ಕರ್ನಾಟಕ

karnataka

ETV Bharat / bharat

ದೆಹಲಿ ವಕ್ಫ್ ಬೋರ್ಡ್‌ನ ನೇಮಕದಲ್ಲಿ ಅಕ್ರಮ ಆರೋಪ: ಆಪ್​ ಶಾಸಕ ಅಮಾನತುಲ್ಲಾ ಖಾನ್ ಬಂಧನ

ದೆಹಲಿ ವಕ್ಫ್ ಬೋರ್ಡ್‌ನ ನೇಮಕಾತಿಯಲ್ಲಿ ಅಕ್ರಮ ಆರೋಪ ಪ್ರಕರಣದಲ್ಲಿ ಬೋರ್ಡ್‌ನ ಅಧ್ಯಕ್ಷರಾದ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಎಸಿಬಿ ಬಂಧಿಸಿದೆ.

Etv Bharat
Etv Bharat

By

Published : Sep 16, 2022, 11:02 PM IST

ನವದೆಹಲಿ: ದೆಹಲಿ ವಕ್ಫ್ ಬೋರ್ಡ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಬಂಧಿಸಿದೆ. ಅಲ್ಲದೇ, ಗನ್​, ಗುಂಡು ಹಾಗೂ ನಗದು ಹಣವನ್ನು ವಶಕ್ಕೆ ಪಡೆಯಲಾಗಿದೆ.

ವಕ್ಫ್ ಬೋರ್ಡ್‌ನ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂಬ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಶಾಸಕ ಅಮಾನತುಲ್ಲಾ ಖಾನ್ ಸಹಚರರಿಗೆ ಸೇರಿದ ನಾಲ್ಕು ವಿವಿಧ ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಸಹವರ್ತಿ ಹಮೀದ್ ಅಲಿ ಬಳಿ ಗನ್, ಗುಂಡು ಮತ್ತು 12 ಲಕ್ಷ ರೂಪಾಯಿ ನಗದು ಪತ್ತೆಯಾಗಿದೆ. ಗನ್‌ ಪರವಾನಗಿ ಖಚಿತ ಪಡಿಸಲು ಹಮೀದ್ ಅಲಿ ವಿಫಲರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ದಾಳಿಯ ನಂತರ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಅಧಿಕಾರಿಗಳು ಬಂದಿದೆ. ನೇಮಕಾತಿ ಅಕ್ರಮದಲ್ಲಿ ಕ್ರಿಮಿನಲ್ ಪಿತೂರಿ ಸಂಬಂಧ ತನಿಖೆ ನಡೆಯುತ್ತಿದೆ. ಅಮಾನತುಲ್ಲಾ ವಕ್ಫ್ ಬೋರ್ಡ್‌ನ ಅಧ್ಯಕ್ಷರಾಗಿರುವ ಕಾರಣ ಅವರನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿ ಮಾಡಲಾಗಿದೆ.

ಇದನ್ನೂ ಓದಿ:ಇಡೀ ಗ್ರಾಮವೇ ನಮಗೆ ಸೇರಿದ್ದು ವಕ್ಫ್​​ ಮಂಡಳಿ ನೋಟಿಸ್: ಡಿಎಂಕೆ ವಿರುದ್ಧ ಬಿಜೆಪಿ ನಾಯಕರ ವಾಗ್ದಾಳಿ

ABOUT THE AUTHOR

...view details