ನೆಲ್ಲೂರು(ಆಂಧ್ರ ಪ್ರದೇಶ): ನೆಲ್ಲೂರು ಜಿಲ್ಲೆಯ ವರಿಕುಂಟಪಾಡು ಮಂಡಲದಲ್ಲಿ ನಕಲಿ ಮೊಟ್ಟೆಗಳನ್ನು ಖರೀದಿಸಿ ಜನ ಮೋಸ ಹೋಗಿರುವ ಘಟನೆ ಬೆಳಕಿಗೆ ಬಂದಿದೆ. ವರಿಕುಂಟಪಾಡು ಸಮೀಪದ ಆಂಧ್ರವಾರಿ ಎಂಬ ಹಳ್ಳಿಯಲ್ಲಿ ವ್ಯಕ್ತಿಯೊಬ್ಬರು ಆಟೋದಲ್ಲಿ ಮೊಟ್ಟೆಗಳನ್ನು ತಂದು ಮಾರಿದ್ದು, ಅವೆಲ್ಲ ಪ್ಲಾಸ್ಟಿಕ್ ಮೊಟ್ಟೆಗಳು ಎಂಬ ಆರೋಪಗಳು ಕೇಳಿಬಂದಿವೆ.
Fake Eggs: ನೋಡಲು ಮೊಟ್ಟೆಯಂತೆಯೇ, ಆದ್ರೆ ಮೊಟ್ಟೆಯಲ್ಲ.. ಮೋಸ ಹೋದ್ರಾ ನೆಲ್ಲೂರಿನ ಜನ? - ಪ್ಲಾಸ್ಟಿಕ್ ಮೊಟ್ಟೆಗಳ ಮಾರಾಟ
ಸಾಮಾನ್ಯವಾಗಿ ಕೋಳಿ ಮೊಟ್ಟೆಯನ್ನು ಅತಿ ಸುಲಭವಾಗಿ ಗುರುತಿಸಬಹುದು. ದಿನ ನಿತ್ಯದ ಆಹಾರ ಪದಾರ್ಥಗಳಲ್ಲಿ ಮೊಟ್ಟೆಯೂ ಸೇರಿದೆ. ಆದರೆ ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯಲ್ಲಿ ಮೊಟ್ಟೆ ಭಾರಿ ಸುದ್ದು ಮಾಡುತ್ತಿದೆ. ಆಟೋದಲ್ಲಿ ಬಂದಿದ್ದ ವ್ಯಕ್ತಿ ಬಳಿ ಮೊಟ್ಟೆ ಖರೀದಿಸಿದ್ದ ಸ್ಥಳೀಯರು ಮೋಸ ಹೋಗಿದ್ದಾರೆ.
30 ಮೊಟ್ಟೆಗಳಿಗೆ ರೂ. 130 ರೂಪಾಯಿಯಂತೆ ಸ್ಥಳೀಯರು ಖರೀದಿಸಿದ್ದಾರೆ. ಗಂಟೆಗಟ್ಟಲೇ ನೀರಿನಲ್ಲಿ ಕುದಿಸಿದರು ಮೊಟ್ಟೆ ಬೆಂದಿಲ್ಲ. ಇದರಿಂದ ತಾವು ಮೋಸ ಹೋಗಿರುವುದು ಜನರಿಗೆ ಮನವರಿಕೆಯಾಗಿದೆ. ತಾವು ಖರೀದಿಸಿದ ಮೊಟ್ಟೆಗಳಲ್ಲಿ ತುಂಬಾ ವ್ಯತ್ಯಾಸ ಇದೆ ಎಂದು ಜನರು ಆರೋಪಿಸಿದ್ದಾರೆ.
ಮೊಟ್ಟೆಯ ಮೇಲಿನ ಚಿಪ್ಪು ಪ್ಲಾಸ್ಟಿಕ್ ವಸ್ತುವಿನಂತೆ ಇದೆ, ಮೊಟ್ಟೆಯೊಳಗಿನ ಹಳದಿ ಲೋಳೆ ಕೂಡ ವಿಭಿನ್ನವಾಗಿದೆ. ಅವು ನಕಲಿ ಮೊಟ್ಟೆಗಳು ಎನ್ನಲಾಗ್ತಿದೆ. ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ್ದ ಅಧಿಕಾರಿಗಳು ಮೊಟ್ಟೆಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇವು ಎಲ್ಲಿಂದ ಬಂದಿವೆ ಎಂಬುದರತ್ತ ಚಿತ್ತ ಹರಿಸಿದ್ದಾರೆ.