ಮುಂಬೈ: ಚಿರತೆ ದಾಳಿಯಿಂದ ಮಹಿಳೆಯೊಬ್ಬರು ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ಮುಂಬೈನ ಗೋರೆಗಾಂವ್ನಲ್ಲಿ ನಡೆದಿದೆ. ನಿನ್ನೆ ತಡರಾತ್ರಿ ಗೋರೆಗಾಂವ್ ಪ್ರದೇಶದಲ್ಲಿ ಮಹಿಳೆಯೊಬ್ಬರು ಮನೆ ಪಕ್ಕದಲ್ಲಿನ ಖಾಲಿ ಜಾಗದಲ್ಲಿ ವಿಶ್ರಾಂತಿಗಾಗಿ ಆಗ ತಾನೇ ಕುಳಿತುಕೊಂಡಿದ್ದರು.
ಯಾವುದೇ ಭಯವಿಲ್ಲದೆ ತಂಗಾಳಿಯನ್ನು ಆಸ್ವಾದಿಸುತ್ತಿದ್ದರು. ಅಷ್ಟರಲ್ಲೇ ಹಿಂದಿನಿಂದ ಬಂದ ಚಿರತೆಯೊಂದು ಮಹಿಳೆ ಮೇಲೆ ಇದ್ದಕ್ಕಿದ್ದಂತೆ ಎರಗಿತ್ತು. ನೋಡ ನೋಡುತ್ತಿದ್ದಂತೆ ಚಿರತೆ ದಾಳಿಯಿಂದ ಭೀತಿಗೊಳಗಾದ ಮಹಿಳೆ ಮರುಕ್ಷಣದಲ್ಲೇ ಎಚ್ಚೆತ್ತು ಪ್ರತಿ ದಾಳಿ ಮಾಡಿದ್ದರು.
ಪರಿಣಾಮ ಮಹಿಳೆಯ ಪ್ರತಿರೋಧಕ್ಕೆ ಬೆದರಿ ಅಲ್ಲಿಂದ ಕಾಲ್ಕಿತ್ತಿದೆ. ಈ ಘಟನೆಯಲ್ಲಿ ಮಹಿಳೆಗೆ ಸಣ್ಣ-ಪುಣ್ಣ ಗಾಯಾಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಘಟನೆ ಕುರಿತಾದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದೀಗ ಎಲ್ಲೆಡೆ ವೈರಲ್ ಕೂಡಾ ಆಗುತ್ತಿದೆ.