ಕರ್ನಾಟಕ

karnataka

ETV Bharat / bharat

ಹೈದ್ರಾಬಾದ್​ನಲ್ಲಿವೆ 5.5 ಲಕ್ಷ ಬೀದಿ ನಾಯಿಗಳು; ಅಧಿಕಾರಿಗಳ ಮಾಹಿತಿ! - ಲಕ್ಷ ಬೀದಿ ನಾಯಿಗಳು ಇವೆ ಎಂಬ ಮಾಹಿತಿ

ಹೈದ್ರಾಬಾದ್​ನಲ್ಲಿ ನಿನ್ನೆ ಬೀದಿ ನಾಯಿಗಳ ಹಾವಳಿಗೆ 4 ವರ್ಷದ ಬಾಲಕ ಬಲಿಯಾಗಿದ್ದು, ಇದರಿಂದ ಎಚ್ಚೆತ್ತಿರುವ ಅಧಿಕಾರಿಗಳು ಬೀದಿ ನಾಯಿಗಳ ನಿಯಂತ್ರಣಕ್ಕೆ ಮುಂದಾಗಿದ್ದಾರೆ

a-boy-succumbed-to-the-menace-of-stray-dogs-officers-who-came-forward-for-control
a-boy-succumbed-to-the-menace-of-stray-dogs-officers-who-came-forward-for-control

By

Published : Feb 23, 2023, 5:28 PM IST

ಬೆಂಗಳೂರು: ಹೈದ್ರಾಬಾದ್​ನಲ್ಲಿ ನಾಲ್ಕು ವರ್ಷದ ಬಾಲಕನನ್ನು ಬೀದಿ ನಾಯಿಗಳು ಬಲಿ ಪಡೆದ ಬೆನ್ನಲ್ಲೇ ಅವುಗಳ ನಿಯಂತ್ರಣಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ. ಪ್ರಸ್ತುತ ನಗರದಲ್ಲಿ ಸುಮಾರು 5.50 ಲಕ್ಷ ಬೀದಿ ನಾಯಿಗಳು ಇವೆ ಎಂಬ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.

ಬುಧವಾರ ಹೈದ್ರಾಬಾದ್​ನ ಅಂಬರ್​ಪೇಟ್​ ಪ್ರದೇಶದಲ್ಲಿ ನಾಲ್ಕು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿದ ಭಯಾನಕ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕೂಡ ಗುರಿಯಾಗಿತ್ತು. ಈ ಬೆನ್ನಲ್ಲೇ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಮುಂದಾಗಿದ್ದಾರೆ.

ನಗರಸಭೆ ಆಡಳಿತ ಮತ್ತು ನಗರ ಅಭಿವೃದ್ಧಿಯ ವಿಶೇಷ ಮುಖ್ಯ ಕಾರ್ಯದರ್ಶಿ ಅರವಿಂದ್​​ ಕುಮಾರ್​ ಈ ಸಂಬಂಧ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಗ್ರೇಟರ್​ ಹೈದ್ರಾಬಾದ್​ ಮತ್ತು ಮುನ್ಸಿಪಲ್​ ಕಾರ್ಪೊರೇಷನ್​ (ಜಿಎಚ್​ಎಂಸಿ) ಮಿತಿಯಲ್ಲಿರುವ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ವಿಶೇಷ ಕ್ರಮಕ್ಕೆ ಮುಂದಾಗುವಂತೆ ನಿರ್ದೇಶಿಸಿದ್ದಾರೆ.

ಈ ಸಂಬಂಧ ಜಿಎಚ್​ಎಂಸಿ ಅಧಿಕಾರಿಗಳು ಮಾಹಿತಿ ನೀಡಿದ್ದು, 2011ರಲ್ಲಿ ನಗರದಲ್ಲಿ 8.50 ಲಕ್ಷ ಬೀದಿ ನಾಯಿಗಳಿದ್ದವು. ಇದಾದ ಬಳಿಕ ಇದರ ನಿಯಂತ್ರಣಕ್ಕೆ ಕಾರ್ಯಾಚರಣೆ ನಡೆಸಲಾಯಿತು. ಇದರ ಪರಿಣಾಮ ಇದರ ಸಂಖ್ಯೆಯಲ್ಲಿ ಕಡಿಮೆಯಾಗಿದ್ದು, ಇದೀಗ ಜಿಎಚ್​ಎಂಸಿಯಲ್ಲಿ 5.5 ಲಕ್ಷ ನಾಯಿಗಳಿವೆ. ಇದೀಗ ಪ್ರಾಣಿಗಳ ಜನನ ನಿಯಂತ್ರಣಕ್ಕೆ (ಎಬಿಸಿ) ತಕ್ಷಣಕ್ಕೆ ಕ್ರಮ ಕೈಗೊಳ್ಳಬೇಕಿದೆ ಎಂದರು.

ತ್ಯಾಜ್ಯ ನಿರ್ವಹಣೆಗೆ ಕ್ರಮ: ಜಿಎಚ್​ಎಂಸಿಯ ವ್ಯಾಪ್ತಿಯಲ್ಲಿರುವ ಹೋಟೆಲ್​, ರೆಸ್ಟೋರೆಂಟ್​, ಫಂಕ್ಷನ್​ ಹಾಲ್​, ಚಿಕನ್​ ಮತ್ತು ಮಟನ್​ ಸೆಂಟರ್​ಗಳಿಗೆ ಬೀದಿಯಲ್ಲಿ ತ್ಯಾಜ್ಯವನ್ನು ಹಾಕಬೇಡಿ ಎಂದು ಸೂಚನೆ ನೀಡಲಾಗಿದೆ. ಬೀದಿಯಲ್ಲಿ ತ್ಯಾಜ್ಯ ಹಾಕುವುದರಿಂದ ಬೀದಿ ನಾಯಿಗಳ ಸಂಖ್ಯೆ ಹೆಚ್ಚಲು ಕಾರಣವಾಗಿದೆ. ತ್ಯಾಜ್ಯ ವಿಲೇವಾರಿಗೆ ಅಸಮರ್ಪಕ ಕ್ರಮ ಅನುಸರಿಸುವುದು ಕೂಡ ಇದಕ್ಕೆ ಕಾರಣವಾಗಿದೆ. ಜೊತೆಗೆ ನಗರದ ಸರ್ಕಾರಿ ಮತ್ತು ಖಾಸಗಿ ಶಾಲೆಗಳಲ್ಲಿ ತೊಗಲು ಗೊಂಬೆ ಆಟ ಮತ್ತು ಹೋರ್ಡಿಂಗ್​ ಮೂಲಕ ಜಾಗೃತಿ ಕಾರ್ಯಕ್ರಮವನ್ನು ಕೈಗೊಳ್ಳಲು ಸಲಹೆ ನೀಡಲಾಗಿದೆ.

ಒಕ್ಕೂಟಗಳ ಸಹಕಾರದೊಂದಿಗೆ ನಿಯಂತ್ರಣ: ಕೊಳಗೇರಿ ಅಭಿವೃದ್ಧಿ ಒಕ್ಕೂಟ, ನಗರ ಅಭಿವೃದ್ಧಿ ಒಕ್ಕೂಟ ಮತ್ತು ರೆಸಿಡೆಂಟ್​ ಕಾಲೋನಿ ವೆಲ್​ಫೇರ್​ ಅಸೋಸಿಯೇಷನ್​ ನ ಸಹಾಯದಿಂದ ಬೀದಿ ನಾಯಿಗಳ ನಿಯಂತ್ರಣ ಸಂಬಂಧ ಸಲಹೆ ನೀಡಲಾಗಿದೆ. ರಾಜ್ಯದ ಇತರೆ ನಗರಸಭೆಗಳಲ್ಲಿ ಕೂಡ ಸ್ವ ಸಹಾಯಗಳ ಗುಂಪಿನೊಂದಿಗೆ ನಿಯಂತ್ರಣ ಕ್ರಮಕ್ಕೆ ಮುಂದಾಗಲಾಗುವುದು.

ನಗರ ಮತ್ತು ಸುತ್ತಮುತ್ತಲಿನ ಮುನ್ಸಿಪಾಲಿಟಿ ಸಾಕುನಾಯಿಗಳ ನೋಂದಣಿಗಾಗಿ ಪ್ರತ್ಯೇಕ ಮೊಬೈಲ್​ ಆ್ಯಪ್​ ತಯಾರು ಮಾಡಲಾಗುತ್ತಿದೆ. ಈ ನೋಂದಣಿ ಅನುಸಾರ ಅವರಿಗೆ ಮಾಲೀಕತ್ವದ ಗುರುತಿನ ಚೀಟಿ ನೀಡಲಾಗುವುದು. ಈ ಸಂಬಂಧ ದೂರುಗಳನ್ನು ದಾಖಲಿಸಲು ಜಿಎಚ್​ಎಂಸಿ ಆ್ಯಪ್​ ಮೊರೆ ಹೋಗಬಹುದಾಗಿದೆ ಎಂದು ಅರವಿಂದ್​ ಕುಮಾರ್​ ಮಾಹಿತಿ ನೀಡಿದರು.

ಕಳೆದೊಂದು ವರ್ಷದಲ್ಲಿ ಬೀದಿ ನಾಯಿ ಹಾವಳಿಗೆ ತುತ್ತಾಗಿ ಸಾವನ್ನಪ್ಪಿದ ಎರಡನೇ ಪ್ರಕರಣ ಇದಾಗಿದೆ. ಕಳೆದ 2022ರಲ್ಲಿ ಏಪ್ರಿಲ್​ನಲ್ಲಿ ಗೋಲ್ಗೊಂಡದಲ್ಲಿ ಎರಡು ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿ, ಬಲಿ ಪಡೆದಿದ್ದವು.

ಇದನ್ನೂ ಓದಿ: 500 ಕೆಜಿ ಈರುಳ್ಳಿಗೆ ಸಿಕ್ಕಿದ್ದು ಬರೇ 2 ರೂಪಾಯಿ ಚೆಕ್!​ ಬೆಲೆ ಕುಸಿತದಿಂದ ತತ್ತರಿಸಿದ ರೈತ

ABOUT THE AUTHOR

...view details