪೈ ಸೇರಿ 9 ಜಿಲ್ಲೆಗಳಿಗೆ ಹರಡಿತು. ಕೋಲಾಸಿಬ್​ ಮತ್ತು ಸೈಚುಯಲ್ ಜಿಲ್ಲೆಗಳು ಮಾತ್ರ ಎಎಸ್​ಎಫ್​ ಮುಕ್ತವಾಗಿವೆ ಎಂದು ತಂಗಾ ಪ್ರತಿಕ್ರಿಯಿಸಿದ್ದಾರೆ.

ಪೀಡಿತ ಜಿಲ್ಲೆಗಳ 91 ಹಳ್ಳಿಗಳನ್ನು ಎಎಸ್​ಎಫ್​ನ ಸೋಂಕಿತ ಪ್ರದೇಶಗಳೆಂದು ಘೋಷಿಸಲಾಗಿದೆ. 100 ಹಂದಿಗಳು ಅಸಮಾನ್ಯವಾಗಿ ಮೃತಪಟ್ಟಿದ್ದು, ಕಾರಣ ಏನೆಂದು ಪತ್ತೆ ಹಚ್ಚಲಾಗುತ್ತಿದೆ. ನೆರೆಯ ರಾಜ್ಯ ಹಾಗೂ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಹಂದಿಗಳಿಂದ ಈ ರೋಗ ವ್ಯಾಪಿಸುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಿಜೋರಾಂ ಅಸ್ಸಾಂ, ಮಣಿಪುರ ಮತ್ತು ತ್ರಿಪುರದೊಂದಿಗೆ ಅಂತರ್​​ರಾಜ್ಯ ಗಡಿಗಳನ್ನು ಮತ್ತು ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನೊಂದಿಗೆ ಅಂತರರಾಷ್ಟ್ರೀಯ ಗಡಿಗಳನ್ನು ಹಂಚಿಕೊಂಡಿದೆ.

ಎಎಸ್ಎಫ್ ಹೆಚ್ಚು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಕಾಡು ಹಂದಿಗಳ ಮೇಲೂ ಪರಿಣಾಮ ಬೀರುತ್ತದೆ. ಇದು ಮನುಷ್ಯರಿಗೆ ಹರಡಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.

ABOUT THE AUTHOR

...view details