ಕರ್ನಾಟಕ

karnataka

By

Published : Feb 26, 2022, 4:13 PM IST

ETV Bharat / bharat

10ನೇ ಕ್ಲಾಸ್​​ ಅರ್ಧಕ್ಕೆ ಬಿಟ್ಟು ಕೂಲಿ ಕೆಲಸ ; ಆದ್ರೂ ವಿಮಾನ ತಯಾರಿಕೆಯಲ್ಲಿ ಪ್ರವೀಣ ಈ ಜುನೈದ್​!

ಈ ವಿಮಾನ ಸಿದ್ಧಪಡಿಸಲು ಜುನೈದ್ ಯಾವುದೇ ರೀತಿಯ ತರಬೇತಿ ಪಡೆದುಕೊಂಡಿಲ್ಲ. ಬದಲಾಗಿ ಯೂಟ್ಯೂಬ್​ ನೋಡಿ ಇವುಗಳನ್ನ ಸಿದ್ಧಪಡಿಸಿದ್ದಾನೆ. ಆರಂಭದಲ್ಲಿ ಅನೇಕ ರೀತಿಯ ತೊಂದರೆ ಅನುಭವಿಸಿರುವ ಜುನೈದ್​ ಅದನ್ನ ಮೆಟ್ಟಿ ನಿಂತು ಯಶಸ್ಸು ಕಂಡಿದ್ದಾರೆ..

Junaid is but master in airplane making
Junaid is but master in airplane making

ಮಲಪ್ಪುರಂ(ಕೇರಳ) :ಆರ್ಥಿಕ ತೊಂದರೆ, ಇನ್ನಿತರ ಸಮಸ್ಯೆಗಳಿಂದಾಗಿ ಶಿಕ್ಷಣದಿಂದ ವಂಚಿತವಾದ್ರೂ ಕೂಡ ಬೆರಳೆಣಿಕೆಯಷ್ಟು ಜನರು ತಾವು ಕಂಡಿರುವ ಕನಸು ನನಸು ಮಾಡಿಕೊಳ್ತಾರೆ. ಕೇರಳದ ಯುವಕನೋರ್ವ ಅದೇ ಸಾಲಿಗೆ ಸೇರಿದ್ದು, 10ನೇ ತರಗತಿ ಅರ್ಧಕ್ಕೆ ಬಿಟ್ಟು ಕೂಲಿ ಕೆಲಸ ಮಾಡ್ತಿದ್ದ ಯುವಕ ಇದೀಗ ವಿಮಾನ ತಯಾರಿಕೆಯಲ್ಲಿ ಪ್ರವೀಣ ಎಂದರೆ ಎಲ್ಲರೂ ನಂಬಲೇಬೇಕು.

10ನೇ ಕ್ಲಾಸ್​​ ಅರ್ಧಕ್ಕೆ ಬಿಟ್ಟು ಕೂಲಿ ಕೆಲಸ ; ಆದ್ರೂ ವಿಮಾನ ತಯಾರಿಕೆಯಲ್ಲಿ ಪ್ರವೀಣ ಈ ಜುನೈದ್​!

ಕೇರಳದ ಮಲಪ್ಪುರಂ ಜಿಲ್ಲೆಯ ಚೆಮ್ಮಾಡ್​ನ ಜುನೈದ್​ 10ನೇ ತರಗತಿ ಅರ್ಧಕ್ಕೆ ಬಿಟ್ಟು ಕೂಲಿ ಕಾರ್ಮಿಕನಾಗಿದ್ದ. ಆದರೆ, ಇದೀಗ ಸುಮಾರು 30ಕ್ಕೂ ಅಧಿಕ ರಿಮೋಟ್​​ ಚಾಲಿತ ವಿಮಾನ ತಯಾರಿಸಿದ್ದಾನೆ. ನೋಡಲು ವಾಣಿಜ್ಯ ವಿಮಾನಗಳಂತೆ ಇದ್ದು, ತಾನು ಇರುವ ಸ್ಥಳದಿಂದಲೇ ಇವುಗಳ ನಿಯಂತ್ರಣ ಮಾಡ್ತಾನೆ.

ಯೂಟ್ಯೂಬ್​ ನೋಡಿ ವಿಮಾನ ತಯಾರಿಕೆ :ಈ ವಿಮಾನ ಸಿದ್ಧಪಡಿಸಲು ಜುನೈದ್ ಯಾವುದೇ ರೀತಿಯ ತರಬೇತಿ ಪಡೆದುಕೊಂಡಿಲ್ಲ. ಬದಲಾಗಿ ಯೂಟ್ಯೂಬ್​ ನೋಡಿ ಇವುಗಳನ್ನ ಸಿದ್ಧಪಡಿಸಿದ್ದಾನೆ. ಆರಂಭದಲ್ಲಿ ಅನೇಕ ರೀತಿಯ ತೊಂದರೆ ಅನುಭವಿಸಿರುವ ಜುನೈದ್​ ಅದನ್ನ ಮೆಟ್ಟಿ ನಿಂತು ಯಶಸ್ಸು ಕಂಡಿದ್ದಾರೆ.

ಇದನ್ನೂ ಓದಿರಿ:ದಾಂಪತ್ಯಕ್ಕಿಂತ ದೇಶ ದೊಡ್ಡದು.. ಮದುವೆಯಾದ ಮರುದಿನವೇ ಗನ್​ ಹಿಡಿದು ಉಕ್ರೇನ್​ ರಕ್ಷಣೆಗೆ ನಿಂತ ನವಜೋಡಿ!

ಈ ವಿಮಾನ ನಿರ್ಮಿಸಲು ಥರ್ಮಾಕೋಲ್​, ಸನ್​ ಪ್ಯಾಕೆಟ್​ ಶೀಟ್​, ಸಣ್ಣ ಮೋಟಾರ್​ಗಳ ಬಳಕೆ ಮಾಡಲಾಗಿದ್ದು, ಈ ವಿಮಾನಗಳು 500 ಮೀಟರ್​ಕ್ಕಿಂತಲೂ ದೂರ ಹಾರಬಲ್ಲವು. ಇದೀಗ ಓರ್ವ ವ್ಯಕ್ತಿಯನ್ನ ಹೊತ್ತೊಯ್ಯುವ ವಿಮಾನ ನಿರ್ಮಿಸುವ ಗುರಿ ಹೊಂದಿರುವ ಜುನೈದ್​ ಅದರಲ್ಲಿ ಮಗ್ನರಾಗಿದ್ದಾರೆ.

ABOUT THE AUTHOR

...view details