ಕರ್ನಾಟಕ

karnataka

ETV Bharat / bharat

ಅಯ್ಯೋ ದೇವರೇ! ಒಂದೇ ಬೆಡ್​ ಮೇಲೆ ಮೃತದೇಹ-ಸೋಂಕಿತ ವ್ಯಕ್ತಿ! - ಅನಂತಪುರ ಕೊರೊನಾ ಸುದ್ದಿ

ಕೊರೊನಾಯಿಂದಾಗಿ ಆಸ್ಪತ್ರೆಯಲ್ಲಿ ಎಂಥಾ ಸ್ಥಿತಿ ಬಂದೊದಗಿದೆ ಅಂದ್ರೆ ನಾವು ಊಹೆ ಮಾಡಿಕೊಳ್ಳಲೂ ಅಸಾಧ್ಯವಾಗಿದೆ. ಒಂದೇ ಬೆಡ್​ ಮೇಲೆ ಮೃತದೇಹ ಜೊತೆ ಸೋಂಕಿತನಿಗೆ ಚಿಕಿತ್ಸೆ ನೀಡುತ್ತಿರುವ ಘಟನೆ ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿ ನಡೆದಿದೆ.

A Young man take treatment, A Young man take treatment with dead body, A Young man take treatment with dead body at Anantapur, Anantapur news, Anantapur latest news, ಯುವಕನಿಗೆ ಚಿಕಿತ್ಸೆ, ಮೃತದೇಹ ಪಕ್ಕದಲ್ಲೇ ಯುವಕನಿಗೆ ಚಿಕತ್ಸೆ, ಅನಂತಪುರದಲ್ಲಿ ಮೃತದೇಹ ಪಕ್ಕದಲ್ಲೆ ಯುವಕನಿಗೆ ಚಿಕಿತ್ಸೆ, ಅನಂತಪುರ ಸುದ್ದಿ, ಅನಂತಪುರ ಕೊರೊನಾ ಸುದ್ದಿ,
ಒಂದೇ ಬೆಡ್​ ಮೇಲೆ ಮೃತದೇಹ, ಸೋಂಕಿತನಿಗೆ ಚಿಕಿತ್ಸೆ

By

Published : May 7, 2021, 10:25 AM IST

ಅನಂತಪುರ: ಜಿಲ್ಲೆಯಲ್ಲಿ ಕೋವಿಡ್​ ಆರ್ಭಟ ಹೆಚ್ಚಾಗಿದೆ. ಕೋವಿಡ್​ನಿಂದಾಗಿ ರೋಗಿಗಳು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಅಷ್ಟೇ ಅಲ್ಲದೆ ಆಸ್ಪತ್ರೆಗಳಲ್ಲಿ ಬೆಡ್​ ಇರದ ಕಾರಣ ಒಂದೇ ಬೆಡ್​ ಮೇಲೆ ಇಬ್ಬಿಬ್ಬರಿಗೆ ಚಿಕಿತ್ಸೆ ನೀಡುವ ಸ್ಥಿತಿ ಬಂದೊದಗಿದೆ.

ಕಣೇಕಲ್ಲು ತಾಲೂಕಿನ ನಿವಾಸಿಗೆ ವಯಸ್ಸಾಗಿದ್ದು, ಕೊರೊನಾದಿಂದಾಗಿ ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದರು. ಗುರುವಾರ ಬೆಳಗ್ಗೆ ಅನಂತಪುರ ಜಿಲ್ಲಾಸ್ಪತ್ರೆಗೆ ಬಂದಿದ್ದಾರೆ. ಈ ವೇಳೆ ಬೆಡ್​ ಇಲ್ಲದ ಕಾರಣ ಯುವಕನ ಪಕ್ಕದಲ್ಲೇ ಮಲಗಿಸಿ ಆಕ್ಸಿಜನ್​ ನೀಡಿದ್ದಾರೆ.

ಒಂದೇ ಬೆಡ್​ ಮೇಲೆ ಮೃತದೇಹ, ಸೋಂಕಿತನಿಗೆ ಚಿಕಿತ್ಸೆ

ಆ ವೃದ್ಧನಿಗೆ ಆಕ್ಸಿಜನ್​ ನೀಡಿ ಕೆಲ ಗಂಟೆಗಳ ಬಳಿಕ ಮೃತಪಟ್ಟಿದ್ದಾರೆ. ಮೃತದೇಹವನ್ನು ಬೇರೆಡೆ ಸಾಗಿಸದೆ ಆಸ್ಪತ್ರೆ ಸಿಬ್ಬಂದಿ ಅಲ್ಲೇ ಬಿಟ್ಟಿದ್ದಾರೆ. ಮೃತದೇಹದ ಪಕ್ಕದಲ್ಲೇ ಮಲಗಿ ಆ ಯುವಕ ಆಕ್ಸಿಜನ್​ ಪಡೆದಿದ್ದಾನೆ. ಎರಡ್ಮೂರು ಗಂಟೆ ಬಳಿಕ ಮೃತದೇಹವನ್ನು ಅಲ್ಲಿಂದ ಬೇರೆಡ ರವಾನಿಸಲಾಗಿದೆ.

ಬೆಡ್​ಗಳ ಅಲಭ್ಯ ಮತ್ತು ಸಿಬ್ಬಂದಿ ಕೊರತೆಯಿಂದಾಗಿ ಇಂತಹ ಸ್ಥಿತಿ ಎದುರಾಗಿದೆ ಎನ್ನಲಾಗಿದೆ.

ABOUT THE AUTHOR

...view details