ವಿರುತ್ತುನಗರ (ತಮಿಳುನಾಡು) :ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡದ ಮಹಡಿಯ ಅವಶೇಷಗಳಡಿ ಸಿಲುಕಿ ಕಾರ್ಮಿಕನೋರ್ವ ಸಾವಿಗೀಡಾಗಿರುವ ಘಟನೆ ವಿರುತ್ತುನಗರದಲ್ಲಿ ನಡೆದಿದೆ. ವಿರುತ್ತುನಗರ ಜಿಲ್ಲೆಯ ಶಿವಕಾಶಿಯ ಶಿವಕಾಮಿಪುರಂನ ಪೆರಿಯ ಕರುಪ್ಪನ್ (57) ಮಾಲೀಕತ್ವದ 5 ಕೊಠಡಿಗಳ ಪಟಾಕಿ ಕಾರ್ಖಾನೆಯು ಸತ್ತೂರು-ಕಥಾಲಂಪಟ್ಟಿ ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿತ್ತು.
ಸುಮಾರು 20 ಮಂದಿ ಕೆಲಸ ಮಾಡುವ ಕಾರ್ಖಾನೆಯಲ್ಲಿ ಸೋಲೈ ವಿಘ್ನೇಶ್ವರನ್ ಎಂಬ 26 ವರ್ಷದ ಕಾರ್ಮಿಕ ಬುಧವಾರ ಬೆಳಗ್ಗೆ ರಾಸಾಯನಿಕಗಳನ್ನು ತಯಾರಿಸುತ್ತಿದ್ದ. ಆಗ ರಾಸಾಯನಿಕ ಕಚ್ಚಾವಸ್ತುಗಳಲ್ಲಿ ಘರ್ಷಣೆ ಉಂಟಾಗಿ ಅದು ಸ್ಫೋಟಗೊಂಡಿದೆ.