ಬುಲಂದ್ಶಹರ್: ಉತ್ತರಪ್ರದೇಶದ ಬುಲಂದ್ ಶಹರ್ನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಪದವಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣವೊಂದು ಬೆಳಕಿಗೆ ಬಂದಿದೆ. ಕೆಲಸದ ಆಮೀಷವೊಡ್ಡಿ ಚಲಿಸುತ್ತಿದ್ದ ಕಾರಿನಲ್ಲಿ ಯುವಕ ಅತ್ಯಾಚಾರ ಎಸಗಿ, ವಿಡಿಯೋವನ್ನು ಚಿತ್ರೀಕರಿಸಿದ್ದಾನೆ ಎಂದು ಸಂತ್ರಸ್ತೆ ಮಹಿಳೆ ಆರೋಪಿಸಿದ್ದಾಳೆ. ಈ ಪ್ರಕರಣದಲ್ಲಿ ಸಂತ್ರಸ್ತೆ ಕುಟುಂಬಸ್ಥರು ನಾಲ್ವರು ಯುವಕರ ವಿರುದ್ಧ ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಎಂದು ಪ್ರಕರಣ ದಾಖಲಿಸಿದ್ದರು. ಆದರೆ ತನಿಖೆ ವೇಳೆ ಸಾಮೂಹಿಕ ಅತ್ಯಾಚಾರವಲ್ಲ ಎಂದು ತಿಳಿದು ಬಂದಿದೆ.
ಸಂತ್ರಸ್ತೆ ದೂರಿನಲ್ಲಿ ಹೇಳಿದ್ದಿಷ್ಟು: ’’ಶುಕ್ರವಾರ ಕಾಲೇಜಿನಿಂದ ಮನೆಗೆ ಹಿಂದಿರುಗಿದ್ದ ವೇಳೆ ಸಂತ್ರಸ್ತೆ ಪರಿಚಯಸ್ಥ ಕೆಲಸ ಕೊಡಿಸುವುದಾಗಿ ಹೇಳಿ ಕಾರಿನಲ್ಲಿ ಕರೆದೊಯ್ದಿದ್ದಾನೆ. ಇದಾದ ಬಳಿಕ ಚಲಿಸುತ್ತಿದ್ದ ಕಾರಿನಲ್ಲೇ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ. ಇದಕ್ಕೆ ವಿರೋಧಿಸಿ ಕಿರುಚಾಡಿದ್ದಕ್ಕೆ ಥಳಿಸಿದ್ದಾನೆ. ಅಲ್ಲದೇ ಘಟನೆಯ ಬಳಿಕ ಮೊಬೈಲ್ ಫೋನ್ ಕಸಿದುಕೊಂಡಿದ್ದಾನೆ. ಜತೆಗೆ ಅಶ್ಲೀಲ ವಿಡಿಯೋ ಕೂಡ ಮೊಬೈಲ್ನಲ್ಲಿ ಚಿತ್ರೀಕರಿಸಿದ್ದಾನೆ. ಘಟನೆ ಬಗ್ಗೆ ಯಾರಿಗಾದರೂ ಹೇಳಿದರೆ ಅಥವಾ ದೂರು ನೀಡಿದರೆ ಅಶ್ಲೀಲ ವಿಡಿಯೋವನ್ನು ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾಳೆ’’. ಕಾರಿನಲ್ಲಿ ಧೀರಜ್ ಜೊತೆಗೆ ಇತರ ಮೂವರು ಇದ್ದರು. ನಾಲ್ವರೂ ಸೇರಿ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಯುವತಿ ಪೋಷಕರು ದೂರಿನಲ್ಲಿ ದಾಖಲಿಸಿದ್ದಾರೆ.
ಪ್ರಕರಣದ ಬಗ್ಗೆ ಎಸ್ಪಿ ಪ್ರತಿಕ್ರಿಯೆ:
ಜಹಾಂಗೀರಾಬಾದ್ ನಿವಾಸಿಯಾಗಿರುವ ಸಂತ್ರಸ್ತೆ ಪದವಿ ವಿದ್ಯಾರ್ಥಿನಿ. ಶುಕ್ರವಾರ ಆಕೆ ಕಾಲೇಜಿನಿಂದ ಮನೆಗೆ ವಾಪಸ್ಸಾಗಿದ್ದಳು. ಈ ವೇಳೆ ಹುಡುಗಿಯ ಪರಿಚಯಸ್ಥ ಧೀರಜ್ ಎನ್ನುವವನು ಆಕೆಗೆ ಕೆಲಸ ಕೊಡಿಸುವುದಾಗಿ ಹೇಳಿ ಬೈಕ್‌ನಲ್ಲಿ ನಗರಕ್ಕೆ ಕರೆದೊಯ್ದಿದ್ದಾನೆ. ಅಲ್ಲಿಂದ ಕಾರ್ವೊಂದರಲ್ಲಿ ಕರೆದುಕೊಂಡು ಹೋಗಿದ್ದಾನೆ. ದಾರಿ ಮಧ್ಯೆ ಚಲಿಸುತ್ತಿದ್ದ ಕಾರಿನಲ್ಲಿ ಸಂತ್ರಸ್ತೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಜತೆಗೆ ಅಶ್ಲೀಲ ವಿಡಿಯೋ ಕೂಡ ಮಾಡಿದ್ದಾನೆ. ಇದಾದ ಬಳಿಕ ಆಕೆಯ ಮೊಬೈಲ್ ಫೋನ್ ಕಿತ್ತುಕೊಂಡು, ಈ ಬಗ್ಗೆ ಯಾರಿಗಾದರು ತಿಳಿಸಿದರೆ ವಿಡಿಯೋ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿ ಸಂತ್ರಸ್ತೆಯನ್ನು ಔರಂಗಾಬಾದ್ ಪ್ರದೇಶದಲ್ಲಿನ ರಸ್ತೆಬದಿ ಬಿಟ್ಟು ಹೋಗಿದ್ದಾನೆ . ಬಳಿಕ ಸಂತ್ರಸ್ತೆ ಸ್ಥಳೀಯ ಜನರಿಗೆ ವೈದ್ಯರ ಬಳಿ ಕರೆದೊಯ್ಯುವಂತೆ ಸಹಾಯ ಕೇಳಿದ್ದಾಳೆ. ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಂದ ಬಾಲಕಿ ತನ್ನ ಚಿಕ್ಕಪ್ಪನಿಗೆ ಕರೆ ಮಾಡಿ ಘಟನೆಯ ಬಗ್ಗೆ ಹೇಳಿದ್ದಾಳೆ. ಬಳಿಕ ವಿದ್ಯಾರ್ಥಿಯ ಕುಟುಂಬಸ್ಥರು ಹಾಗೂ ಆಕೆಯ ತಾಯಿ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಸೆಪ್ಟೆಂಬರ್ 3 ರಂದು ಜಹಾಂಗೀರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು. ತನಿಖೆಯಲ್ಲಿ, ಸಾಮೂಹಿಕ ಅತ್ಯಾಚಾರದ ಆರೋಪ ನಿಜವೆಂದು ಸಾಬೀತಾಗಲಿಲ್ಲ. ಬದಲಿಗೆ ಆರೋಪಿ ಧೀರಜ್ ಅತ್ಯಾಚಾರ ನಡೆಸಿರುವುದು ಸಾಬೀತಾಗಿದೆ. ಆತನನ್ನು ಬಂಧಿಸಲಾಗಿದೆ. ಆರೋಪಿಯು ವಿದ್ಯಾರ್ಥಿಯ ಪರಿಚಯಸ್ಥ ಎಂಬುದು ತನಿಖೆ ವೇಳೆ ಗೊತ್ತಾಗಿದೆ - ದೇಹತ್ ಬಜರಂಗಬಲಿ ಚೌರಾಸಿಯಾ, ಎಸ್ಪಿ
ಇದನ್ನೂ ಓದಿ:ಗನ್ ತೋರಿಸಿ ಮಹಿಳಾ ಕಾನ್ಸ್ಟೇಬಲ್ ಮೇಲೆ ಸಹೋದ್ಯೋಗಿಯಿಂದಲೇ ಅತ್ಯಾಚಾರ : ಪ್ರಕರಣ ದಾಖಲು