ಹೈದರಾಬಾದ್: ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್ ಮತ್ತು ಅವರ ಪತ್ನಿ, ಚಿತ್ರ ನಿರ್ಮಾಪಕಿ ಕಿರಣ್ ರಾವ್ ವಿಚ್ಛೇದನ ಪಡೆಯುವುದಾಗಿ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನಾವು ನಮ್ಮ ಜೀವನದಲ್ಲಿ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ. ನಾವಿಬ್ಬರು ಪರಸ್ಪರ ಗಂಡ-ಹೆಂಡತಿಯಾಗಿರಲ್ಲ. ಆದರೆ, ಮಗನಿಗೆ ಪೋಷಕರಾಗಿ ಇರುತ್ತೇವೆ ಎಂದಿದ್ದಾರೆ.
Divorce ಘೋಷಿಸಿದ ಅಮೀರ್ಖಾನ್-ಕಿರಣ್ ರಾವ್.. 15 ವರ್ಷದ ದಾಂಪತ್ಯಕ್ಕೆ ಫುಲ್ ಸ್ಟಾಪ್!
ನಟ ಅಮೀರ್ಖಾನ್ ಮತ್ತು ಪತ್ನಿ ಕಿರಣ್ ರಾವ್ ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆಯಲು ಮುಂದಾಗಿದ್ದಾರೆ. ಈ ಕುರಿತು ಜಂಟಿ ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಈ 15 ವರ್ಷಗಳಲ್ಲಿ ಪರಸ್ಪರ ನೋವು-ನಲಿವುಗಳನ್ನು ಹಂಚಿಕೊಂಡಿದ್ದೇವೆ. ನಮ್ಮ ಸಂಬಂಧವು ನಂಬಿಕೆ, ಗೌರವ ಮತ್ತು ಪ್ರೀತಿಯಿಂದ ಕೂಡಿದೆ. ಆದರೆ, ನಾವೀಗ ನಮ್ಮ ಜೀವನದ ಹೊಸ ಅಧ್ಯಾಯ ಪ್ರಾರಂಭಿಸಲು ಬಯಸುತ್ತೇವೆ ಎಂದಿದ್ದಾರೆ.
ನಾವು ಕೆಲ ದಿನಗಳಿಂದ ಪ್ರತ್ಯೇಕವಾಗಿದ್ದೆವು. ಅದನ್ನು ಔಪಚಾರಿಕಗೊಳಿಸಲು ಈಗ ಮುಂದಾಗಿದ್ದೇವೆ. ನಮ್ಮ ಮಗ ಆಜಾದ್ಗೆ ನಾವಿಬ್ಬರು ಪೋಷಕರಾಗಿದ್ದು, ಒಟ್ಟಿಗೆ ಪೋಷಿಸುತ್ತೇವೆ. ನಮ್ಮ ನಿರ್ಧಾರಕ್ಕೆ ಬೆಂಬಲಿಸಿದ ಕುಟುಂಬಸ್ಥರು, ಸ್ನೇಹಿತರಿಗೂ ಧನ್ಯವಾದಗಳು. ನಮ್ಮ ಈ ವಿಚ್ಛೇದನವನ್ನು ದಾಂಪತ್ಯದ ಅಂತ್ಯವಾಗಿ ನೋಡದೆ, ಹೊಸ ಪ್ರಯಾಣದ ಆರಂಭವಾಗಿ ನೋಡುತ್ತೀರಿ ಎಂದು ಭಾವಿಸಿದ್ದೇವೆ ಎಂದಿದ್ದಾರೆ.