ಮುಂಬೈ: ಒಮನ್‌ನಲ್ಲಿ 43 ವರ್ಷದ ಮಹಿಳೆಯನ್ನು ಮನೆಗೆಲಸದ ನೆಪದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕಾಶಿಮೀರಾ ಪೊಲೀಸರು ಪ್ರಕರಣದ ಆರೋಪಿಗಳಾದ ಏಜೆಂಟ್ರ್ ಅಶ್ರಫ್ ಮತ್ತು ನಮಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭಾರತೀಯ ದಂಡ ಸಂಹಿತೆಯ ವಿವಿಧ ಕಾಯ್ದೆಗಳಡಿ ಕೇಸ್ ದಾಖಲು.. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 420, 370 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಶ್ರಫ್ ಮತ್ತು ನಮಿತಾಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಜೂನ್ 8, 2022 ಮತ್ತು ಆಗಸ್ಟ್ 2, 2022ರ ನಡುವೆ ಸಂತ್ರಸ್ತೆಗೆ ವಂಚಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ನೊಂದ ಮಹಿಳೆ ಫೆಬ್ರವರಿ 21 ರಂದು ಬಗ್ಗೆ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಸೊಸೆ, ಮಗ, ತಂದೆಯಿಂದ ನಡೀತಿತ್ತು ಹೈಟೆಕ್ ವೇಶ್ಯಾವಾಟಿಕೆ.. ದಂಧೆಗೆ ಬರುತ್ತಿದ್ದರು ಮಹಾರಾಷ್ಟ್ರ ಕಾಲ್ ಗರ್ಲ್ಸ್
ಒಮನ್ ಗೆ ಮಾರಾಟ ಮಾಡುವ ಮೂಲಕ ಮಾನವ ಕಳ್ಳಸಾಗಣೆ.. ದೂರು ನೀಡಿರುವ 43 ವರ್ಷದ ಮಹಿಳೆಯು ಜೂನಿಯರ್ ಆರ್ಟಿಸ್ಟ್ ಸಪ್ಲೈಯರ್ ಆಗಿದ್ದು, ಬ್ಯೂಟಿ ಪಾರ್ಲರ್ ಕೂಡ ನಡೆಸುತ್ತಿದ್ದಾರೆ. ಈಕೆ ಜೂನ್ 2022 ರಲ್ಲಿ ಮುಂಬೈನ ನೆರೂಲ್‌ನಲ್ಲಿ ವಾಸವಿದ್ದ ಅಶ್ರಫ್ ಎಂಬಾತನನ್ನು ಭೇಟಿಯಾದರು. ಬಳಿಕ ಆತ ಒಮನ್‌ನಲ್ಲಿ ಮನೆಗೆಲಸದ ಉದ್ಯೋಗ ಕೊಡಿಸುವ ನೆಪದಲ್ಲಿ ವೇಶ್ಯಾವಾಟಿಕೆಗೆ ಒತ್ತಾಯಿಸಿದ್ದಾನೆ. ನಂತರ 3 ಲಕ್ಷ ರೂ. ಗೆ ಒಮನ್‌ಗೆ ಮಾರಾಟ ಮಾಡುವ ಮೂಲಕ ಏಜೆಂಟ್ ಅಶ್ರಫ್ ಮತ್ತು ನಮಿತಾ ಕಳ್ಳಸಾಗಣೆ ಮಾಡಿದ್ದಾರೆ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.