ಕರ್ನಾಟಕ

karnataka

ETV Bharat / bharat

ನಡು ರಸ್ತೆಯಲ್ಲೇ ಹೆಂಡತಿ ಕೊಂದ ಪತಿ.. ಆರೋಪಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಜನ

ಕಿರುಕುಳ ತಾಳಲಾರದೇ ಮಕ್ಕಳೊಂದಿಗೆ ದೂರವಾಗಿದ್ದ ಹೆಂಡತಿಯನ್ನು, ಪತಿ ನಡು ರಸ್ತೆಯಲ್ಲೆ ಕಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಿದ್ದಾನೆ.

husband-brutally-murdered-his-wife
ಮೃತ ಮಹಿಳೆ ಕರೀನಾ ಬೇಗಂ

By

Published : Feb 4, 2023, 4:39 PM IST

ಮೆಹದಿಪಟ್ನಂ (ಹೈದರಾಬಾದ್):ನಡು ರಸ್ತೆಯಲ್ಲೇ ಪತ್ನಿಯನ್ನು ಪತಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿಯ ಲಾಂಗರ್​ಹೌಸ್​ನಲ್ಲಿ ಶುಕ್ರವಾರ ನಡೆದಿದೆ. ಕರೀನಾ ಬೇಗಂ (30) ಮೃತ ಮಹಿಳೆ. ಮಹ್ಮದ್​ ಯೂಸೂಫ್​ ಕೋಲೆ ಮಾಡಿದ ಆರೋಪಿ. ಪತಿ ಯೂಸೂಫ್ ಪತ್ನಿಯ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದ ಪರಿಣಾಮ ಕರೀನಾ ಬೇಗಂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ​

ಸ್ಥಳೀಯರು ಮತ್ತು ಪೊಲೀಸರ ಮಾಹಿತಿ ನೀಡಿರುವ ಪ್ರಕಾರ 7 ವರ್ಷಗಳ ಹಿಂದೆ ಟೋಳಿಚೋವಿಯ ಹಕೀಂಪೇಟೆಯ ಮೊಹಮ್ಮದ್ ಯೂಸೂಫ್​ನನ್ನು ಕರೀನಾ ಬೇಗಂ ಮದುವೆ ಮಾಡಿಕೊಂಡಿದ್ದರು. ದಂಪತಿಗೆ 5, 3 ಮತ್ತು 2 ವರ್ಷದ ಮೂವರು ಮಕ್ಕಳಿದ್ದಾರೆ. ಮದುವೆಯ ನಂತರ ಚೆನ್ನಾಗಿದ್ದ ಪತಿ ಯೂಸೂಫ್​ ಬಳಿಕ ಪತ್ನಿಯೊಂದಿಗೆ ವಿನಾ ಕಾರಣ ಜಗಳವಾಡುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಪತ್ನಿ ಕರೀನಾಗೆ ದಿನವು ಕಿರುಕುಳ ನೀಡುತ್ತಿದ್ದರಂತೆ. ಪತ್ನಿಯ ಕಿರುಕುಳದಿಂದ ಬೇಸತ್ತ ಪತ್ನಿ ಕರೀನಾ ಒಂದೂವರೆ ವರ್ಷದ ಹಿಂದೆ ಮಕ್ಕಳೊಂದಿಗೆ ಪೋಷಕರ ಮನೆ ಸೇರಿದ್ದರು.

ಬಳಿಕ ಮಕ್ಕಳ ಪೋಷಣೆಗಾಗಿ ಮತ್ತು ಮನೆಯ ನಿರ್ವಾಹಣೆಗಾಗಿ ಕರೀನಾ ಬೇಗಂ ಲ್ಯಾಂಗರ್​ಹೌಸ್​ನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪತ್ನಿಯ ಈ ನಿರ್ಧಾರದಿಂದ ಕೋಪಗೊಂಡ ಪತಿ ಯೂಸೂಫ್​ ಕಳೆದ ನಾಲ್ಕೈದು ದಿನಗಗಳಿಂದ ತನ್ನ ಹೆಂಡತಿ ಕರೀನಾಳನ್ನು ಹಿಂಬಾಲಿಸಿ ಚಲನಚಲನಗಳನ್ನು ಗಮನಿಸಿದ್ದಾನೆ. ಎಂದಿನಂತೆ ಶಾಲೆಗೆಂದು ಕರೀನಾ ನಿನ್ನೆ ಬೆಳಗ್ಗೆ 9 ಗಂಟೆಗೆ ಮನೆಯಿಂದ ಹೊರಟಿದ್ದಾರೆ. ಮನೆಯಿಂದ ಸ್ವಲ್ಪ ದೂರ ಹೋಗುತ್ತಿದ್ದಂತೆ ಅಲ್ಲಿ ಪತಿ ಯೂಸೂಫ್​ ಪ್ರತ್ಯಕ್ಷನಾಗಿ ಕರೀನಾಳನ್ನು ಮಾತನಾಡಿಸುವ ನೆಪ ಮಾಡಿ ತಡೆದಿದ್ದಾನೆ.

ಬಳಿಕ ಕರೀನಾ ಮುಂದೆ ನಡೆದು ಹೋಗುವಾಗ ಹಿಂದಿನಿಂದ ಆಕೆ ತಲೆಗೆ ಕಟ್ಟಿಗೆಯಿಂದ ಬಲವಾಗಿ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡ ಕರೀನಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆ ಬಳಿಕ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಆರೋಪಿ ಯೂಸೂಫ್​ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಲಾಂಗರ್‌ಹೌಸ್ ಠಾಣಾ ಇನ್ಸ್‌ಪೆಕ್ಟರ್ ಕೆ.ಶ್ರೀನಿವಾಸ್ ಹೇಳಿದ್ದಾರೆ.

ಇದನ್ನೂ ಓದಿ:ಮದ್ಯಪಾನ ಮಾಡ್ಬೇಡಿ ಎಂದಿದ್ದಕ್ಕೆ ಪತ್ನಿಯನ್ನು ಕೊಂದು ಹಾಕಿದ ಪತಿ

ಮದ್ಯಪಾನ ಮಾಡಬೇಡಿ ಎಂದು ಹೇಳಿದ ಪತ್ನಿಯನ್ನೆ ಕೊಂದ ಪತಿ:ಮತ್ತೊಂದು ಪ್ರಕರಣದಲ್ಲಿ ಮದ್ಯಪಾನ ಮಾಡಬೇಡಿ ಎಂದು ಹೇಳಿದ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಹತ್ಯೆ ಮಾಡಿದ್ದ ಘಟನೆ ಕೆಲದಿನಗಳ ಹಿಂದೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಸೊರಟೂರು ಎಂಬ ಗ್ರಾಮದಲ್ಲಿ ನಡೆದಿತ್ತು. ಗಿರೀಶ್ ಎಂಬ ಆರೋಪಿ ಪತ್ನಿ ಶಿಲ್ಪಳನ್ನು ಹತ್ಯೆ ಮಾಡಿದ್ದ. ಪ್ರತಿನಿತ್ಯ ಆರೋಪಿ ಕುಡಿದು ಮನೆಗೆ ಬರುತ್ತಿದ್ದ ಕಾರಣ ಪತಿಗೆ ಕುಡಿಯದಂತೆ ಪತ್ನಿಗೆ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಪತಿರಾಯ ಆಕೆಯ ಕತ್ತು ಹಿಸುಕಿ ಕೊಲೆ ಮಾಡಿ ಬಳಿಕ ತಲೆ ಮರೆಸಿಕೊಂಡಿದ್ದ. ಪ್ರಕರಣದ ತನಿಖೆ ಆರಂಭಿಸಿದ ಪೊಲೀಸರು ಕೇವಲ 8 ಗಂಟೆಯಲ್ಲೇ ಆರೋಪಿಯನ್ನ ಬಂಧಿಸಿ ಜೈಲಿಗಟ್ಟಿದ್ದರು.

ಇದನ್ನೂ ಓದಿ:ಮಹಿಳೆ ಆಕಸ್ಮಿಕ ಸಾವು ಪ್ರಕರಣ.. ಕುಡಿದ ಮತ್ತಿನಲ್ಲಿ ಗಂಡನಿಂದಲೇ ಪತ್ನಿಯ ಕೊಲೆ

ABOUT THE AUTHOR

...view details